ಹಾವೇರಿ-ಗದಗ ಕ್ಷೇತ್ರದಲ್ಲಿ ಬೊಮ್ಮಾಯಿ ಗೆಲುವು..!

ಹಾವೇರಿ-ಗದಗ ಕ್ಷೇತ್ರದಲ್ಲಿ ಬೊಮ್ಮಾಯಿ ಗೆಲುವು..!

ಹಾವೇರಿ: ಲೋಕಸಭಾ ಚುನಾವಣೆ 2024 ಸಾಲಿನ ಚುನಾವಣೆ ಫಲಿತಾಂಶ ಇಂದು ಹೊರ ಬೀಳುತ್ತಿದ್ದು ಇಡೀ ದೇಶದ ಜನರ ಚಿತ್ತ ಚುನಾವಣೆಯ ಫಲಿತಾಂಶದತ್ತ ಆಗಿದೆ.

ಇನ್ನು ಹಾವೇರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಈ ಬಾರಿ ಬಹುಮತಗಳಿಂದ ಮುನ್ನಡೆ ಸಾಧಿಸುತ್ತಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಜೆಡಿಎಸ್..!

ಹೌದು, ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಹಾವೇರಿ ಕ್ಷೇತ್ರ ಬಾರಿ ಕುತೂಹಲ ಕೆರಳಿಸಿದೆ. ಈಗಾಗಲೇ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಬಹುಮತಗಳಿಂದ ಗೆಲುವನ್ನು ಸಾಧಿಸಲು ದಾಪುಗಾಲು ಇಡುತ್ತಿದ್ದಾರೆ.

ಮಾಹಿತಿಗಳ ಪ್ರಕಾರ ಬಸವರಾಜ್ ಬೊಮ್ಮಾಯಿ ಅವರೇ ಗೆಲುವಿನ ನೆಗೆಯನ್ನು ಬೀರಲಿದ್ದಾರೆ ಎಂದು  ತಿಳಿದು ಬಂದಿದ್ದು, ಕೇವಲ ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ. ಇನ್ನುಈ ಬಾರಿ ಹಾವೇರಿ ಮತ್ತು ಗದಗ ಲೋಕಸಭಾ ಕ್ಷೇತ್ರದ ಜನತೆ ಬಿಜೆಪಿ ಪಕ್ಷದ ಅಭ್ಯರ್ಥಿ ಕೈಡಿದಿದ್ದಾರೆ.

ಹಾವೇರಿ ಲೋಸಕಭಾ ಕ್ಷೇತ್ರ ವಿಂಗಡಣೆ ಬಳಿಕ 2009ರಿಂದ 2019ರ ವರೆಗೂ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ (BJP) ಅಭ್ಯರ್ಥಿ ಶಿವಕುಮಾರ ಉದಾಸಿ ಗೆಲ್ಲುತ್ತಾ ಬಂದಿದ್ದರು. ಈ ಬಾರಿ ಮಾಜಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪರ್ಧಿಸಿದ್ದಾರೆ. ಅವರಿಗೆ ಪ್ರತಿ ಸ್ಪರ್ಧಿಯಾಗಿ ಕ್ರಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರ ಮಠ ಸ್ಪರ್ಧಿಸಿದ್ದಾರೆ.

 

Related