ಮಧ್ಯದ ದೊರೆ ವಿಜಯಮಲ್ಯಗೆ ಮತ್ತೊಂದು ಸಂಕಷ್ಟ

ಮಧ್ಯದ ದೊರೆ ವಿಜಯಮಲ್ಯಗೆ ಮತ್ತೊಂದು ಸಂಕಷ್ಟ

ಮುಂಬೈ: ವಿಜಯ್ ಮಲ್ಯ ಒಂದಲ್ಲ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಸಿದ್ಧಿಯಾಗುತ್ತಿರುತ್ತಾರೆ. ಅದರಂತೆ ಮತ್ತೆ ಇದೀಗ ವಿಜಯ್ ಮಲ್ಯ ಸುದ್ದಿಗೆ ಬಂದಿದ್ದಾರೆ.

ಹೌದು, 180 ಕೋಟಿ ರೂ. ಸಾಲ ಪಡೆದು ಮರುಪಾವತಿಸಿದ ಪ್ರಕರಣದಲ್ಲಿ ಇದೀಗ ವಿಜಯ ಮಲ್ಯ ಅವರ ವಿರುದ್ಧ ಜಾಮೀನುರಹಿತ ವಾರೆಂಟನ್ನು ಸಿಬಿಐ ಕೋರ್ಟ್ ಆದೇಶ ಹೊರಡಿಸಿದೆ. ಇದನ್ನೂ ಓದಿ: ನಟನಿಗಾಗಿ ಹೆತ್ತ ಮಗುವನ್ನೇ ಖೈದಿ ಮಾಡಿದ ತಾಯಿ

ವಿಜಯ ಮಲ್ಯ ಅವರ ಇಂಡಿಯನ್ ಓವರ್​ಸೀಸ್ ಬ್ಯಾಂಕ್​ನಿಂದ  ಸುಮಾರು 180 ಕೋಟಿ ರೂ ಸಾಲ ಪಡೆದು ಮರುಪಾವತಿಸದೇ ಬಾಕಿ ಉಳಿಸಿರುವ ಪ್ರಕರಣದಲ್ಲಿ ವಿಜಯ್ ಮಲ್ಯ ವಿರುದ್ಧ ಮುಂಬೈನ ವಿಶೇಷ ಸಿಬಿಐ ಕೋರ್ಟ್​ವೊಂದು ಜಾಮೀನುರಹಿತ ವಾರಂಟ್ ಹೊರಡಿಸಿದೆ. ಇದರಿಂದ ಮಧ್ಯದ ದೊರೆ ವಿಜಯಮಲ್ಯ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

68 ವರ್ಷದ ವಿಜಯ್ ಮಲ್ಯ ವಿರುದ್ಧ ಬೇರೆ ಬೇರೆ ಪ್ರಕರಣಗಳಲ್ಲಿ ಈ ಹಿಂದೆ ಜಾಮೀನುರಹಿತ ವಾರಂಟ್​ಗಳನ್ನು ಹೊರಡಿಸಲಾಗಿದೆ. ಮುಂಬೈನ ಸಿಬಿಐ ಕೋರ್ಟ್ ಈ ಹಿನ್ನೆಲೆಯಲ್ಲಿ ಓಪನ್ ಎಂಡೆಡ್ ವಾರಂಟ್ ಹೊರಡಿಸಿದೆ. ಅಂದರೆ, ಗಡುವು ಇಲ್ಲದ ವಾರಂಟ್ ಇದಾಗಿದೆ. ಹೆಚ್ಚು ಗಂಭೀರ ಸ್ವರೂಪದ ವಾರಂಟ್ ಇದಾಗಿರುತ್ತದೆ.

ಐಒಬಿ ಬ್ಯಾಂಕ್ 2007ರಿಂದ 2012ರ ನಡುವೆ ಕಿಂಗ್​ಫಿಶರ್ ಏರ್ಲೈನ್ಸ್​ಗೆ ವಿವಿಧ ಸಂದರ್ಭಗಳಲ್ಲಿ ಬೃಹತ್ ಪ್ರಮಾಣದಲ್ಲಿ ಸಾಲಗಳನ್ನು ನೀಡಿತ್ತು. ಆ ಸಾಲವನ್ನು ಕಿಂಗ್​ಫಿಶರ್ ಏರ್ಲೈನ್ಸ್​ನ ಪ್ರೊಮೋಟರ್ ಆದ ವಿಜಯ್ ಮಲ್ಯ ಬೇರೆ ಬೇರೆ ಕಡೆಗೆ ವರ್ಗಾವಣೆ ಮಾಡಿದ್ದರೆಂದು ಸಿಬಿಐ ಸಲ್ಲಿಸಿರುವ ಚಾರ್ಜ್​ಶೀಟ್​ನಲ್ಲಿ ತಿಳಿಸಲಾಗಿದೆ.

 

Related