ಗೋವಿಂದ ಕಾರಜೋಳಗೆ ಭರ್ಜರಿ ಗೆಲುವು

ಗೋವಿಂದ ಕಾರಜೋಳಗೆ ಭರ್ಜರಿ  ಗೆಲುವು

ಚಿತ್ರದುರ್ಗ: ಇಂದು (ಜೂನ್‌ 04 ಮಂಗಳವಾರ) ದೇಶದಾದ್ಯಂತ ಲೋಕಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಪಕ್ಷವು 17 ಕ್ಷೇತ್ರಗಳಲ್ಲಿ ಜಯಭೇರಿಯನ್ನು ಸಾಧಿಸಿದೆ. ಇದನ್ನೂ ಓದಿ: ಬೆಂಗಳೂರು ಸೆಂಟ್ರಲ್; ಪಿ. ಸಿ. ಮೋಹನ್ ಗೆಲುವು

ಇನ್ನು ಕೋಟೆ ನಾಡು ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಗೋವಿಂದ ಕಾರಜೋಳ ಅವರು ಭರ್ಜರಿ ಗೆಲುವನ್ನು ಸಾಧಿಸಿದ್ದಾರೆ.

ಹೌದು, ಗೋವಿಂದ ಕಾರಜೋಳ ಅವರು ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರ ವಿರುದ್ಧ 42,046 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಚಂದ್ರಪ್ಪ ಅವರಿಗೆ ಒಟ್ಟಾರೆ 62,0194 ಮತಗಳು ಸಿಕ್ಕಿದ್ದು, ಗೋವಿಂದ ಕಾರಜೋಳ ಅವರಿಗೆ 6,62,240 ಮತಗಳು ಸಿಕ್ಕಿವೆ.

ಏಪ್ರಿಲ್ 26ರಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆಯ ಮತದಾನ ನಡೆದಿದ್ದು, ಈ ಬಾರಿಯ ಲೋಕ ಸಮರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್ ಚಂದ್ರಪ್ಪ ಹಾಗೂ ಎನ್‌ಡಿ ಎ. ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಮತದಾನ ನಡೆದು ಬರೋಬ್ಬರಿ 38 ದಿನಗಳು ಕಳೆದಿದ್ದು ಇಂದು ಫಲಿತಾಂಶ ಹೊರಬಿದ್ದಿದೆ.

Related