ನಟ ದರ್ಶನ್‌ ಮತ್ತೊಂದು ಸಂಕಷ್ಟ; ಏನು ಗೊತ್ತಾ?

ನಟ ದರ್ಶನ್‌ ಮತ್ತೊಂದು ಸಂಕಷ್ಟ; ಏನು ಗೊತ್ತಾ?

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ  ಕೊಲೆ ಕೇಸ್‌ನಲ್ಲಿ  ಜೈಲು ಸೇರಿರುವ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ… ಹೌದು, ಈಗಾಗಲೇ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಲಿರುವ ಅಧಿಕಾರಿಗಳು ಸದ್ಯದಲ್ಲಿ ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಕೆ ಮಾಡಲಿದ್ದಾರೆ.

ಚಾರ್ಜ್​ಶೀಟ್ ಸಲ್ಲಿಕೆ ಆದಮೇಲೆ ದರ್ಶನ್​ಗೆ ಮತ್ತೊಂದು ಸಂಕಷ್ಟ ಎದುರಾಗಲಿದೆ ಎನ್ನಲಾಗಿದೆ. ಮುಂದೆ ದರ್ಶನ್ ಅವರನ್ನು ಹಾಕಿಕೊಂಡು ಚಿತ್ರ ಮಾಡೋರು ದೇಶದಲ್ಲಿ ಚಿತ್ರೀಕರಣ ಮಾಡಬೇಕು ಎನ್ನಲಾಗುತ್ತಿದೆ. ಚಾರ್ಜ್ ಶೀಟ್ ಬಳಿಕ ಪಾಸ್ ಪೋರ್ಟ್ ರದ್ದಾಗಲಿದೆ. ಕೊಲೆ ಆರೋಪಿ ಪ್ರಭಾವಿ ಆಗಿರುವ ಕಾರಣ ಪಾಸ್ ಪೋರ್ಟ್ ರದ್ಧತಿಗೆ ಪತ್ರ ಬರೆಯಲು ಪೊಲೀಸರು ಚಿಂತನೆ ನಡೆಸಿದ್ದಾರೆ. ಒಂದು ವೇಳೆ ದರ್ಶನ್ ಜೈಲಿನಿಂದ ರಿಲೀಸ್ ಆದ ಬಳಿಕ ಯಾರಾದರೂ ಸಿನಿಮಾ ಮಾಡಬೇಕು ಅಂದರೆ ದೇಶದಲ್ಲಿಯೇ ಮಾಡಬೇಕಿದೆ. ವಿದೇಶದಲ್ಲಿ ಚಿತ್ರೀಕರಣದ ಕನಸನ್ನ ಕೈಬಿಡಬೇಕಾದ ಅನಿವಾರ್ಯತೆ ಎದುರಾದರೂ ಅಲ್ಲಗಳೆಯುವಂತಿಲ್ಲ. ಇದನ್ನೂ ಓದಿ: ಇಂದು 18ನೇ ಲೋಕಸಭೆ ಮೊದಲ ಅಧಿವೇಶನ ಆರಂಭ.

ಇನ್ನು ವಿದೇಶದಲ್ಲಿ ಚಿತ್ರೀಕರಣ ಮಾಡುಲು ನ್ಯಾಯಾಲಯದ ಅನುಮತಿ ಅಗತ್ಯ ಇದೆ. ನ್ಯಾಯಾಲಯ ಅನುಮತಿ ನೀಡಿದರೆ ಮಾತ್ರ ವಿದೇಶಕ್ಕೆ ತೆರಳಬಹುದು. ಆದರೆ ಪಾಸ್ ಪೋರ್ಟ್ ರದ್ದು ಮಾಡಿದರೆ ವಿದೇಶಿ ಕನಸೂ ಭಗ್ನ ಆಗಲಿದೆ.

Related