ಬಸವಾದಿ ಶರಣರ ಜಾಗೃತಿ ಸಮಾವೇಶ ಇಂದು/ ವಿಷ ನಂಜು ಹರಡುವವರ ಬಗ್ಗೆ ಜಾಗೃತರಾಗೋಣ
ಶಹಾಪುರ: ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಮೇ 15, ಶುಕ್ರವಾರ ಹಮ್ಮಿಕೊಂಡಿರುವ ಬಸವಾದಿ ಶರಣರ ಜಾಗೃತಿ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೆ ಸಹಕರಿಸಬೇಕು ಎಂದು ಬಸವಾದಿ ಶರಣರ ಜಾಗ್ರತಿ ಸಮಾವೇಶದ ಸಂಚಾಲಕ ಚೆನ್ನಪ್ಪ ಆನೇಗುಂದಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬಸವಾದಿ ಶರಣರ ಜಾಗೃತಿ ಸಮಾವೇಶದ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಬೆಳಗ್ಗೆ 11 ಗಂಟೆಗೆ ಮೆರವಣಿಗೆ ನಡೆಯಲಿದ್ದು ಸಂಜೆ 5 ಗಂಟೆಗೆ ಸಿಪಿಎಸ್ ಶಾಲಾ ಮೈದಾನದಲ್ಲಿ ಬಹಿರಂಗ ಸಭೆ ಜರುಗಲಿದೆ. ಬೈಕ್ ರ‍್ಯಾಲಿ ಸೇರಿದಂತೆ ನಾನಾ ಕಾರ್ಯಕ್ರಮ ನಡೆಯಲಿವೆ ಎಂದು ತಿಳಿಸಿದರು.
ಮೇ 18 ರಂದು ಬಸವಾದಿ ಶಿವಶರಣರ ಹಿಂದೂ ಸಮಾವೇಶದಲ್ಲಿ ಭಾಗವಹಿಸುವ ದುಷ್ಟಶಕ್ತಿಗಳನ್ನು ಹಿಮ್ಮೆಟ್ಟಿಸಬೇಕು. ಹಿಂದೂತ್ವದ ಬಗ್ಗೆ ವಿಷ ನಂಜು ಹರಡುವ ಲಘುವಾಗಿ ಮಾತನಾಡುವ ಸ್ವಾಮೀಜಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಮಹಾರಾಷ್ಟ್ರದ ಕಲ್ಹಾಪುರ ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಬಗ್ಗೆ ನಾವೆಲ್ಲರೂ ಜಾಗೃತರಾಗಬೇಕು. ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಬಳಸಿದ ಬಾಷೆ ತಮ್ಮ ಸ್ಥಾನಕ್ಕೆ ತಕ್ಕುದಾಗಿಲ್ಲ. ಸ್ವಾಮೀಜಿ ಸಾಮಾನ್ಯರಿಗಿಂತಲೂ ಕೆಳಮಟ್ಟದ ಭಾಷೆಯನ್ನು ಬಳಸಿದ್ದರು. ಆದ್ದರಿಂದ ನಾವೆಲ್ಲರೂ ಜಾಗೃತರಾಗಿರಬೇಕು. ಮತ್ತು ಈ ಉದ್ದೇಶದಿಂದ ನಗರದಲ್ಲಿ ಬಸವಾದಿ ಶರಣರ ಜಾಗೃತಿ ಸಮಾವೇಶ ನಡೆಯಲಿದ್ದು, ಜನರು ಈ ಬಗ್ಗೆ ತಿಳಿದುಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆ, ಕಲ್ಯಾಣ ಕರ್ನಾಟಕ, ಬಸವಪರ ಸಂಘಟನೆಗಳು, ಕಾಯಕ ಶರಣರ ಒಕ್ಕೂಟ, ಸೌಹರ್ದ ಕರ್ನಾಟಕ ದಲಿತ, ಹಿಂದುಳಿದ, ಪ್ರಗತಿಪರ, ರೈತ, ಕಾರ್ಮಿಕ, ಮಹಿಳಾ ಹಾಗೂ ಯುವ ಜನ ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳು ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಇದನ್ನೂ ಓದಿ: ಬುಕ್ ಆಫ್ ರೆಕಾರ್ಡ್ಸ್ ಬರೆದ 3 ವರ್ಷದ ಪುಟ್ಟ ಬಾಲಕಿ
