ಅಕ್ಕರೆಗಾಗಿ ಹಕ್ಕರಿಕೆ ಸೊಪ್ಪು ಸೇವಿಸಿ..!

ಅಕ್ಕರೆಗಾಗಿ ಹಕ್ಕರಿಕೆ ಸೊಪ್ಪು ಸೇವಿಸಿ..!

ಹುಲ್ಲು ಹುಲ್ಲಾಗಿರುವ ಅಗಲವಾದ ಎಲೆಗಳನ್ನು ಬಿಡುವ ಸೊಪ್ಪು ಇದು. ಉತ್ತರ ಕರ್ನಾಟಕದ ಭಾಗದಲ್ಲಿ ಬೆಳೆಗಳ ಮಧ್ಯೆದಲ್ಲಿ ತನ್ನಿಂದ ತಾನಾಗಿಯೇ ಹುಟ್ಟಿ ಬೆಳೆಯುವ ಸೊಪ್ಪು ಇದಾಗಿದೆ. ಅದು ಯಾವ ಸೊಪ್ಪು ಗೊತ್ತಾ… ಅದೇನೇ  ಉತ್ತರ ಕರ್ನಾಟಕದಲ್ಲಿ ಮನೆಮಾತಾಗಿರುವ ಹಕ್ಕರಿಕೆ ಸೊಪ್ಪು.

ಹೌದು, ಹೊಲದಲ್ಲಿ ಕೆಲಸ ಮಾಡುವ ರೈತರು ಇದನ್ನು ಊಟದ ಜೊತೆಗಿನ ಸೈಡ್ಸ್ ಆಗಿ ಬಳಕೆ ಮಾಡುತ್ತಾರೆ. ಇದರ ಹುಟ್ಟುವಿನ ಸತ್ಯ ಕೇಳಿದರೆ ನೀವೇ ಬೆರಗಾಗ್ತೀರಾ? ಇದನ್ನು ಯಾವುದೆ ಬೀಜ ಬಿತ್ತನೆ ಮಾಡಿ ಬೆಳೆಯುವುದಿಲ್ಲ ಮತ್ತು ಇತರೆ ಮೂಲಗಳಂತೆ ನಾಟಿ ಮಾಡಿ ಸಹ ಬೆಳೆಯಲಾಗುವುದಿಲ್ಲ. ಬದಲಾಗಿ ಇದು ರೈತರು ಬೆಳೆದ ಬೆಳೆಗಳ ಮಧ್ಯೆ ಕಳೆಯ ರೂಪದಲ್ಲಿ ತಾನಾಗಿಯೇ ಬೆಳೆಯತ್ತದೆ. ಇದನ್ನು ಯಾವುದೇ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದಿಲ್ಲ ಬದಲಾಗಿ ಇತ್ತೀಚಿನ ದಿನಮಾನಗಳಲ್ಲಿ ಇದರ ಮಹತ್ವ ತಿಳಿದ ಜನರು ತಮ್ಮ ಮನೆಗಳ ಮುಂಭಾಗದಲ್ಲಿ ಬೆಳೆದು ತಿನ್ನುತ್ತಾರೆ.

ಇನ್ನು ನಮ್ಮ ಆಡು ಭಾಷೆಯಲ್ಲಿ ಹಕ್ಕರಿಕೆ ಸೊಪ್ಪು ಎಂದು ಕರೆದರೆ ಇಂಗ್ಲೀಷ್ ಭಾಷೆಯಲ್ಲಿ ದಾಂಡೇಲೀಯನ್ ಗ್ರೀನ್ಸ್ ಎನ್ನುವರು. ಈ ಸೊಪ್ಪಿನ ಎಲೆಗಳು ಅತೀ ಹೆಚ್ಚಾಗಿ ಪ್ರೋಟೀನ್ ಅಂಶವನ್ನೊಳಗೊಂಡಿದೆ. ಎಲೆ ಮತ್ತು ಬೇರಿನಲ್ಲಿ ವಿಟಮಿನ್ ಸಿ, ಇ ಮತ್ತು ಕಬ್ಬಿಣಾಂಶದ ಜೊತೆಗೆ ರೋಗ ನಿರೋಧಕ ಗುಣವನ್ನು ಹೊಂದಿದೆ ಹಾಗೂ ರಕ್ತದ ಪ್ರಮಾಣವನ್ನು ಹೆಚ್ಚಿಸಿ, ನಿದ್ದೆ ಬರುವಂತೆ ಮಾಡುತ್ತದೆ ಎಂದು ವೈಧ್ಯರು ಹೇಳುತ್ತಾರೆ. ಜೀರ್ಣಕ್ರಿಯೆ ಮತ್ತು ಚರ್ಮದ ಸಮಸ್ಯೆಗಳ ನಿವಾರಣೆಗೆ ಇದು ಸಹಾಯ ಮಾಡುತ್ತದೆ.

ಬೇರಿನಿಂದ ಚಿಗುರಿನವರೆಗೂ ಔಷಧಿಯ ಗುಣಗಳನ್ನು ಹೊಂದಿರುವ  ಹಕ್ಕರಿಕೆ ಸೊಪ್ಪಿನ ಮಹತ್ವದ ಬಗ್ಗೆ ಕೇಳಿದರೆ ಊಟದ ಬದಲು ಸೊಪ್ಪನ್ನೆ ತಿಂದು ಬದುಕಬೇಕು ಅನ್ನಿಸುತ್ತದೆ ಅಲ್ಲವೇ? ನಮ್ಮೆಲ್ಲರ ಅಕ್ಕರೆಗಾಗಿ ಹಕ್ಕರಿಕೆ ಸೊಪ್ಪನ್ನು ಸೇವಿಸಿ.

ಉತ್ತರ ಕರ್ನಾಟಕ ಭಾಗದ ಮಂದಿ ಇದನ್ನು ರೊಟ್ಟಿ ಜೊತೆ ಮೆಂತ್ಯ ಸೊಪ್ಪು, ಮೂಲಂಗಿ ಸೊಪ್ಪು, ಮತ್ತು ಹಕ್ಕರಿಕೆ ಸೊಪ್ಪನ್ನು ಹೆಚ್ಚಾಗಿ ತಿನ್ನುವುದರಿಂದ ದೇಹದಲ್ಲಿರುವ ಹಲವಾರು ರೋಗಗಳಿಗೆ ಇದು ಮನೆ ಮದ್ದಾಗಿದೆ ಎಂದು ಉತ್ತರ ಕರ್ನಾಟಕ ಮಂದಿ ನಂಬುತ್ತಾರೆ.

ರೈತರು ಜಮೀನಿನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಊಟ ಮಾಡುವ ಹೊತ್ತಿನಲ್ಲಿ ಈ ಸೊಪ್ಪನ್ನು ತಾಜಾ ತಾಜಾವಾಗಿ ಕಿತ್ತುಕೊಂಡು ತಿನ್ನುತ್ತಾರೆ. ಇದರಿಂದ ತಾಜಾತನದಿಂದ ತುಂಬಿರುವ ಸೊಪ್ಪನ್ನು ಸೇವಿಸಿದರೆ ನಮ್ಮ ಆರೋಗ್ಯಕ್ಕೆ ತುಂಬಾ ಉಪಾಯ ಕಾರಿ ಎಂದು ವೈದ್ಯರು ತಿಳಿಸುತ್ತಾರೆ

Related