ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ನಟಿ ಹರ್ಷಿಕ

ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ನಟಿ ಹರ್ಷಿಕ

ಬೆಂಗಳೂರು: ಬಹುಕಾಲದ ಸ್ನೇಹಿತರಾಗಿದ್ದ ಭುವನ್ ಮತ್ತು ಹರ್ಷಿಕಾ ಕಳೆದ ವರ್ಷ ಆಗಸ್ಟ್ 24ರಂದು ಕೊಡಗಿನಲ್ಲೇ ಅವರ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದರು. ಇದೀಗ ವರ್ಷದೊಳಗೆ ಮಗು ಆಗಮಿಸುವ ಸುದ್ದಿ ಕೊಟ್ಟಿದ್ದಾರೆ.

ಯೆಸ್..‌.ಸ್ಯಾಂಡಲ್ ವುಡ್ ನ ಬ್ಯೂಟಿಫುಲ್ ದಂಪತಿಗಳಾದ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಅವರು ಪ್ರೀತಿಸಿ ಮದುವೆಯಾಗಿದ್ದು, ಈ ದಂಪತಿಗಳು ಇದೀಗ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಇದನ್ನೂ ಓದಿ: ಕೊಡಗಿನ ಸ್ಟೈಲ್ ನಲ್ಲಿ ನ್ಯಾಷನಲ್ ಕ್ರಶ್ ಕೊಡಗಿನ ಸ್ಟೈಲ್ ನಲ್ಲಿ ನ್ಯಾಷನಲ್ ಕ್ರಶ್

ಈ ದಂಪತಿಗಳು ಇದೀಗ ಮೊದಲ ಮಗುವಿನ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ದಂಪತಿ ಸಮೇತ ಕೊಡಗು ಉಡುಪಿನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ

ಕೊಡವ ಸಂಪ್ರದಾಯದ ಹಳ್ಳಿ ಮನೆಯಲ್ಲಿ ಕ್ಲಾಸಿಕ್ ಶೈಲಿಯಲ್ಲಿ ದಂಪತಿ ಫೋಟೋಶೂಟ್ ಮಾಡಿಸಿದ್ದಾರೆ. ಇಡೀ ಕುಟುಂಬ ಅದೇ ಶೈಲಿಯಲ್ಲೇ ಕಂಗೊಳಿಸಿದೆ.

Related