ನಟ ದರ್ಶನ್‌ ಜಾಮೀನು ಅರ್ಜಿ; ವಕೀಲರು ಹೇಳಿದ್ದೇನು?

ನಟ ದರ್ಶನ್‌ ಜಾಮೀನು ಅರ್ಜಿ; ವಕೀಲರು ಹೇಳಿದ್ದೇನು?

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಅರೆಸ್ಟ್‌ ಆಗಿರುವ ನಟ ದರ್ಶನ್ ತೀವ್ರ ವಿಚಾರಣೆ ಎದುರಿಸುತ್ತಿದ್ದಾರೆ.. ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯ ಕಸ್ಟಡಿಯಲ್ಲಿರುವ ನಟ ದರ್ಶನ್‌ ಅವರನ್ನು ಇಂದು ವಕೀಲರು ಭೇಟಿಯಾಗಿ ಕೆಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದಾರೆ.

ಇಂದು ಬೆಳಗ್ಗೆ ದರ್ಶನ್ ಪರ ವಕೀಲರು ಭೇಟಿಯಾಗಿ ಮುಂದಿನ ಕಾನೂನು ಹೋರಾಟಗಳ ಬಗ್ಗೆ ಚರ್ಚೆ ಮಾಡಿದ್ದಾರೆ ವಕೀಲರು ತಿಳಿಸಿದ್ದಾರೆ. ದರ್ಶನ್‌ ಪರ ವಕೀಲ ಅನಿಲ್ ಬಾಬು ಮಾತನಾಡಿ.. ಕೋರ್ಟ್​​ ನಿರ್ದೇಶನದ ಪ್ರಕಾರ ಇವತ್ತು ಸಂಜೆ 5 ಗಂಟೆಯೊಳಗೆ ಆರೋಪಿಗಳನ್ನು ಹಾಜರುಪಡಿಸಬೇಕು. ನಮ್ಮ ಪ್ರಕಾರ ಇವತ್ತು ಮಧ್ಯಾಹ್ನ ಹಾಜರು ಮಾಡಿಯೇ ಮಾಡುತ್ತಾರೆ. ಅವರು ಇನ್ನೂ ಕಸ್ಟಡಿಗೆ ಕೇಳ್ತಾರೋ? ಇಲ್ಲವೋ ಅನ್ನೋದ್ರ ಬಗ್ಗೆ ನಮಗೆ ಗೊತ್ತಿಲ್ಲ. ಮಧ್ಯಾಹ್ನ ಪೊಲೀಸ್ ಅಧಿಕಾರಿಗಳ ನಿರ್ಧಾರವನ್ನು ನೋಡಿ ನಾವು ಮುಂದಿನ ಕಾನೂನು ಹೋರಾಟದ ಬಗ್ಗೆ ನಿರ್ಧಾರ ಮಾಡ್ತೇವೆ ಎಂದರು. ಇದನ್ನೂ ಓದಿ: ಬಿಜೆಪಿಗೆ ಖಡಕ್ ಎಚ್ಚರಿಕೆ ನೀಡಿದ ಗ್ರಹ ಸಚಿವ

ಬಹುತೇಕ ತನಿಖೆ ಮುಗಿದಿರಬಹುದು. ಬೇಲ್​ ಹಾಕಬೇಕೋ? ಬೇಡವೋ ಅನ್ನೋದು ಈಗ ನಿರ್ಧಾರ ಮಾಡಿಲ್ಲ. ಆರೋಪಿಗಳು ನ್ಯಾಯಾಂಗ ಬಂಧನಕ್ಕೆ ಒಳಗಾದ ನಂತರ ಚರ್ಚೆ ಮಾಡಿ ಬೇಲ್​ಗೆ ಅರ್ಜಿ ಹಾಕ್ತೇವೆ. ಇದಕ್ಕೆ ಒಂದು ವಾರಗಳ ಸಮಯ ಬೇಕಾಗುತ್ತದೆ. ದರ್ಶನ್ ಜೊತೆ ಮಾತುಕತೆ ಮಾಡಿಕೊಂಡು ಬಂದಿದ್ದೇವೆ ಅಷ್ಟೇ. ಅವರ ಆರೋಗ್ಯ ಚೆನ್ನಾಗಿದೆ ಎಂದು ಹೇಳಿದರು.

 

Related