ಕಂಗನಾ ರಣಾವತ್ ಗೆ ಭರ್ಜರಿ ಜಯ

ಕಂಗನಾ ರಣಾವತ್ ಗೆ ಭರ್ಜರಿ ಜಯ

ಮಂಡಿ: ಇಡೀ ದೇಶದಲ್ಲಿ ಇಂದು ಲೋಕಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಮೊದಲ ಚುನಾವಣೆಯಲ್ಲಿ ನಟಿ ಕಂಗನಾ ರಣಾವತ್ ಜಯಭೇರಿಯನ್ನು ಸಾಧಿಸಿದ್ದಾರೆ.

ಹೌದು, ಲೋಕಸಭಾ ಚುನಾವಣೆ 2024ನೇ ಸಾಲಿನಲ್ಲಿ ನಟಿ ಕಂಗನಾ ರಣಾವತ್ ಅವರು ಹಿಮಾಚಲ ಪ್ರದೇಶದ ಲೋಕಸಭಾ ಚುನಾವಣೆಯಲ್ಲಿ ಬರುವಂತಹ ಮಂಡಿ ಕ್ಷೇತ್ರದ ಮೂಲಕ ಬಿಜೆಪಿ ಅಭ್ಯರ್ಥಿಯಾಗಿ ನಟಿ ಕಂಗನಾ ರಣಾವತ್ ಜಯಭೇರಿಯನ್ನು ಸಾಧಿಸಿದ್ದಾರೆ.

ಇನ್ನು ಕಂಗನಾ ರಣಾವತ್ 516382 ಮತಗಳನ್ನು ಪಡೆಯುವ ಮೂಲಕ 71663 ಅಂತರದಿಂದ ಮುನ್ನಡೆಯಲ್ಲಿದ್ದಾರೆ. ಐಎನ್‌ಸಿಯ ವಿಕ್ರಮಾದಿತ್ಯ ಸಿಂಗ್ ಅವರು 444719 ಮತಗಳೊಂದಿಗೆ ಹಿಂದುಳಿದಿದ್ದಾರೆ. ಇದನ್ನೂ ಓದಿ: ಗೋವಿಂದ ಕಾರಜೋಳಗೆ ಭರ್ಜರಿ ಗೆಲುವು

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಂಗನಾ ರಣಾವತ್, ಮಂಡಿಯು ಹೆಣ್ಣುಮಕ್ಕಳ ಅವಮಾನಗಳನ್ನು ಸಹಿಸುವುದಿಲ್ಲ. ಇದು ನನ್ನ ‘ಜನ್ಮಭೂಮಿ. ನಾನು ಪ್ರಧಾನಿ ನರೇಂದ್ರ ಮೋದಿಯ ಹೆಸರಿನಲ್ಲೇ ಗೆಲುವು ಕಂಡಿದ್ದೇನೆ. ನಾನು ಇಲ್ಲಿ ಜನರ ಸೇವೆಯನ್ನು ಮುಂದುವರಿಸುತ್ತೇನೆ. ಹಾಗಾಗಿ, ನಾನು ಗೆದ್ದ ಬಳಿಕ ಮುಂಬೈಗೆ ಹೋಗುತ್ತಿಲ್ಲ. ನಾನು ಎಲ್ಲಿಯೂ ಹೋಗುವುದಿಲ್ಲ. ನನ್ನ ಪ್ರತಿಸ್ಪರ್ಧಿ ತಮ್ಮ ಬ್ಯಾಗ್ ಪ್ಯಾಕ್ ಮಾಡಿಕೊಳ್ಳುವ ಮೂಲಕ ಇಲ್ಲಿಂದ ಹೊರಡಬಹುದು ಎಂದು ಹೇಳುವ ಮೂಲಕ ಬಾಲಿವುಡ್​ಗೆ ಗುಡ್​ಬೈ ಹೇಳುವ ಸೂಚನೆ ನೀಡಿದ್ದಾರೆ.

Related