ನಟನಿಗಾಗಿ ಹೆತ್ತ ಮಗುವನ್ನೇ ಖೈದಿ ಮಾಡಿದ ತಾಯಿ

ನಟನಿಗಾಗಿ ಹೆತ್ತ ಮಗುವನ್ನೇ ಖೈದಿ ಮಾಡಿದ ತಾಯಿ

ಬೆಂಗಳೂರು: ಸಾಮಾನ್ಯವಾಗಿ ಚಿಕ್ಕ ಮಕ್ಕಳಿಗೆ ಕೃಷ್ಣನ ವೇಷ, ರಾಧೆ ವೇಷ, ಮಹಾತ್ಮ ಗಾಂಧೀಜಿಯವರ ವೇಷ ಹೀಗೆ ಹಲವಾರು ವೇಷಗಳನ್ನು ಚಿಕ್ಕ ಮಕ್ಕಳಿಗೆ ಫೋಟೋ ಶೂಟ್ ಮಾಡಿಸುವುದು ಸರ್ವೇಸಾಮಾನ್ಯ. ಆದರೆ ಇಲ್ಲೊಬ್ಬ ಮಹಿಳೆಯು ತನ್ನ ಮಗುವನ್ನೇ  ಖೈದಿ ಮಾಡಿ ಫೋಟೋಶೂಟ್ ಮಾಡಿಸಿದ್ದಾರೆ.

ಹೌದು, ನಟನ ಮೇಲಿರುವ ಅಭಿಮಾನಕೋಸ್ಕರ ಇಲ್ಲೊಬ್ಬ ತಾಯಿಯು ತನ್ನ ಹೆತ್ತ ಮಗನನ್ನೇ ಖೈದಿ ರೀತಿ ಬಟ್ಟೆ ತೊಡಿಸಿ ಫೋಟೋಶೂಟ್ ಮಾಡಿಸಿದ್ದಾರೆ. ಇದನ್ನೂ ಓದಿ: ಡಿ ಗ್ಯಾಂಗ್ ಪ್ರಕರಣದಲ್ಲಿ ಸ್ಪೋಟಕ ಮಾಹಿತಿ ಬಹಿರಂಗ..!

ಯೆಸ್..‌ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರಿಗೆ ಅಭಿಮಾನಿಗಳು ಹೆಚ್ಚು. ಅದರಲ್ಲೂ ಕೂಡ ಇಲ್ಲೊಬ್ಬ ಮಹಿಳೆಯು ನಟನ ಅಭಿಮಾನದಿಂದ ತನ್ನ ಹೆತ್ತ ಮಗುವನ್ನೇ ಖೈದಿ ಮಾಡಿದ್ದಾರೆ. ತಮ್ಮ ನೆಚ್ಚಿನ ನಟನಿಗಾಗಿ ತನ್ನ ಹೆತ್ತ ಮಗುವನ್ನ ಖೈದಿ ಮಾಡಿದ್ದಾಳೆ.

ಮಗುವಿಗೂ ಕೂಡ ಕೈದಿ ರೀತಿ ಬಿಳಿ ಬಟ್ಟೆ ತೊಡಿಸಿ ನಟ ದರ್ಶನ್ ಗೆ ನೀಡಿರುವ ಕೈದಿ ನಂಬರ್ 6106 ಕೂಡ ಹಾಕಿ ಫೋಟೋಶೂಟ್ ಮಾಡಿಸಿದ್ದಾರೆ. ಇನ್ನು ಖೈದಿ ನಂಬರ್ ಜೊತೆ ಕೈ ಕೋಳ ಹಾಕಿ ತಯಾರಿಸಿ ಫೋಟೋಶೂಟ್ ಮಾಡಿಸಿದ್ದಾರೆ.

ಒಂದು ವರ್ಷದ ಪುಟ್ಟ ಮಗುವಿಗೆ ಬಿಳಿ ಬಟ್ಟೆ ತೋಡಿಸಿ ಅಂದಭಿಮಾನ ಮೆರೆದಿದ್ದಾರೆ.

ನಟನ ಮೇಲಿರುವ ಹುಚ್ಚು ಅಭಿಮಾನಕ್ಕೆ ದಿನಕ್ಕೊಂದು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ. ಅದರಂತೆ ಈ ಹುಚ್ಚು ಅಭಿಮಾನಿ ಒಬ್ಬರು ತನ್ನ ಹೆತ್ತ ಮಗುವನ್ನೇ ಖೈದಿ ರೀತಿ ತಯಾರಿ ಮಾಡಿ ಫೋಟೋಶೂಟ್ ಮಾಡಿಸಿದ್ದಾರೆ. ಇದರಿಂದ ಸೋಶಿಯಲ್ ಮೀಡಿಯಾದಲ್ಲಿ ಈ ಮಹಿಳೆಯ ಮೇಲೆ ಆಕ್ರೋಶ ಹೊರ ಹಾಕುತ್ತಿದ್ದಾರೆ.

 

Related