ಕೊಪ್ಪಳ: ಚಿಕ್ಕಮಕ್ಕಳು ಮಾತನಾಡುವುದೇ ಒಂದು ಖುಷಿಯಾದರೆ ಕೊಪ್ಪಳ ಜಿಲ್ಲೆಯ ಚಿಕ್ಕಬಗನಾಳದ 3 ವರ್ಷ 3 ತಿಂಗಳ ಪುಟಾಣಿ ವೇದಿಕಾ ತನ್ನ ಅಸಾಧಾರಣ ಜ್ಞಾನ ಹಾಗೂ ನೆನಪಿನ ಶಕ್ತಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್-2026 ರಲ್ಲಿ ಸ್ಥಾನ ಪಡೆದು ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾಳೆ. ಮಹೇಶಗೌಡ ಮತ್ತು ಕವಿತಾ ಪೊಲೀಸ್ಪಾಟೀಲ್ ದಂಪತಿಯ ಪುತ್ರಿಯಾದ ವೇದಿಕಾ ಕೇಳಿದ ಪ್ರಶ್ನೆಗಳಿಗೆ ತಕ್ಷಣವೇ ಸ್ಪಷ್ಟವಾಗಿ ಉತ್ತರಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಇದನ್ನೂ ಓದಿ: ಇಡೀ ವಿಶ್ವ ಭಾರತವನ್ನ ಬೆಂಗಳೂರಿನ ಮೂಲಕ ನೋಡುತ್ತಿದೆ: ಡಿಕೆಶಿ
ಸಾಮಾನ್ಯವಾಗಿ ಈ ವಯಸ್ಸಿನ ಮಕ್ಕಳು ತೊದಲು ನುಡಿಯಲ್ಲಿ ಮಾತನಾಡುವ ಹಂತದಲ್ಲಿರುವಾಗ, ವೇದಿಕಾ ಇಷ್ಟು ವಿಷಯಗಳನ್ನು ಗುರುತಿಸಿ ಸ್ಪಷ್ಟವಾಗಿ ಉಚ್ಛರಿಸುವುದು ವಿಶೇಷ. ಮಗುವಿನ ಗ್ರಹಿಕೆ ಹಾಗೂ ನೆನಪಿನ ಶಕ್ತಿ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ರಾಷ್ಟ್ರೀಯ ದಾಖಲೆ ನಿರ್ಮಿಸಿರುವ ವೇದಿಕಾಳಿಗೆ ಹಾಗೂ ಅವಳ ಪ್ರತಿಭೆಯನ್ನು ಪೋಷಿಸಿದ ಪೋಷಕರಿಗೆ ಅಭಿನಂದನೆಗಳು. ವೇದಿಕಾಳ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸುತ್ತೇವೆ.
