ಭವಾನಿ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ

ಭವಾನಿ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ

ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಈಗಾಗಲೇ ಎಸ್ಐಟಿ ಅಧಿಕಾರಿಗಳ ವಸದಲ್ಲಿದ್ದು, ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯರನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ಅವರ ತಾಯಿಯಾಗಿರುವ ಭವಾನಿಯವರು ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಮೇರೆಗೆ ಈಗಾಗಲೇ ಅಧಿಕಾರಿಗಳು ಭವಾನಿ ರೇವಣ್ಣ ಅವರಿಗೆ ಕೋರ್ಟ್ ಗೆ ವಿಚಾರಣೆಗೆ ಹಾಜರಾಗಬೇಕೆಂದು ಮೂರು ನೋಟಿಸ್ ನೀಡಿದರು ಕೂಡ ಪ್ರತಿಕ್ರಿಯಿಸಿಲ್ಲ. ಹಾಗಾಗಿ ಭವಾನಿ ರೇವಣ್ಣ ಅವರ ವಿರುದ್ಧ ಈಗ ಅರೆಸ್ಟ್ ವಾರಂಟ್ ಜಾರಿ ಮಾಡಿದ್ದಾರೆ.

ಮೈಸೂರು ಜಿಲ್ಲೆಯ ಕೆಆರ್ ನಗರ ಪೊಲೀಸರು ಮಹಿಳೆಯ ಅಪಹರಣ ಮತ್ತು ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿಗೆ ಬೇಕಾಗಿರುವ ಭವಾನಿ ರೇವಣ್ಣ ವಿರುದ್ಧ ಬೆಂಗಳೂರಿನ 42 ನೇ ಎಸಿಎಂಎಂ ಅವರು ಬಂಧನ ವಾರಂಟ್ ಹೊರಡಿಸಿದೆ. ಪ್ರಕರಣದಲ್ಲಿ ಭವಾನಿ ಭಾಗಿಯಾಗಿರುವ ಬಗ್ಗೆ ಎಸ್‌ಐಟಿ ವಿವರವಾದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಇದನ್ನೂ ಓದಿ: ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಉತ್ಸುಕನಾಗಿದ್ದೇನೆ: ಎಚ್‌ ಡಿಕೆ

ಪ್ರಜ್ವಲ್ ರೇವಣ್ಣ ಅವರ ತಾಯಿ ಭವಾನಿ ಅವರಿಗೆ ತನಿಖಾ ತಂಡ 3 ಬಾರಿ ನೋಟಿಸ್ ನೀಡಿದ್ದರೂ ಎಸ್‌ಐಟಿ ಎದುರು ಹಾಜರಾಗಲು ವಿಫಲರಾಗಿದ್ದಾರೆ. 15 ದಿನಗಳಿಂದ ತಲೆಮರೆಸಿಕೊಂಡಿರುವ ಭವಾನಿಯನ್ನು ಬಂಧಿಸಲು ಎಸ್‌ಐಟಿ ಪೊಲೀಸ್ ತಂಡಗಳನ್ನು ರಚಿಸಿದೆ. ಬೆಂಗಳೂರಿಗೆ ಹಿಂದಿರುಗುವ ಮೊದಲು ಎಸ್‌ಐಟಿ ಇತ್ತೀಚೆಗೆ ಹೊಳೆನರಸೀಪುರದ ಅವರ ನಿವಾಸದಲ್ಲಿ ಭವಾನಿಗಾಗಿ ಕನಿಷ್ಠ 7 ಗಂಟೆಗಳ ಕಾಲ ಕಾದು ವಾಪಾಸಾಗಿತ್ತು.

ಭವಾನಿ ಪತ್ತೆಗಾಗಿ ಪೊಲೀಸ್ ತಂಡಗಳು ಬೆಂಗಳೂರು, ಮೈಸೂರು ಮತ್ತು ಹಾಸನದಲ್ಲಿ ಬೀಡು ಬಿಟ್ಟಿದ್ದು, ಭವಾನಿ ಇರುವಿಕೆಯ ಬಗ್ಗೆ ಇನ್ನೂ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ. ಭವಾನಿ ಅವರ ಸ್ಥಳವನ್ನು ಪತ್ತೆಹಚ್ಚಲು ಮೊಬೈಲ್ ಕರೆ ರೆಕಾರ್ಡಿಂಗ್‌ಗಳು, ಮೊಬೈಲ್ ಟವರ್ ಸ್ಥಳಗಳು ಮತ್ತು ಸಿಡಿಆರ್ ಪರಿಶೀಲನೆಯನ್ನು ಟ್ರ್ಯಾಕ್ ಮಾಡುವ ತಾಂತ್ರಿಕ ತಂಡವನ್ನು ಎಸ್‌ಐಟಿ ರಚಿಸಿದೆ.

 

Related