ದರ್ಶನ್ ತೂಗುದೀಪ್ ಬಂಧನ; ಗೃಹ ಸಚಿವರು ಹೇಳಿದ್ದೇನು..?

ದರ್ಶನ್ ತೂಗುದೀಪ್ ಬಂಧನ; ಗೃಹ ಸಚಿವರು ಹೇಳಿದ್ದೇನು..?

ಬೆಂಗಳೂರು: ನಟ ದರ್ಶನ್ ಅವರು ಈಗಾಗಲೇ ಕೊಲೆ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿದ್ದು, ಇದರ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ಅವರು ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತನಿಖೆಯಾಗುವವರೆಗೂ ನಾವು ಏನು ಹೇಳಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ದರ್ಶನವರು ಭಾಗಿಯಾಗಿದ್ದಾರೋ ಇಲ್ಲವೋ ಎಂಬುದು ತನಿಖೆ ನಂತರವೇ ತಿಳಿದು ಬರುತ್ತದೆ. ಹಾಗಾಗಿ ನಾವು ಏನು ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಯುವಗೆ ಸಪ್ತಮಿ ಗೌಡ ಜೊತೆ ಸಂಬಂಧ; ಶ್ರೀದೇವಿ ಗಂಭೀರ ಆರೋಪ

ರೇಣುಕಾಸ್ವಾಮಿಯವರ ಯಾವ ಕಾರಣಕ್ಕೆ ಕೊಲೆ ಮಾಡಿದ್ದಾರೆ, ಇದರಲ್ಲಿ ನಟ ದರ್ಶನವರ ಹೆಸರು ಯಾಕೆ ಬಂದಿದೆ ಎಂಬುದು ತನಿಖೆ ಮಾಡಿದಾಗ ಮಾತ್ರ ಗೊತ್ತಾಗುತ್ತದೆ. ಹಾಗಾಗಿ ತನಿಖೆ ಮುಗಿಯುವವರೆಗೂ ಏನು ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಈ ಕಲೆ ಪ್ರಕರಣದಲ್ಲಿ ಮೊದಲು ಬಂದಿತರಾಗಿರುವ 10 ಜನಗಳು ನಟ ದರ್ಶನ್ ಅವರ ಹೆಸರನ್ನು ಹೇಳಿದ್ದಾರೆ. ಹಾಗಾಗಿ ದರ್ಶನ್ ರವರನ್ನು ಈಗ ಬಂಧಿಸಿದ್ದಾರೆ. ಎಂದು ಗೃಹ ಸಚಿವ ಜಿ ಪರಮೇಶ್ವರ್ ಅವರು ಹೇಳಿದ್ದಾರೆ.

ಚಿತ್ರದುರ್ಗ ಮೂಲದ ಬೆಂಗಳೂರಿನ ಅಪೊಲೋ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾಸ್ವಾಮಿ ಎಂಬುವನು ನಟ ದರ್ಶನ ಗೆಳತಿ ಪವಿತ್ರಾಗೌಡ ಅವರಿಗೆ ಅಶ್ಲೀಲ ಮೇಸೆಜ್, ಫೋಟೋ ಕಳಸಿದ್ದನು. ಈ ಹಿನ್ನೆಲೆಯಲ್ಲಿ ಜೂನ್​ 9 ರಂದು ರೇಣುಕಾಸ್ವಮಿ ಅವರನ್ನು ಆರೋಪಿಗಳು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಪಟ್ಟಣಗೆರೆಯಲ್ಲಿರುವ ಶೇಡ್​​ನಲ್ಲಿ ಆರೋಪಿಗಳು ಅತ್ಯಂತ ಕ್ರೂರವಾಗಿ ಹಿಂಸೆ ನೀಡಿದ್ದಾರೆ. ಕಾದ ಕಬ್ಬಿಣದ ಸಲಾಕೆಯಿಂದ ರೇಣುಕಸ್ವಾಮಿ ಅವರ ಬರೆ ಹಾಕಿದ್ದಾರೆ. ಬಳಿಕ ರೇಣುಕಾಸ್ವಾಮಿ ಅವರ ಗುಪ್ತಾಂಗಕ್ಕೆ ಹಲವು ಬಾರಿ ಒದ್ದು ಹಲ್ಲೆ ಮಾಡಿದ್ದಾರೆ. ನಂತರ ತಲೆಗೆ ರಾಡ್​ನಿಂದ ಹೊಡೆದು ಹತ್ಯೆ ಮಾಡಿದ್ದಾರೆ. ರೇಣುಕಾಸ್ವಾಮಿ ದೇಹದ ಮೇಲೆ ಸುಟ್ಟಿರುವ ಗಾಯಗಳಿವೆ. ಮೃತ ರೇಣುಕಾಸ್ವಾಮಿ ಕೂಡ ದರ್ಶನ ಅಭಿಮಾನಿಯಾಗಿದ್ದರು.

 

Related