ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನ ಬೆಡಗಿ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನ ಬೆಡಗಿ

ಮುಂಬೈ: ಬಾಲಿವುಡ್ ನ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳೆಯ ಝಹೀರ್​ ಇಖ್ಬಾಲ್ ಜೊತೆ ಸೋನಾಕ್ಷಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಹೌದು, ಬಾಲಿವುಡ್ ನ ಬೆಡಗಿ ಸೋನಾಕ್ಷಿ ನಿನ್ನೆ ಮುಂಬೈನಲ್ಲಿ ಕುಟುಂಬ ಮತ್ತು ಆಪ್ತರ ಸಮ್ಮುಖದಲ್ಲಿ ರಿಜಿಸ್ಟರ್ ಮ್ಯಾರೇಜ್ ಆಗಿ ನಂತರ ಅದ್ದೂರಿಯಾಗಿ ಮದುವೆಯಾಗಿದ್ದಾರೆ.

ಇನ್ನು ಮದುವೆಯಾಗಿರೋ ಫೋಟೋಗಳನ್ನು ತಮ್ಮInstagram ಖಾತೆಯಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಶುಭಾಶಯಗಳು ಹೋಮ ಳಿಯನ್ನು ಸುರಿಸಿದ್ದಾರೆ.

ವಿಶೇಷ ಏನೆಂದರೆ, ಸೋನಾಕ್ಷಿ ಸಿನ್ಹಾ ಮತ್ತು ಝಹೀರ್​ ಇಖ್ಬಾಲ್​ ಅವರದ್ದು 7 ವರ್ಷಗಳ ಹಿಂದಿನ ಪ್ರೀತಿ. ತಮ್ಮಿಬ್ಬರ ಪ್ರೇಮ್​ ಕಹಾನಿ ಬಗ್ಗೆ ಅವರು ಸಾಧ್ಯವಾದಷ್ಟು ಗೌಪ್ಯತೆ ಕಾಪಾಡಿಕೊಂಡಿದ್ದರು. ಈಗ ಅವರು ಜೀವನದಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ಅಂದಹಾಗೆ, 7 ವರ್ಷಗಳ ಹಿಂದೆ ಪ್ರೀತಿ ಚಿಗುರಿದ ಈ ದಿನಾಂಕದಲ್ಲೇ (ಜೂನ್​ 23) ಅವರು ಮದುವೆ ಮಾಡಿಕೊಂಡಿದ್ದಾರೆ.

 

Related