ಬೆಂಗಳೂರು: ಹಲವು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಸಚಿವ ಡಿ ಸುಧಾಕರ್ ಅವರನ್ನು ಕಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರನ್ನು ಇಂದು (ಶನಿವಾರ ಏಪ್ರಿಲ್ 25) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ಮಾಡಿ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ.
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಸಚಿವರಿಗೆ ಇನ್ನೂ ಕೂಡ ಪ್ರಜ್ಞೆ ಬಂದಿಲ್ಲ. ಶ್ವಾಸಕೋಶ ಟ್ರಾನ್ಸ್ ಪ್ಲಾಂಟ್ ಮಾಡಬೇಕಾದ್ರೆ ಮೆದಳು ಪ್ರಜ್ಞೆಯಲ್ಲಿರಬೇಕು. ಈ ಬಗ್ಗೆ ವೈದ್ಯರು ನಾಳೆ ತೀರ್ಮಾನ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ದೆಹಲಿಯಲ್ಲಿ ಡಿಕೆ ಬ್ರದರ್ಸ್ ಹೈಕಮಾಂಡ್ ಜೊತೆ ಮಹತ್ವದ ಮಾತುಕತೆ?
ಸುಧಾಕರ್ ಅವರ ಕುಟುಂಬದವರ ಜೊತೆ ಮಾತನಾಡಿದ್ದೇನೆ. ಸಚಿವರು ಈಗ ಚೇತರಿಸಿಕೊಳ್ಳುತ್ತಿದ್ದಾರೆ. ವೆಂಟಲೇಷನಲ್ಲಿ ಬೇರೆ ಎಲ್ಲಾ ಆರ್ಗನ್ಸ್ ಸ್ಟೇಬಲ್ಲಾಗಿವೆ. ಮೆದಳು ಮಾತ್ರ ಪ್ರಜ್ಞೆ ಇಲ್ಲ. ನಾಳೆ ವೈದ್ಯರು ಸಿಟಿ ಸ್ಕ್ಯಾನ್ ಮಾಡಲಿದ್ದಾರೆ. ಅದಾದ ನಂತರ ಕಂಡಿಷನ್ ಏನು ಎಂದು ಗೊತ್ತಾಗಲಿದೆ ಎಂದರು.
