ನಟಿ ಅನುಷ್ಕಾ ಶೆಟ್ಟಿಗೆ ಈ ಕಾಯಿಲೆ ಇದೆಯಂತೆ..!

ನಟಿ ಅನುಷ್ಕಾ ಶೆಟ್ಟಿಗೆ ಈ ಕಾಯಿಲೆ ಇದೆಯಂತೆ..!

ನಟಿ ಅನುಷ್ಕಾ ಶೆಟ್ಟಿ ಅವರು ಕರ್ನಾಟಕದಲ್ಲಿ ಹುಟ್ಟಿ ಬೆಳೆದು ಇದೀಗ ಸೌತ್ ಇಂಡಸ್ಟ್ರಿಯಲ್ಲಿ ಹೆಸರುವಾಸಿಯಾಗಿದ್ದಾರೆ.

ಅನುಷ್ಕಾ ಶೆಟ್ಟಿ ಅವರು ಮಂಗಳೂರಿನಲ್ಲಿ ಹುಟ್ಟಿ ಬೆಳೆದಿದ್ದು ಇದೀಗ ತೆಲುಗು ಚಿತ್ರರಂಗದಲ್ಲಿ ಅತ್ಯಂತ ಹೆಸರುವಾಸಿಯಾಗಿರುವ ನಟಿ, ಅದರಲ್ಲೂ ಕೂಡ ಬಾಹುಬಲಿ ಚಿತ್ರದಲ್ಲಿ ನಟಿಸಿದ ಮೇಲೆ ಅನುಷ್ಕಾ ಅವರ ಲಕ್ಕೆ ಬದಲಾಯಿತೆಂದು ಹೇಳಬಹುದು. ಇಂತಹ ನಟಿಯಾಗಿರುವ ಅನುಷ್ಕಾ ಶೆಟ್ಟಿ ಅವರಿಗೆ ಅಪರೂಪದ ಕಾಯಿಲೆ ಇದೆ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ.

ಹೌದು, ತೆಲುಗು ಚಿತ್ರರಂಗದಲ್ಲಿ ಅತ್ಯಂತ ಹೆಸರುವಾಸಿಯಾಗಿರುವ ನಟಿ ಅನುಷ್ಕಾ ಶೆಟ್ಟಿ ಅವರಿಗೆ ಅಪರೂಪದ ಕಾಯಿಲೆ ಇರುವುದರ ಬಗ್ಗೆ ಸಂದರ್ಶನ ಒಂದರಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ನಟಿ ತಮ್ಮ ಆರೋಗ್ಯದ ಬಗ್ಗೆ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ. ತಾವು ಅಪರೂಪದ ಕಾಯಿಲೆ ಎದುರಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ನಟಿ ನಗಲು ಪ್ರಾರಂಭಿಸಿದರೆ ತಡೆಯಲಾರದೆ ನಗುತ್ತಲೇ ಇರುತ್ತಾರಂತೆ. ಅವರು ಮತ್ತೆ ಸಾಮಾನ್ಯರಾಗಲು 15-20 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ತೆರಿಗೆ ಬಾಕಿ ವಸೂಲಿಗೆ ಹೊಸ ಪ್ಲಾನ್..!

ನನಗೆ ನಗುವ ಕಾಯಿಲೆ ಇದೆ. ನಗುವುದು ಕೂಡ ಒಂದು ಕಾಯಿಲೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ ನನ್ನ ವಿಷಯದಲ್ಲಿ ಹಾಗೆಯೇ ಆಗಿದೆ. ಒಮ್ಮೆ ನಗಲು ಶುರು ಮಾಡಿದರೆ 15-20 ನಿಮಿಷ ನಗುವುದನ್ನು ನಿಲ್ಲಿಸುವುದು ಕಷ್ಟವಾಗುತ್ತದೆ. ಯಾವುದೇ ಹಾಸ್ಯ ದೃಶ್ಯವನ್ನು ನೋಡುವಾಗ ಅಥವಾ ಚಿತ್ರೀಕರಣ ಮಾಡುವಾಗ, ನಾನು ನಗುತ್ತಾ ನೆಲದ ಮೇಲೆ ಉರುಳುತ್ತೇನೆ. ಇದರಿಂದ ಶೂಟಿಂಗ್ ನಿಲ್ಲಿಸಬೇಕಾಗಿ ಬಂದಿರುವುದು ಹಲವು ಬಾರಿ ಆಗಿದೆ’ ಎಂದಿದ್ದಾರೆ ಅನುಷ್ಕಾ.

 

Related