ಶರಣರ ಚಳುವಳಿ ಜಾತಿ ವ್ಯವಸ್ಥೆಯ ವಿರುದ್ಧದ
ಸಮಾನತೆ, ಮಾನವೀಯತೆ ಮತ್ತು ಶೋಷಣಾ ವಿರೋಧಿ ಚಿಂತನೆಗಳನ್ನು ಹಿಂದುತ್ವದ ಚೌಕಟ್ಟಿನೊಳಗೆ ಕಟ್ಟಿಹಾಕುವ ಹುನ್ನಾರ ಸರಿಯಲ್ಲಾ. ಶರಣರ ಚಳುವಳಿ ಜಾತಿ ವ್ಯವಸ್ಥೆಯ ವಿರುದ್ಧದ ಪ್ರತಿರೋಧದ ಸಂಕೇತವಾಗಿತ್ತು. ಅದೇ ಶರಣರ ಹೆಸರಿನಲ್ಲಿ ಹಿಂದೂ ಸಮಾವೇಶ ಆಯೋಜಿಸಿರುವುದು ಸರಿಯಾದ ಉದ್ದೇಶವನ್ನು ಹೊಂದಿಲ್ಲಾ ಇದು ಖಂಡನಾರ್ಹ ಎಂದು ಹಿರಿಯ ಮುಖಂಡರಾದ ಗಿರಿಯಪ್ಪಗೌಡ ಬಾಣತಿಹಾಳ ಹೇಲಿದರು.
ಸಂಚಲನ ಮೂಡಿಸುತ್ತಿರುವ ಎರಡು ಬಸವ ಸಮಾವೇಶ
ಈಗಾಗಲೇ ನಗರದಲ್ಲಿ ಕಾರ್ಯಕ್ರಮಕ್ಕಾಗಿ ಆಹ್ವಾನಗಳು, ಕಾರ್ಯಕ್ರಮದ ತಯಾರಿಗೆ ಸಜ್ಜು ನಡೆಯುತ್ತಿದೆ ಮತ್ತೊಂದೆಡೆ ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ಪರ, ವಿರೋಧಗಳು ವ್ಯಕ್ತವಾಗುತ್ತಿದ್ದು, ಇದು ಸಂಚಲನಕ್ಕೆ ಕಾರಣವಾಗಿದೆ. ತಾಲೂಕಿನಲ್ಲಿ ಮೇ.18 ರಂದು ನಡೆಯಲಿರುವ ಬಸವ ಶರಣ ಹಿಂದೂ ಸಮಾವೇಶ ಕಾರ್ಯಕ್ರಮಕ್ಕೆ ಪ್ರಮುಖ ಲಿಂಗಾಯತ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದೆ. ಇದು ಬಸವಣ್ಣ ಮತ್ತು ಶರಣರ ಮೂಲ ತತ್ವಕ್ಕೆ ವಿರುದ್ಧವಾಗಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಆರೋಪಿಸಿದೆ. ಸಮಾಜದಲ್ಲಿ ವಿಭಜನೆ ಸೃಷ್ಠಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಆರ್. ಚೆನ್ನಬಸ್ಸು ವನದುರ್ಗ ಸೇರಿದಂತೆ ಮುಖಂಡರು ಕಿಡಿಕಾರಿದರು.
ಈ ಸಂದರ್ಭದಲ್ಲಿ ಅಯ್ಯಣ್ಣ ಕನ್ಯಾಕೊಳ್ಳೂರ, ಶಿವಣ್ಣ ಇಜೇರಿ, ಮಲ್ಲಿಕಾರ್ಜುನ ಪೂಜಾರಿ, ನೀಲಕಂಠ ಬಡಿಗೇರ, ಸಣ್ಣ ನಿಂಗಣ್ಣ ನಾಯ್ಕೋಡಿ , ಭೀಮರಾಯ ಹೊಸ್ಮನಿ, ಸೈಯದ್ ಖಾದ್ರಿ , ಸೇರಿದಂತೆ ಇತರರು ಇದ್ದರು.
