Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಸಿಲಿಕಾನ್ ಸಿಟಿ ಬಣ್ಣಿಸಿದ ಸಚಿವ ಪ್ರಿಯಾಂಕ ಖರ್ಗೆ
  • Uncategorized

ಸಿಲಿಕಾನ್ ಸಿಟಿ ಬಣ್ಣಿಸಿದ ಸಚಿವ ಪ್ರಿಯಾಂಕ ಖರ್ಗೆ

Praja Vahini April 27, 2026 1 minute read
WhatsApp Image 2026-04-27 at 16.25.56
Spread the love

ಬೆಂಗಳೂರು: ಬೆಂಗಳೂರು ಜಗತ್ತನ್ನು ತನ್ನೊಳಗೆ ವಿಲೀನಗೊಳಿಸಿಕೊಂಡಿದ್ದರೂ, ತನ್ನದೇ ಆದ ಅಸ್ಮಿತೆಯನ್ನು ಉಳಿಸಿಕೊಂಡಿರುವ ವಿಶಿಷ್ಟ ನಗರ, ವಿಜ್ಞಾನ, ಸಂಸ್ಕೃತಿ ಮತ್ತು ಕಲೆಗಳು ಬೆಸೆದುಕೊಳ್ಳುವ; ಮಹತ್ವಾಕಾಂಕ್ಷೆ ಹಾಗೂ ಸಂವೇದನೆಗಳು ಜತೆಗೂಡುವ ನಗರ ಇದಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಬೆಂಗಳೂರು ನಗರವನ್ನು ಬಣ್ಣಿಸಿದ್ದಾರೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖ್ಯಾತ ಕಲಾವಿದ ಜೌಮೆ ಪ್ಲೆನ್ಸಾ ವಿನ್ಯಾಸಗೊಳಿಸಿದ ʼಬೆಂಗಳೂರಿನ ಆತ್ಮʼ ಎಂಬ ಭವ್ಯ, ಚಿತ್ತಾಕರ್ಷಕ ಕಲಾತ್ಮಕ ಶಿಲ್ಪವನ್ನು ಅನಾವರಣಗೊಳಿಸಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರು ಹಲವಾರು ಭಾಷೆಗಳು, ಅನೇಕ ಪಯಣಗಳು ಮತ್ತು ಅನೇಕ ಕನಸುಗಳಿಂದ ನಿರ್ಮಾಣಗೊಂಡ ನಗರ, ಕರ್ನಾಟಕದ ಪ್ರತಿಯೊಂದು ಭಾಗದಿಂದಲೇ ಅಲ್ಲದೆ ಭಾರತದ ಎಲ್ಲ ರಾಜ್ಯಗಳೂ ಸೇರಿದಂತೆ ಪ್ರಪಂಚದಾದ್ಯಂತ ಜನರು ಈ ನಗರಕ್ಕೆ ಬಂದಿದ್ದಾರೆ.

ಅವರು ಕಲಿಯಲು, ಕಟ್ಟಲು, ಸೃಷ್ಟಿಸಲು, ದುಡಿಯಲು ಮತ್ತು ಇಲ್ಲಿಯವರಾಗಲು ಬಂದಿದ್ದಾರೆ. ಇದುವೇ ಬೆಂಗಳೂರಿನ ಆತ್ಮದ ಸಂಕೇತ ಎಂದು ಕಲಾಕೃತಿಯ ಬಗ್ಗೆ ಅಭಿಪ್ರಾಯ ವ್ಯಕ್ತಗೊಳಿಸಿದರು.

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಟರ್ಮಿನಲ್-2ರಲ್ಲಿ ಅನಾವರಣಗೊಂಡಿರುವ ‘ಬೆಂಗಳೂರಿನ ಆತ್ಮ’ (Soul of Bengaluru), ಪ್ರಸಿದ್ಧ ಸ್ಪ್ಯಾನಿಷ್ ಕಲಾವಿದ ಜೌಮೆ ಪ್ಲೆನ್ಸಾ Jaume Plensa ವಿನ್ಯಾಸಗೊಳಿಸಿದ 16 ಅಡಿ ಎತ್ತರದ ಭವ್ಯ ಕಲಾಕೃತಿಯಾಗಿದೆ. ಇದು ವಿವಿಧ ಭಾಷೆಗಳ ಅಕ್ಷರಗಳನ್ನು ಒಳಗೊಂಡಿದ್ದು, ನಗರದ ವೈವಿಧ್ಯಮಯ ಸಂಸ್ಕೃತಿ ಮತ್ತು ಸೃಜನಶೀಲತೆಯನ್ನು ಪ್ರತಿನಿಧಿಸುತ್ತದೆ. ಕನ್ನಡ, ಅರೇಬಿಕ್, ಚೈನೀಸ್, ತಮಿಳು, ಹಿಂದಿ, ಇಂಗ್ಲಿಷ್ (ಲ್ಯಾಟಿನ್) ಸೇರಿದಂತೆ ವಿವಿಧ ಭಾಷೆಗಳ ಅಕ್ಷರಗಳು ಮತ್ತು ಗಣಿತದ ಚಿಹ್ನೆಗಳನ್ನು ಬಳಸಿ ರಚಿಸಲಾದ ಸಂಕೀರ್ಣ ಕಲಾಕೃತಿ ಇದಾಗಿದೆ.

ಈ ಸಂದರ್ಭದಲ್ಲಿ ಭಾರತದಲ್ಲಿನ ಸ್ಪೇನ್ ರಾಯಭಾರಿ ಜುವಾನ್ ಆಂಟೋನಿಯೊ ಮಾರ್ಚ್ ಪೂಜೋಲ್ ಶಿಲ್ಪ ಅನಾವರಣಗೊಳಿಸಿದರು. ಸಚಿವ ಪ್ರಿಯಾಂಕ್ ಖರ್ಗೆ, ಉದ್ಯಮಿ ಕಿರಣ್ ಮಜುಂದಾರ್ ಶಾ ಹಾಗೂ ಬಿಐಎಎಲ್ ಸಿಇಒ ಹರಿ ಮರಾರ್ ಉಪಸ್ಥಿತರಿದ್ದರು.

About the Author

Praja Vahini

Editor

View All Posts

Spread the love

Post navigation

Previous: ಮಾರುಕಟ್ಟೆಯಲ್ಲಿ ಸಿಗುವ ಈ ಹಣ್ಣನ್ನು ತಿನ್ನುವ ಮುನ್ನ ಇರಲಿ ಎಚ್ಚರ!
Next: ಡಿಕೆಶಿ ಭೇಟಿ ಮಾಡಿದ ಈಡಿಗ ಸಮುದಾಯದ ಪೀಠಾಧಿಪತಿಗಳು

Views:

28

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.