Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಮಾರುಕಟ್ಟೆಯಲ್ಲಿ ಸಿಗುವ ಈ ಹಣ್ಣನ್ನು ತಿನ್ನುವ ಮುನ್ನ ಇರಲಿ ಎಚ್ಚರ!
  • Healthy Life

ಮಾರುಕಟ್ಟೆಯಲ್ಲಿ ಸಿಗುವ ಈ ಹಣ್ಣನ್ನು ತಿನ್ನುವ ಮುನ್ನ ಇರಲಿ ಎಚ್ಚರ!

Praja Vahini April 27, 2026 1 minute read
WhatsApp Image 2026-04-27 at 16.12.34
Spread the love

ಸಾಮಾನ್ಯವಾಗಿ ಬೇಸಿಗೆ ಬಂತೆಂದರೆ ಸಾಕು ಹಣ್ಣಿನ ರಾಜ ಮಾವಿನ ಹಣ್ಣಿನ ಸೀಸನ್ ಶುರುವಾಗಿಯೇ ಬಿಡುತ್ತದೆ ಮಾವನ್ನು ನೋಡಿದರೆ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ ಆದರೆ ತಿನ್ನುವಾಗ ಮಾವಿನ ಹಣ್ಣನ್ನು ಸರಿಯಾಗಿ ಗಮನಿಸಿ ಆಮೇಲೆ ಖರೀದಿ ಮಾಡಿ ತಿನ್ನೋದು ಒಳಿತು.

ಹೌದು, ಮಾವಿನ ಹಣ್ಣಿನ ಹಂಗಾಮು ಆರಂಭವಾಗುತ್ತಿದ್ದಂತೆಯೇ ಎಲ್ಲರಲ್ಲೂ ಸಿಹಿಯಾದ ಹಣ್ಣುಗಳನ್ನು ಸವಿಯುವ ತವಕ ಹೆಚ್ಚಾಗುತ್ತದೆ. ಆದರೆ, ಹಣ್ಣುಗಳು ಬೇಗ ಮಾಗಲಿ ಎಂಬ ಗ್ರಾಹಕರ ಆಸೆಯನ್ನು ಕೆಲವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಹಣ್ಣುಗಳನ್ನು ಕೃತಕವಾಗಿ, ಅತೀ ವೇಗವಾಗಿ ಮಾಗಿಸಲು ‘ಕ್ಯಾಲ್ಸಿಯಂ ಕಾರ್ಬೈಡ್’ ಎಂಬ ಅಪಾಯಕಾರಿ ರಾಸಾಯನಿಕವನ್ನು ಬಳಸಲಾಗುತ್ತಿದೆ.

ಕಡಿಮೆ ವೆಚ್ಚದಲ್ಲಿ ಹಣ್ಣುಗಳನ್ನು ಮಾಗಿಸಿ ಮಾರುಕಟ್ಟೆಗೆ ತಲುಪಿಸುವ ಇವರ ಲಾಭದ ಆಸೆ ಗ್ರಾಹಕರ ಆರೋಗ್ಯಕ್ಕೆ ಸಂಚಕಾರ ತರುತ್ತಿದೆ.

ಸಾಮಾನ್ಯವಾಗಿ ಗಿಡದ ಮೇಲೆಯೇ ಸಹಜವಾಗಿ ಮಾಗಿದ ಹಣ್ಣುಗಳು ವಿಟಮಿನ್ A, C ಹಾಗೂ ಅನೇಕ ಪೋಷಕಾಂಶಗಳ ಸಮೃದ್ಧ ಮೂಲವಾಗಿರುತ್ತವೆ. ಇವು ನೈಸರ್ಗಿಕ ಸುವಾಸನೆ, ಸಮತೋಲಿತ ರುಚಿ ಮತ್ತು ಸಂಪೂರ್ಣ ಪೋಷಕಾಂಶಗಳನ್ನು ಹೊಂದಿರುತ್ತವೆ. ಆದರೆ ಕೃತಕವಾಗಿ ಮಾಗಿಸಿದ ಹಣ್ಣುಗಳು ಕೇವಲ ಹೊರಗಿನ ಬಣ್ಣವನ್ನು ಮಾತ್ರ ಬದಲಿಸುತ್ತವೆಯೇ ಹೊರತು ಒಳಗಿನ ಗುಣಮಟ್ಟವನ್ನಲ್ಲ. ಈ ಪ್ರಕ್ರಿಯೆಯಲ್ಲಿ ಬಳಕೆಯಾಗುವ ಕ್ಯಾಲ್ಸಿಯಂ ಕಾರ್ಬೈಡ್‌ನಲ್ಲಿ ಆರ್ಸೆನಿಕ್ ಮತ್ತು ಫಾಸ್ಫರಸ್‌ನಂತಹ ತೀವ್ರ ವಿಷಕಾರಿ ಅಂಶಗಳಿದ್ದು, ಇವು ಮಾನವ ದೇಹಕ್ಕೆ ಅತ್ಯಂತ ಹಾನಿಕಾರಕವಾಗಿವೆ.

