ಚೆನ್ನೈ: ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಪ್ರಾರಂಭವಾಗುತ್ತಿದ್ದಂತೆ ಎಲ್ಲಾ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ಕೈಗೊಂಡಿದ್ದು, ಹೊಸದಾಗಿ ಪಕ್ಷ ಕಟ್ಟಿರುವ ತಮಿಳು ಚಿತ್ರದ ರಂಗದ ನಟ ದಳಪತಿ ವಿಜಯ್ ಅವರು ರಾಜಕೀಯ ನಾಯಕರ ವಿರುದ್ಧ ಸಮರಸರಿದ್ದಾರೆ.
ಚೆನ್ನೈನಲ್ಲಿ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ನಟ ಆಗಿರಬಹುದು ಆದರೆ ನೀವು ನಾಟಕಕಾರರು ಎಂದು ಆಡಳಿತ ಪಕ್ಷದ ಸಚಿವರಿಗೆ ತಿರುಗೇಟು ನೀಡಿದ್ದಾರೆ.
“ಹೌದು, ನಾನು ನಟ. ಆದರೆ ರಾಜಕೀಯಕ್ಕೆ ಬಂದ ಬಳಿಕ ನಾನು ಎಲ್ಲೂ ನಟಿಸಿಲ್ಲ. ನೀವು ಮಾಡುತ್ತಿರುವುದು ನಾಟಕದ ಮೇಲೆ ನಾಟಕ. ಹಾಗಿದ್ದರೆ ನಿಮ್ಮನ್ನೇ ನಟ-ನಟಿಯರು ಎಂದು ಕರೆಯಬೇಕೇ?” ಎಂದು ಪ್ರಶ್ನಿಸಿದರು. ಇದನ್ನೂ ಓದಿ: ದುನಿಯಾ ವಿಜಯ್ಗೆ ಎದುರಾಯಿತು ಸಂಕಷ್ಟ!
ಕರೂರ್ ಕಾಲ್ತುಳಿತ ದುರಂತದ ವಿಚಾರದಲ್ಲಿಯೂ ಸರ್ಕಾರ ತಮ್ಮ ಮೇಲೆ ಹೊಣೆ ಹಾಕುತ್ತಿರುವುದನ್ನು ತೀವ್ರವಾಗಿ ಖಂಡಿಸಿದ ಅವರು, “ಪೊಲೀಸರ ಅನುಮತಿ ಪಡೆದೇ ಕಾರ್ಯಕ್ರಮ ನಡೆಸಿದ್ದೆ. ಎಲ್ಲವೂ ಲೈವ್ ಆಗಿತ್ತು. ಆದರೂ ನನ್ನನ್ನೇ ಗುರಿಯಾಗಿಸುವುದು ಯಾಕೆ?” ಎಂದು ಆಕ್ರೋಶ ವ್ಯಕ್ತಪಡಿಸಿದರು.
