ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಮತ್ತೊಂದು ಹೆಜ್ಜೆ ಇಟ್ಟ ಕೇಂದ್ರ, ರಾಜ್ಯ ಸರ್ಕಾರ

ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಮತ್ತೊಂದು ಹೆಜ್ಜೆ ಇಟ್ಟ ಕೇಂದ್ರ, ರಾಜ್ಯ ಸರ್ಕಾರ

ಬೆಂಗಳೂರು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಮತ್ತೊಂದು ಮಾಸ್ಟರ್ ಪ್ಲಾನ್ ಮಾಡಿದೆ. ಮಹಿಳಾ ಪ್ರಯಾಣಿಕರು ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ ಯಾವುದೇ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಇದೀಗ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಒಂದು ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ ಕನ್ನಡ ವಾತಾವರಣವನ್ನು ನಿರ್ಮಾಣ ಮಾಡುವುದು ಅತ್ಯಂತ ಅವಶ್ಯಕ: ಸಿಎಂ

ಹೌದು, ಕೇಂದ್ರ ಸರ್ಕಾರದ ನಿರ್ಭಯ ಯೋಜನೆ ಅಡಿಯಲ್ಲಿ ಸಾರಿಗೆ ಇಲಾಖೆ ಮುಖ್ಯ ಕಚೇರಿಯಲ್ಲಿ 24/7 ಕೆಲಸ ಮಾಡುವ ಕಾಲ್ ಸೆಂಟರ್ ಅನ್ನು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ರಿಬ್ಬನ್ ಕಟ್ ಮಾಡುವ ಮೂಲಕ ಓಪನ್ ಮಾಡಿದ್ದಾರೆ.

ಜಿಪಿಎಸ್ ಪ್ಯಾನಿಕ್ ಬಟನ್ ಹಾಕಿಸಿಕೊಂಡಿರುವ ವಾಹನಗಳ ಚಲನವಲನಗಳ ಮೇಲೆ ಕಣ್ಣಿಡಲಾಗುತ್ತದೆ‌‌. ಇತ್ತೀಚೆಗೆ ಓಲಾ ಉಬರ್ ಮತ್ತು ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವುದು ಮತ್ತು ಆಕ್ಸಿಡೆಂಟ್, ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ವು. ಇದನ್ನು ತಡೆಗಟ್ಟಲು ರಾಜ್ಯ ಸಾರಿಗೆ ಇಲಾಖೆ ರಾಜ್ಯದ ಸುಮಾರು 6 ಲಕ್ಷ ಯೆಲ್ಲೋ ಬೋರ್ಡ್ ವಾಹನಗಳಿಗೆ ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಸಲು ಆದೇಶ ನೀಡಿದೆ. ಸೆಪ್ಟೆಂಬರ್ 10 ರೊಳಗೆ ಎಲ್ಲಾ ವಾಣಿಜ್ಯ ಬಳಕೆ ವಾಹನಗಳಿಗೆ ಹಾಕಿಸಿಕೊಳ್ಳಲು ಡೆಡ್ಲೆನ್ ನೀಡಲಾಗಿದೆ.

ಈ ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ನಿಂದ ವಾಹನ ಎಲ್ಲಿದೆ, ಯಾವ ರೂಟ್ ನಲ್ಲಿ ಸಂಚಾರ ಮಾಡುತ್ತಿದೆ ಅನ್ನೋ ಸಂಪೂರ್ಣ ಮಾಹಿತಿಯನ್ನು ಆರ್​​ಟಿಓ ಕಂಟ್ರೋಲ್ ರೂಮ್​ಗೆ ನೀಡುತ್ತದೆ. ಕೂಡಲೇ ಪ್ಯಾನಿಕ್ ಬಟನ್ ಪ್ರೆಸ್ ಮಾಡಿದ ಮಹಿಳೆಯರು ಇರುವ ಹತ್ತಿರ ಪೊಲೀಸ್ ಸ್ಟೇಷನ್ ಗೆ ಆರ್​ಟಿಓ ಕಂಟ್ರೋಲ್ ರೂಮ್ ನಿಂದ ಮಾಹಿತಿ ನೀಡಲಾಗುತ್ತದೆ. ನಂತರ ಸ್ಥಳೀಯ ಪೊಲೀಸ್ ಸ್ಟೇಷನ್​ನಿಂದ ಪೋಲಿಸರು ಆ ಸ್ಥಳಕ್ಕೆ ಹೊಯ್ಸಳ, ಪೊಲೀಸ್ ಜೀಪ್ ಮೂಲಕ ಆಗಮಿಸಿ ರಕ್ಷಣೆ ನೀಡುತ್ತಾರೆ.

ಇನ್ನೂ ರಾಜ್ಯದ ಆರು ಲಕ್ಷ ವಾಹನಗಳ ಪೈಕಿ ಸದ್ಯ 1,085 ವಾಹನಗಳಿಗೆ ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಸಿಕೊಳ್ಳಲಾಗಿದೆ. ಕೆಎಸ್ಆರ್​ಟಿಸಿ ಬಸ್ಸು, ಬಿಎಂಟಿಸಿ ಬಸ್ಸು, ಕ್ಯಾಬ್, ಖಾಸಗಿ ಬಸ್ಸು ಸೇರಿದಂತೆ ಎಲ್ಲಾ ವಾಹನಗಳ ಸಂಪೂರ್ಣ ಲೈವ್ ಲೋಕೆಷನ್ ಡ್ರೈವರ್ ಮತ್ತು ಮಾಲೀಕನ ಪೋನ್ ನಂಬರ್, ಮನೆ ವಿಳಾಸ ಎಲ್ಲಾವು ಲಭ್ಯವಾಗುತ್ತದೆ.

 

Related