ಈ ವಿಷಕಾರಿ ಹಣ್ಣುಗಳ ಸೇವನೆಯಿಂದ ಆರೋಗ್ಯದ ಮೇಲೆ ತಕ್ಷಣದ ಮತ್ತು ದೀರ್ಘಕಾಲೀನ ದುಷ್ಪರಿಣಾಮಗಳು ಉಂಟಾಗುತ್ತವೆ. ಸೇವಿಸಿದ ತಕ್ಷಣ ವಾಂತಿ, ಎದೆ ಹಾಗೂ ಹೊಟ್ಟೆ ಉರಿ, ಅತಿಯಾದ ಬಾಯಾರಿಕೆ ಮತ್ತು ಚರ್ಮದ ಉರಿ ಕಾಣಿಸಿಕೊಳ್ಳಬಹುದು. ಉಸಿರಾಟದ ವ್ಯವಸ್ಥೆಯ ಮೇಲೆ ಇದು ಕೆಮ್ಮು, ಉಬ್ಬಸ ಮತ್ತು ಶ್ವಾಸಕೋಶದ ತೊಂದರೆಗಳನ್ನು ಉಂಟುಮಾಡಿದರೆ, ನರಮಂಡಲದ ಮೇಲೆ ತಲೆನೋವು, ತಲೆತಿರುಗುವಿಕೆ, ನಿದ್ರಾಹೀನತೆ ಮತ್ತು ನೆನಪಿನ ಶಕ್ತಿ ಕುಂಠಿತಗೊಳ್ಳುವಂತಹ ಪರಿಣಾಮಗಳನ್ನು ಬೀರುತ್ತದೆ.

ಬಾಳೆಹಣ್ಣಿನ ಸಂದರ್ಭದಲ್ಲಿ ಹಣ್ಣು ಹಳದಿಯಾಗಿದ್ದರೂ ಕಾಂಡ ಮಾತ್ರ ಹಸಿರಾಗಿಯೇ ಇರುವುದು ಇವುಗಳನ್ನು ಗುರುತಿಸುವ ಸುಲಭ ಮಾರ್ಗವಾಗಿದೆ. ಇದನ್ನೂ ಓದಿ: ಪ್ರತಿದಿನ ಮೊಟ್ಟೆ ತಿಂದರೆ ಏನಾಗುತ್ತದೆ ಗೊತ್ತಾ?

ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಣ್ಣುಗಳನ್ನು ಖರೀದಿಸುವಾಗ ಮತ್ತು ಸೇವಿಸುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸುವುದು ಜಾಣತನ. ಹಣ್ಣುಗಳನ್ನು ತಿನ್ನುವ ಮೊದಲು ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು ಮತ್ತು ಸಾಧ್ಯವಾದಷ್ಟು ಸಿಪ್ಪೆಯನ್ನು ತೆಗೆದು ಬಳಸುವುದು ಉತ್ತಮ.

About the Author

Praja Vahini

Editor

View All Posts

Spread the love

Post navigation

Previous: ಮದುವೆ ಇಲ್ಲದೆಯೇ ಮಗು ಪಡೆಯುವುದರಲ್ಲಿ ತಪ್ಪೇನಿಲ್ಲ: ನಿತ್ಯಾ ಮೆನನ್
Next: ಸಿಲಿಕಾನ್ ಸಿಟಿ ಬಣ್ಣಿಸಿದ ಸಚಿವ ಪ್ರಿಯಾಂಕ ಖರ್ಗೆ

Views:

29

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.