D ಗ್ಯಾಂಗ್​ ಹೆಸರಲ್ಲಿ‌ ಸಿಸಿಮಾ ಬರ್ತಿದ್ಯಾ?

D ಗ್ಯಾಂಗ್​ ಹೆಸರಲ್ಲಿ‌ ಸಿಸಿಮಾ ಬರ್ತಿದ್ಯಾ?

ಬೆಂಗಳೂರು: ನಟ ದರ್ಶನ್‌ ಏನ್ಮಾಡಿದ್ರು ಸುದ್ದಿನೇ ಅನ್ನೋದು ಮತ್ತೊಮ್ಮೆ ಫ್ರೂ ಆಗಿದೆ….ಚಾಲೆಂಜಿಂಗ್ ಸ್ಟಾರ್ ಬಂಧನದ ಬಳಿಕ ಡಿ ಗ್ಯಾಂಗ್ ಸಖತ್ ಫೇಮಸ್ಆಗಿದೆ… ಸ್ಯಾಂಡಲ್‌ವುಡ್‌ನಲ್ಲಿ D ಗ್ಯಾಂಗ್​ ಹೆಸರಲ್ಲಿ ಸಿನಿಮಾ ಮಾಡಲು ಭಾರೀ ಬೇಡಿಕೆ ಶುರುವಾಗಿದೆ.

ಹೌದು, ರೇಣುಕಾಸ್ವಾಮಿ ಕೊಲೆ  ಕೇಸ್‌ ನಲ್ಲಿ  ಈಗಾಗಲೇ  ನಟ ದರ್ಶನ್‌  ಗ್ಯಾಂಗ್‌  ಅರೆಸ್ಟ್‌ ಆಗಿದ್ದಾರೆ…ಅರೆಸ್ಟ್‌ ಆಗಿರುವ ಡಿ  ಗ್ಯಾಂಗ್‌ ಬಗ್ಗೆಯೇ ಸಾಕಷ್ಟು ಚರ್ಚೆಯಾಗುತ್ತಿದೆ. ರಾಜ್ಯಾದ್ಯಂತ ಡಿ ಗ್ಯಾಂಗ್ ಹೆಸರು ಸಂಚಲನ ಸೃಷ್ಟಿಸುತ್ತಿದ್ದಂತೆ ಅದೇ ಹೆಸರಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ಮಾಡೋ ಪ್ಲಾನ್ ರೆಡಿಯಾಗಿದೆ ಅಂತೆ.. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದರ್ಶನ್ ಗ್ಯಾಂಗ್ ಮಾಡಿದ ಕೊಲೆ ಕೇಸ್ ಅನ್ನೇ ಸಿನಿಮಾ ಮಾಡೋ ಬಗ್ಗೆ ಚರ್ಚೆ ಶುರುವಾಗಿದೆ. ಡಿ ಗ್ಯಾಂಗ್​ ಹೆಸರಲ್ಲಿ ಸಿನಿಮಾ ಮಾಡಲು ಟೈಟಲ್‌ಗೆ ಬೇಡಿಕೆ ಇಡಲಾಗಿದೆ. ಇದನ್ನೂ ಓದಿ: ಜೈಲು ಹಕ್ಕಿಯಾದ ಪವಿತ್ರಾ ಗೌಡ

ಪಿ.ಎಂ ಪ್ರೊಡಕ್ಷನ್ ನಿರ್ಮಾಪಕ ಮಂಜುನಾಥ್ ನಾಯ್ಕ್  ಕನ್ನಡ ಚಿತ್ರರಂಗದ ಫಿಲ್ಮ್‌ ಛೇಂಬರ್‌ಗೆ ವಿಶೇಷ ಮನವಿ ಸಲ್ಲಿಸಿದ್ದಾರೆ. ಡಿ ಗ್ಯಾಂಗ್ ಹೆಸರಿನ ಟೈಟಲ್‌ ನಮಗೆ ಕೊಡಿ. ಇದುವರೆಗೂ ಯಾರು ಈ ಟೈಟಲ್‌ಗೆ ಮನವಿ ಸಲ್ಲಿಸಿಲ್ಲ. ಹೀಗಾಗಿ ಈ ಟೈಟಲ್‌ ನಮಗೆ ಕೊಡಬೇಕು ಎಂದು ಡಿಮ್ಯಾಂಡ್ ಮಾಡಿದ್ದಾರೆ.ಅದ್ರೆ  ಡಿ ಗ್ಯಾಂಗ್‌ ಟೈಟಲ್​ಗೆ ಇನ್ನೂ ಫಿಲಂ ಛೇಂಬರ್ ಕಡೆಯಿಂದ ಯಾವುದೇ  ಒಪ್ಪಿಗೆಯ ಸೂಚನೆ ಸಿಕ್ಕಿಲ್ಲ.

Related