ವಾಲ್ಮೀಕಿ ನಿಗಮದಲ್ಲಿ ಬಹುಕೋಟಿ ಹಗರಣಕ್ಕೆ ಮತ್ತೊಂದು ತಿರುವು

ವಾಲ್ಮೀಕಿ ನಿಗಮದಲ್ಲಿ ಬಹುಕೋಟಿ ಹಗರಣಕ್ಕೆ ಮತ್ತೊಂದು ತಿರುವು

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ಬಹುಕೋಟಿ ಹಗಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕಾಂಗ್ರೆಸ್ ಪಕ್ಷದ ಮೊದಲನೇ ವಿಕೆಟ್ ಪತನವಾಗಿದೆ. ಹೌದು, ಮಾಜಿ ಸಚಿವ ಬಿ ನಾಗೇಂದ್ರ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬೆನ್ನಲ್ಲೇ ಮತ್ತೆ ಇದೀಗ ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ಬಹುಕೋಟಿಯ ಕರಣಕ್ಕೆ ಸಂಬಂಧಿಸಿದಂತೆ ಸಚಿವ ಡಾ.ಶರಣಪ್ರಕಾಶ್​ ಪಾಟೀಲ್ ಮತ್ತು ಶಾಸಕ ಬಸನಗೌಡ ದದ್ದಲ್ ಇವರು ಕೂಡ ಈ ಪ್ರಕರಣದಲ್ಲಿ ಶಾಮಿಲ್ ಆಗಿದ್ದಾರೆ ಎಂಬ ಮಾತು ಇದೀಗ ಕೇಳಿ ಬರುತ್ತಿದೆ.

ಹೌದು, ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದ್ದು, ಕಾಂಗ್ರೆಸ್ ಪಕ್ಷದ ಮೊದಲ ವಿಕೆಟ್ ಪತನದ ಬೆನ್ನಲ್ಲೇ ಮತ್ತೆ ಇದೀಗ ಶಾಸಕರ ಮತ್ತು ಸಚಿವರ ಹೆಸರು ತಳಕು ಹಾಕಿಕೊಂಡಿದೆ. ಇದನ್ನೂ ಓದಿ: ರಶೀದ್ ಖಾನ್ ನ ವಿಶ್ವ ದಾಖಲೆ

ಅಕ್ರಮದ ಸಾಕ್ಷ್ಯಗಳ ನಾಶಕ್ಕೆ ಸಚಿವ ಡಾ.ಶರಣಪ್ರಕಾಶ್​ ಪಾಟೀಲ್ ಕಚೇರಿಯಲ್ಲೇ ಸಂಚು ನಡೆದಿತ್ತು ಎಂಬ ಅಂಶ ಪ್ರಕರಣದ ಎಂಟನೇ ಆರೋಪಿಯಾಗಿರುವ ನಿಗಮದ ಲೆಕ್ಕಾಧಿಕಾರಿ ಪರಶುರಾಮ್​ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್​ನಲ್ಲಿ ಉಲ್ಲೇಖಿಸಲಾಗಿದೆ. ಬೆಂಗಳೂರಿನ ಮೂರನೇ ಅಪರ ಮುಖ್ಯ ಮೆಟ್ರೋಪಾಲ್ಟೇನ್​ ಮ್ಯಾಜಿಸ್ಟ್ರೇಟ್​ ಕೋರ್ಟ್​ಗೆ 8ನೇ ಆರೋಪಿ ಪರ ವಕೀಲರು ಈ ಅಫಿಡವಿಟ್​​ನ್ನು ಸಲ್ಲಿಸಿದರು.

ವೈದ್ಯಕೀಯ ಶಿಕ್ಷಣ ಸಚಿವರ ಕಚೇರಿಯಲ್ಲಿ ಮೇ 24ರಂದು ಸಭೆ ನಡೆದು, ಅಕ್ರಮದ ಸಾಕ್ಷ್ಯಗಳ ನಾಶ ಕುರಿತು ಚರ್ಚೆಯಾಗಿದೆ. ಮಾ.24ರ ಬೆಳಗ್ಗೆ 10 ರಿಂದ ಮಧ್ಯಾಹ್ನ 3ರವರೆಗಿನ ಕಚೇರಿ ಸಿಸಿಟಿವಿ ಫೂಟೇಜ್​ಗಳನ್ನು ವಶಪಡಿಸಿಕೊಂಡು ಸಂರಕ್ಷಿಸಲು ತನಿಖಾಧಿಕಾರಿಗೆ ನಿರ್ದೇಶಿಸಬೇಕೆಂದು ಕೋರ್ಟ್‌ಗೆ 8ನೇ ಆರೋಪಿ ಮೊರೆಯಿಟ್ಟಿದ್ದಾರೆ. ಈ ಸಭೆಯಲ್ಲಿ ಸಚಿವರಾದ ಶರಣ ಪ್ರಕಾಶ್ ಪಾಟೀಲ, ಬಿ.ನಾಗೇಂದ್ರ, ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸನಗೌಡ ದಲ್ ಕೂಡ ಭಾಗವಹಿಸಿದ್ದರು ಎಂದು ಹೇಳಲಾಗಿದೆ.

 

Related