ಸಿನಿಮಾ ಪ್ರಪಂಚದಲ್ಲಿ ಬದುಕುವ ಅದೆಷ್ಟೋ ನಟ, ನಟಿಯರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅಷ್ಟಾಗಿ ಹೇಳಿಕೊಳ್ಳುವುದಿಲ್ಲ. ಆದರೆ ಸ್ಯಾಂಡಲ್‌ವುಡ್ ನಲ್ಲಿ ಮಿರ, ಮಿರ ಮಿಂಚಿದ ನಟಿ ನಿತ್ಯ ಮೆನನ್ ಅವರು ಇದೀಗ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮನವಿಸಿ ಮಾತನಾಡಿದ್ದಾರೆ.
ಹೌದು, ದಶಕಗಳ ಕಾಲ ಸ್ಯಾಂಡಲ್‌ವುಡ್, ಟಾಲಿವುಡ್ ಮತ್ತು ಕಾಲಿವುಡ್‌ನಲ್ಲಿ ಸತತ ಹಿಟ್‌ಗಳನ್ನು ನೀಡಿ, ‘ನ್ಯಾಷನಲ್ ಅವಾರ್ಡ್’ ಮುಡಿಗೇರಿಸಿಕೊಂಡಿರುವ ಈ ಪ್ರತಿಭಾವಂತ ನಟಿ, ಈಗ ತಮ್ಮ ವೈಯಕ್ತಿಕ ಜೀವನದ ಬಗ್ಗೆ ನೀಡಿರುವ ಒಂದು ಹೇಳಿಕೆ ಇಂಟರ್ನೆಟ್‌ನಲ್ಲಿ ಕಿಚ್ಚು ಹಚ್ಚಿದೆ.!
ನಟಿ ನಿತ್ಯಾ ಮೆನನ್ ನವರು ಯಾವುದೇ ಒಂದು ಸಿನಿಮಾ ಮಾಡಬೇಕಾದರೆ ಬಹಳ ಎಚ್ಚರಿಕೆ ವಹಿಸುತ್ತಾರೆ. ಯಾವ ಪಾತ್ರ ಸೂಕ್ತವಾದದ್ದು, ಆ ಪಾತ್ರದಿಂದ ಸಮಾಜಕ್ಕೆ ಏನು ಸಂದೇಶ ನೀಡುತ್ತದೆ ಎಂದು ಅಚ್ಚುಕಟ್ಟಾಗಿ ಅಳೆದು ತೂಗಿ ನಟನೆ ಮಾಡಲು ಮುಂದಾಗುತ್ತಾರೆ. ಆದರೆ ವೈಯಕ್ತಿಕ ಜೀವನದ ಬಗ್ಗೆ ಹೇಳಿರುವ ಅದೊಂದು ಮಾತು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಸುದ್ದಿ ಆಗುತ್ತಿದೆ.
ನಿತ್ಯಾ ಅವರಿಗೆ “ಮದುವೆಗೂ ಮುನ್ನ ಅಥವಾ ಮದುವೆ ಇಲ್ಲದೆಯೇ ಗರ್ಭಿಣಿಯಾಗುವುದು ಸರಿಯೇ?” ಎಂಬ ಪ್ರಶ್ನೆ ಎದುರಾಗಿತ್ತು. ಇದಕ್ಕೆ ಯಾವುದೇ ಹಿಂಜರಿಕೆ ಇಲ್ಲದೆ ಉತ್ತರಿಸಿದ ನಿತ್ಯಾ, “ಮದುವೆ ಇಲ್ಲದೆಯೇ ಮಗು ಪಡೆಯುವುದರಲ್ಲಿ ತಪ್ಪೇನಿಲ್ಲ. ನಿಮಗೆ ಮಗು ಬೇಕು ಆದರೆ ಮದುವೆಯಾದ ಜೀವನ ಬೇಡ ಎಂದರೆ ಅದರಲ್ಲಿ ತಪ್ಪೇನಿದೆ? ಈಗಿನ ಕಾಲದಲ್ಲಿ ಅದಕ್ಕೆ ಸಾಕಷ್ಟು ತಾಂತ್ರಿಕ ಅವಕಾಶಗಳಿವೆ. ಅನೇಕರು ಅದನ್ನು ಅನುಸರಿಸುತ್ತಿದ್ದಾರೆ ಕೂಡ,” ಎಂದು ಸಖತ್ ಬೋಲ್ಡ್ ಆಗಿ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಡಾ. ರಾಜಕುಮಾರ್ ಸಮಾದಿ ವಿವಾದ-ನಾನು ದಬ್ಬಾಳಿಕೆಯನ್ನು ಒಪ್ಪಲ್ಲ: ನಟ ಚೇತನ್
ಅಂದಹಾಗೆ, ನಿತ್ಯಾ ಮೆನನ್ ಈ ರೀತಿ ಮಾತನಾಡಲು ಒಂದು ವಿಶೇಷ ಕಾರಣವೂ ಇದೆ. ಕಳೆದ ವರ್ಷ ಅವರು ನಟಿಸಿದ ‘ಕಾದಲಿಕ್ಕಾ ನೆರಮಿಲ್ಲೆ’ ಎಂಬ ತಮಿಳು ಸಿನಿಮಾ ಇದೇ ವಿಷಯದ ಸುತ್ತ ಸಾಗಿತ್ತು. ಮದುವೆ ಆಗದೆ ಐವಿಎಫ್ ಮೂಲಕ ಮಗು ಪಡೆದುಕೊಳ್ಳುವ ಮಹಿಳೆಯ ಪಾತ್ರದಲ್ಲಿ ನಿತ್ಯಾ ಕಾಣಿಸಿಕೊಂಡಿದ್ದರು. ಆ ಸಿನಿಮಾದ ಪ್ರಚಾರದ ಸಮಯದಲ್ಲಿ ನೀಡಿದ ಈ ಹಳೆಯ ಸಂದರ್ಶನ ಈಗ ಮತ್ತೆ ಸದ್ದು ಮಾಡುತ್ತಿದೆ. ಪಾತ್ರಕ್ಕಾಗಿ ಅವರು ಅಂದು ಅಂತಹ ಮಾತುಗಳನ್ನಾಡಿದ್ದರೂ, ಅವರ ಆಲೋಚನೆಗಳು ಆಧುನಿಕ ಜಗತ್ತಿನ ಮಹಿಳೆಯರ ಸ್ವಾತಂತ್ರ್ಯವನ್ನು ಬಿಂಬಿಸುತ್ತಿವೆ ಎಂಬ ಚರ್ಚೆ ನಡೆಯುತ್ತಿದೆ.
