Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ದುನಿಯಾ ವಿಜಯ್‌ಗೆ ಎದುರಾಯಿತು ಸಂಕಷ್ಟ!
  • Bangalore
  • Cinema
  • Crime
  • State

ದುನಿಯಾ ವಿಜಯ್‌ಗೆ ಎದುರಾಯಿತು ಸಂಕಷ್ಟ!

Praja Vahini April 21, 2026 1 minute read
WhatsApp Image 2026-04-21 at 16.58.27
Spread the love

ಬೆಂಗಳೂರು: ಇತ್ತೀಚಿಗ ಸಿಲಿಕಾನ್ ಸಿಟಿ ಬೆಂಗಳೂರು ನಗರದಲ್ಲಿ ಜಾಂಬಿ  ಡ್ರಗ್ಸ್ ಸೇವನೆ ಮಾಡಿ ವ್ಯಕ್ತಿಯೊಬ್ಬರು ನಿಂತಲ್ಲಿ ನಿಂತು ವಿಚಿತ್ರ ವರ್ತನೆ  ಮಾಡುತ್ತಿದ್ದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗಿತ್ತು.

ಅಲ್ಲದೆ ಜಾಂಬಿ ಡ್ರಗ್ಸ್ ಕುರಿತಾಗಿ ಕನ್ನಡದ ಖ್ಯಾತ ನಟ ದುನಿಯಾ ವಿಜಯ್ ಅವರು ಕೂಡ ವಿಡಿಯೋ ಒಂದನ್ನು ಮಾಡಿ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದರು. ಆದರೆ ಆ ವ್ಯಕ್ತಿ ಜಾಂಬಿ ಡ್ರಗ್ಸ್ ಸೇವನೆ ಮಾಡಿದ್ರು ಎಂಬ ಸ್ಪಷ್ಟನೆ ಇಲ್ಲದೆ ವಿಡಿಯೋ ಶೇರ್ ಮಾಡಿರೋದು ತಪ್ಪು ಎಂದು ತಿಳಿಯುತ್ತಿದ್ದಂತೆ ತಮ್ಮ Instagram ನಲ್ಲಿದ್ದ ವಿಡಿಯೋವನ್ನು ನಟ ದುನಿಯಾ ವಿಜಯ್ ಅವರು ಡಿಲೀಟ್ ಮಾಡಿದ್ದರು.

ಇನ್ನು ಡಿಲೀಟ್ ಮಾಡಿದ ವಿಡಿಯೋವನ್ನು ರಿಟ್ರಿವ್ ಗಾಗಿ ಬಾಗಲೂರು ಪೊಲೀಸರು ಇನ್ಸ್ಟಾಗ್ರಾಮ್ ಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಅಲ್ಲದೆ ಇದೇ ವಿಡಿಯೋವನ್ನು ಬೆಂಗಳೂರಿನ ಮಾಜಿ ಪೊಲೀಸ್ ಕಮಿಷನರ್ ಬಾಸ್ಕರ್ ರಾವ್ ಕೂಡ ದುನಿಯಾ ವಿಜಯ್ ರೀತಿಯಲ್ಲಿ ವೈರಲ್ ವಿಡಿಯೋ ಶೇರ್ ಮಾಡಿ, ಬಳಿಕ ಡಿಲೀಟ್ ಮಾಡಿದ್ದರು. ಅವರಿಗೂ ಈಗ ಸಂಕಷ್ಟ ಎದುರಾಗಲಿದೆ. ಇದನ್ನೂ ಓದಿ: ನನಗೆ ಕಾಂಗ್ರೆಸ್ ಏನು ಕಡಿಮೆ ಮಾಡಿಲ್ಲ: ಜಮೀರ್ ಅಹ್ಮದ್

ವಿಡಿಯೋದ ಬಗ್ಗೆ ಪೂರ್ವಪರ ತಿಳಿಯದೇ ಸುಳ್ಳು ಮಾಹಿತಿ ಇರುವ ವಿಡಿಯೋ ಶೇರ್ ಮಾಡಿರುವ ಬಗ್ಗೆ ಸ್ಪಷ್ಟನೆ ಕೊಡಲು ಈವರೆಗೆ ಒಟ್ಟು 15 ಮಂದಿಗೆ ನೋಟಿಸ್ ಕೊಡಲಾಗಿದೆ. ಅದೇ ರೀತಿ ನಟ ದುನಿಯಾ ವಿಜಯ್ ಹಾಗೂ ಮಾಜಿ ಪೊಲೀಸ್ ಕಮಿಷನರ್ ಬಾಸ್ಕರ್ ರಾವ್ ಕೂಡ ಶೇರ್ ಮಾಡಿದ್ದು, ವಿಡಿಯೋ ರಿಟ್ರೀವ್ ಆಗುತ್ತಿದ್ದಂತೆ ನೋಟಿಸ್ ಕೊಡಲು ಬಾಗಲೂರು ಪೊಲೀಸರು ಚಿಂತನೆ ನಡೆಸಿದ್ದಾರೆ. ಒಂದು ವೇಳೆ ಜಾಂಬಿ ಡ್ರಗ್ಸ್ ವೈರಲ್ ವಿಡಿಯೋ ರಿಟ್ರೀವ್ ಆಗಿ ಬಂದರೆ ಸ್ಯಾಂಡಲ್‌ವುಡ್ ನಟ ದುನಿಯಾ ವಿಜಯ್, ಮಾಜಿ ಐಪಿಎಸ್ ಭಾಸ್ಕರ್ ರಾವ್ ಇಬ್ಬರೂ ವಿಚಾರಣೆ ಎದುರಿಸಬೇಕಾದ ಅನಿವಾರ್ಯತೆ ಎದುರಾಗಲಿದೆ.

 

About the Author

Praja Vahini

Editor

View All Posts

Spread the love

Post navigation

Previous: ನನಗೆ ಕಾಂಗ್ರೆಸ್ ಏನು ಕಡಿಮೆ ಮಾಡಿಲ್ಲ: ಜಮೀರ್ ಅಹ್ಮದ್
Next: ನಿಮಗೆ ಹೊಟ್ಟೆ ಬೊಜ್ಜಿನ ಸಮಸ್ಯೆ ಇದಿಯಾ? ಹಾಗಾದ್ರೆ ಹೀಗೆ ಮಾಡಿದ್ರೆ ಕೊಬ್ಬು ಕರಗುವುದು ಖಚಿತ!

Views:

48

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.