ಶಹಾಪುರ: ನಗರದ ಇಂದಿರಾನಗರ ಬಡಾವಣೆಯ ನಿವಾಸಿ ನರಸಿಂಗ್ ಕುಮಾರ ತಂದೆ ದತ್ತುರಾವ್ ಚೋಳಕರ್ (24) ಏ.15 ರಂದು ಕಾಣೆಯಾಗಿದ್ದ ಯುವಕ ಇಂದು (ಮಂಗಳವಾರ ಏ. 21) ಯಾದಗಿರಿಯ ಭೀಮ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಘಟನೆ ವಿವರ
ಮೃತ ನರಸಿಂಗ್ ತಂದೆ ದತ್ತುರಾವ್ ಅವರು ನಗರ ಠಾಣೆಯಲ್ಲಿ ದೂರಿನಲ್ಲಿ ಉಲ್ಲೇಖಿಸಿದರನ್ವಯ ನನಗೆ ಮೂರು ಜನ ಗಂಡು ಮಕ್ಕಳು ಇದ್ದು, ನನ್ ಮಗ ನರಸಿಂಗ್ ಕುಮಾರ ಸೇರಿ ಇನ್ನಿಬ್ಬರು ಸಹೋದರರು ಕೂಡಿಕೊಂಡು ಬಟ್ಟೆ ವ್ಯಾಪಾರ ಮಾಡಿಕೊಂಡು ಜೀವನಸಾಗಿಸುತ್ತಿದ್ದು, ಏ. 15 ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಬಟ್ಟೆ ಅಂಗಡಿಯನ್ನು ತೆರೆದಿದ್ದಾನೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ಹೊಟ್ಟೆ ನೋವು ಎಂದು ಹೇಳಿದ್ದು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು, ಆಸ್ಪತ್ರೆಯಲ್ಲಿ ಗ್ಲೂಕೊಸ್ ಹಚ್ಚಿದ್ದರಿಂದ ಸಂಜೆ 5 ಗಂಟೆಗೆ ಮನೆಗೆ ಕರೆದುಕೊಂಡು ಹೋಗಿದ್ದೇನೆ.
ನಂತರ ನಾನು ನನ್ನ ಮಗನನ್ನು ಮನೆಯಲ್ಲಿ ಬಿಟ್ಟು ಮತ್ತೆ ಬಟ್ಟೆ ಅಂಗಡಿಗೆ ಹೋಗಿದ್ದೇನೆ. ಸಂಜೆ 6 ಗಂಟೆ ಸುಮಾರಿಗೆ ಯಾರಿಗೂ ಹೇಳದೆ ಕೇಳದೆ ಮನೆಯಿಂದ ಹೋಗಿದ್ದು, ರಾತ್ರಿ 8 ಗಂಟೆ ಸುಮಾರಿಗೆ ಫೊನ್ ಸ್ವಿಚ್ ಆಫ್ ಆಗಿದೆ. ಬಳಿಕ ಸಂಭಂಧಿಕರಿಗೆ ಕರೆ ಮಾಡಿ ವಿಚಾರಿಸಿದ್ದು, ಎಲ್ಲಿಯೂ ಪತ್ತೆಯಾಗದ ಹಿನ್ನಲೇ ರಾತ್ರಿ ನಗರ ಠಾಣೆಗೆ ಹೋಗಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಲಾಗಿದೆ ಎಂದು ಮೃತ ನರಸಿಂಗ್ನ ತಂದೆ ದತ್ತುರಾವ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದೀಗ ಯುವಕನ ಶವ ನದಿಯಲ್ಲಿ ಪತ್ತೆಯಾಗಿದ್ದು ಇಡೀ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಇದನ್ನೂ ಓದಿ: ನನಗೆ ಕಾಂಗ್ರೆಸ್ ಏನು ಕಡಿಮೆ ಮಾಡಿಲ್ಲ: ಜಮೀರ್ ಅಹ್ಮದ್
ಕೊಲೆ ಶಂಕೆ
ಏ.15 ರಂದು ಮನೆಯಿಂದ ಹೋದ ನನ್ನ ಮಗನನ್ನು ಹುಡುಕಿಕೊಡಲು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ನನ್ನ ಮಗನನ್ನು ಯಾರೋ ಕೊಲೆ ಮಾಡಿದ್ದಾರೆ. ಯಾವುದೊ ಒತ್ತಡದಿಂದ ನನ್ನ ಮಗ ನರಳುತ್ತಿದ್ದು, ಈ ಬಗ್ಗೆ ಪಾರದರ್ಶಕವಾಗಿ ತನಖೆ ಮಾಡಬೇಕು ಎಂದು ದತ್ತುರಾವ್ ಚೋಳಕರ್ ಮೃತ ಯುವಕನ ತಂದೆ ಹೇಳಿದ್ದಾರೆ.
ಏ. 15 ರಂದು ಮೃತ ಯುವಕ ನರಸಿಂಗ್ ಕಾಣೆಯಾಗಿದ್ದಾನೆ ಎಂದು ಅವರ ತಂದೆ ಠಾಣೆಗೆ ಬಂದು ದೂರು ದಾಖಲಿಸಿದ್ದರು. ಈ ಬಗ್ಗೆ ತನಿಖೆಯ ಭಾಗವಾಗಿ ಪರಿಶೀಲಿಸಿದಾಗ ಮೃತ ಯುವಕನು ಯಾವುದೊ ಕಾರಣಕ್ಕೆ ಕಿನ್ನತೆಗೆ ಒಳಗಾಗಿದ್ದ ಎಂದು ತಿಳಿದಿದ್ದು, ದೋರನಹಳ್ಳಿ ಗ್ರಾಮದ ಬಳಿ ಬೈಕ್ ಸ್ಕೀಡ್ ಆಗಿದೆ. ಅಲ್ಲಿದ್ದ ಕೇಲ ಗ್ರಾಮಸ್ಥರು ಸಹಕರಿಸಿದ್ದರಿಂದ ಅಲ್ಲಿಂದ ಯಾವುದೊ ಬಾಡಿಗೆ ಕಾರ್ನಲ್ಲಿ ಯಾದಗಿರಿಗೆ ಹೋಗಿದ್ದಾನೆ. ನಂತರ ಡ್ರೈವರ್ಗೆ ಬ್ರೀಡ್ಜ್ ಬಳಿ ಬಿಡಲು ಹೇಳಿದ್ದಾನೆ ಅಲ್ಲಿಯೇ ಈ ದುರ್ಘಟನೆ ನಡೆದಿದ್ದು ಈ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆ ಎಂದು ಶಹಾಪುರ ಪಿಐ ಎಸ್.ಎಂ ಪಾಟೀಲ್ ತಿಳಿಸಿದ್ದಾರೆ.
