ಆಲಿಯಾ ಭಟ್​ಗೆ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಚೀಮಾರಿ ಹಾಕಿದ್ಯಾಕೆ…?!

ಆಲಿಯಾ ಭಟ್​ಗೆ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಚೀಮಾರಿ ಹಾಕಿದ್ಯಾಕೆ…?!

ಇಡೀ ದೇಶದಾದ್ಯಂತ ಲೋಕಸಭಾ ಚುನಾವಣೆಗೆ ಭರ್ಜರಿ ಮತದಾನ ನಡೆಯುತ್ತಿದ್ದು, ಸೋಮವಾರ (ಮೇ 20) ರಂದು ಮಹಾರಾಷ್ಟ್ರ ಸೇರಿದಂತೆ ಇನ್ನೂ ಹಲವು ರಾಜ್ಯಗಳಲ್ಲಿ ಬಿರುಸಿನ ಮತದಾನ ನಡೆಯಿತು.

ಇನ್ನು ಮಹಾರಾಷ್ಟ್ರದಲ್ಲಿ ಬಾಲಿವುಡ್ ನ ಸಿನಿಮಾ ತಾರೆಗಳು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ.

ಯೆಸ್…ಬಾಲಿವುಡ್ ನ ಸೆಲೆಬ್ರಿಟಿಗಳು ಸೋಮವಾರ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ. ಇನ್ನು ಬಾಲಿವುಡ್ ನ ಬೆಡಗಿ ಆಲಿಯಾ ಭಟ್ ಭಾರತೀಯ ಪ್ರಜೆ ಅಲ್ಲ. ಅವರು ಬ್ರಿಟನ್ ನಾಗರಿಕತ್ವ ಹೊಂದಿದ್ದಾರೆ ಆದ್ದರಿಂದ ದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಗೆ ಆಲಿಯ ಭಟ್ ಅವರು ಮತ ಚಲಾಯಿಸುವ ಹಕ್ಕನ್ನು ಹೊಂದಿಲ್ಲ. ಅದರಿಂದ ಅಲಿಯಾ ಭಟ್ ವಿರುದ್ಧ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಭಾರತ ಬಿಟ್ಟು ತೊಲಗಿ ಎಂಬ ಘೋಷಣೆ ಹೋಗುವ ಮೂಲಕ ಕೆಲವೊಂದು ವಿಡಿಯೋಗಳನ್ನು ಹರಿಬಿಟ್ಟಿದ್ದಾರೆ.

ಮಹಾರಾಷ್ಟ್ರದಲ್ಲಿ ಸೋಮವಾರ ರಣಬೀರ್ ಕಪೂರ್ ಕೂಡ ಮತ ಚಲಾಯಿಸಿದ್ದಾರೆ. ಆದರೆ, ರಣಬೀರ್ ಪತ್ನಿ ಆಲಿಯಾ ಆಗಮಿಸಿಲ್ಲ. ಇದಕ್ಕೆ ಕಾರಣ ಅವರು ಭಾರತೀಯ ನಾಗರಿಕತ್ವ ಹೊಂದಿರದೇ ಇರುವುದು. ಇದನ್ನು ಅನೇಕರು ಟೀಕಿಸುತ್ತಿದ್ದಾರೆ.

ಈ ಮಧ್ಯೆ ಆಲಿಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ನಿಗೂಡಾರ್ಥದ ಪೋಸ್ಟ್ ಒಂದನ್ನು ಮಾಡಿದ್ದಾರೆ. ಈ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಆಲಿಯಾ ಭಟ್ ಅವರು ಈ ಮೊದಲು ಅವರ ಹಾಲಿವುಡ್ ಸಿನಿಮಾ ‘ಹಾರ್ಟ್ ಆಫ್ ಸ್ಟೋನ್’ ಚಿತ್ರದ ಪ್ರಚಾರಕ್ಕೆ ಇಂಗ್ಲೆಂಡ್ ತೆರಳಿದ್ದರು. ಈ ವೇಳೆ ಆಲಿಯಾಗೆ ಬ್ರಿಟನ್ ನಾಗರಿಕತ್ವದ ಬಗ್ಗೆ ಪ್ರಶ್ನೆ ಎದುರಾಗಿತ್ತು. ‘ನನ್ನ ತಾಯಿ ಬರ್ನಿಂಗ್​ಹ್ಯಾಮ್​ನವರು. ನಾನು ಭಾರತದಲ್ಲಿ ಹುಟ್ಟಿ ಬೆಳೆದೆ. ನನ್ನ ಅಜ್ಜಿ ತಮ್ಮ ಜೀವನವನ್ನು ಸಂಪೂರ್ಣವಾಗಿ ಇಂಗ್ಲೆಂಡ್​ನಲ್ಲಿ ಕಳೆದರು. ಅವರಿಗೆ ಇಂಗ್ಲೆಂಡ್ ಇಂಗ್ಲಿಂಷ್ ಆ್ಯಕ್ಸೆಂಟ್ ಬರುತ್ತಿತ್ತು’ ಎಂದಿದ್ದರು ಆಲಿಯಾ.

 

Related