ಮುಂಗಾರು ಮಳೆ ಮುಂಚೆಯೇ ಎಚ್ಚೆತ್ತುಕೊಂಡ ಬಿಬಿಎಂಪಿ

ಮುಂಗಾರು ಮಳೆ ಮುಂಚೆಯೇ ಎಚ್ಚೆತ್ತುಕೊಂಡ ಬಿಬಿಎಂಪಿ

ಬೆಂಗಳೂರು: ಕಳೆದ ಬಾರಿ ರಾಜ್ಯದಲ್ಲಿ ಸರಿಯಾಗಿ ಮಳೆ ಬಾರದಿದ್ದ ಕಾರಣ ಬರಗಾಲ ಉಂಟಾಗಿದೆ. ನೀರಿಲ್ಲದೆ ಜನ ಪರದಾಡುವಂಥ ಪರಿಸ್ಥಿತಿ ಬಂದೊದಗಿದ್ದು, ರಾಜ್ಯದಲ್ಲಿ ಈ ವಾರ ಅಲ್ಲಲ್ಲಿ ಮಳೆಯಾಗಿದೆ. ಇನ್ನು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಮುಂಗಾರು ಮಳೆ ಆಗುವ ಮುನ್ಸೂಚನೆಯನ್ನು ಹವಮಾನ ಇಲಾಖೆ ಈಗಾಗಲೇ ನೀಡಿದ್ದು, ಇದರ ಪ್ರಯುಕ್ತ ಬಿಬಿಎಂಪಿ ಅಧಿಕಾರಿಗಳು ರಾಜ ಕಾಲುವೆ ಇನ್ನಿತರ ಕಾಲುವೆಗಳನ್ನು ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ರಾಜ್ಯದಲ್ಲಿ ಮುಂಗಾರು ಪ್ರಾರಂಭವಾಗುವ ಅವಧಿಯು ಸಮೀಪಿಸಿದ್ದು, ಈ ಮುಂಗಾರಿನಿಂದ ಆಗುವ ಮಳೆ ಹಾನಿ ತಡೆಗಟ್ಟಲು 15 ದಿನಗಳ ಕಾಲ “ಮಾಸಾರ್ಧ ಸ್ವಚ್ಛತಾ ಕಾರ್ಯಕ್ರಮ” ಹಮ್ಮಿಕೊಳ್ಳಲಾಗಿದೆ.

ಮುಂಗಾರು ಪೂರ್ವ ಆರಂಭದ ಹಿನ್ನೆಲೆ ಈಗಾಗಲೇ ರಾಜಕಾಲುವೆಗಳಲ್ಲಿ ಹೂಳೆತ್ತುವುದು, ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳ ರಸ್ತೆ ಬದಿಯ ತೊಳು ಚರಂಡಿ ಗಳನ್ನು ಸ್ವಚ್ಛಗೊಳಿಸುವುದು, ವಾರ್ಡ್ ಮಟ್ಟದಲ್ಲಿ ಈಗಾಗಲೇ ಗುರುತಿಸಲಾಗಿರುವ ಸಂಪರ್ಕ ಚರಂಡಿಗಳಗಳಿಂದ ಹೂಳೆತ್ತುವುದು ಹಾಗೂ ಇತರೆ ಮುಂಜಾಗೃತ ಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿರುತ್ತದೆ.

ಮುಂದುವರಿದು, ಹೆಚ್ಚಿನ ಸ್ವಚ್ಛತಾ ಕಾರ್ಯ ನಡೆಸುವ ಕಾರಣ ಆಯಾ ವಲಯ ವ್ಯಾಪ್ತಿಯ ಮುಖ್ಯ ಅಭಿಯಂತರರ ನೇತೃತ್ವದ ತಂಡವು ತಮ್ಮ ಅಧೀನದ ತಾಂತ್ರಿಕ ಸಿಬ್ಬಂದಿಯೊಂದಿಗೆ ಪ್ರತಿನಿತ್ಯ ಮುಂಗಾರು ಪೂರ್ವ “ಮಾಸಾರ್ಧ ಸ್ವಚ್ಛತಾ ಕಾರ್ಯಕ್ರಮ”ಅನ್ನು ಹಮ್ಮಿಕೊಳ್ಳಲು ಸೂಚಿಸಲಾಗಿದೆ. ಅದರಂತೆ ಇಂದಿನಿಂದ ಎಲ್ಲಾ ಕಡೆ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ.

 

 

Related