ಇತ್ತೀಚಿನ ದಿನಗಳಲ್ಲಿ ಮನುಷ್ಯ ತನ್ನ ಒತ್ತಡದ ಜೀವನದಲ್ಲಿ ತನ್ನ ಆರೋಗ್ಯದ ಮೇಲೆ ಹಲವಾರು ಸಮಸ್ಯೆಗಳನ್ನು ತಾನಾ, ತಾನಾಗಿಯೇ ತಂದುಕೊಳ್ಳುತ್ತಾನೆ. ಅದರಲ್ಲೂ ಕೂಡ ಪ್ರತಿಯೊಬ್ಬ ಮನುಷ್ಯನಿಗೂ ಹೊಟ್ಟೆ ಬೊಜ್ಜು ಎಂಬುದು ದೊಡ್ಡ ಸಮಸ್ಯೆಯಾಗಿ ಪರಿಗಣಿಸುತ್ತದೆ.
ಹೌದು, ಇತ್ತೀಚಿನ ದಿನಗಳಲ್ಲಿ ತಮ್ಮ ಜೀವನ ಶೈಲಿಯಲ್ಲಿ ಸರಿಯಾಗಿ ತೂಕದ ಮೇಲೆ ನಿಯಂತ್ರಣ ಇಲ್ಲದೆ ಹೆಚ್ಚಾಗಿ ತಿನ್ನುವುದರ ಜೊತೆಗೆ ಹೆಚ್ಚಿನ ಒತ್ತಡದಿಂದ ಹೊಟ್ಟೆ ಬೊಜ್ಜು ಹೆಚ್ಚಾಗುತ್ತದೆ. ಇಂಥವರು ಜಿಮ್ ಇಲ್ಲದೆ ಯಾವುದೇ ಡಯಟ್ವಿಲ್ಲದೆ ಮನೆಯಲ್ಲಿಯೇ ಕೆಲವು ಸರಳ ಉಪಯೋಗಗಳನ್ನು ಮಾಡುವುದರಿಂದ ಹೊಟ್ಟೆ ಬೊಜ್ಜನ್ನು ಕರಗಿಸಬಹುದು.
ಎದ್ದ ತಕ್ಷಣ ನೀರು ಕುಡಿಯಿರಿ
ರಾತ್ರಿಯ ನಿದ್ರೆಯ ಬಳಿಕ ದೇಹದಲ್ಲಿ ನೀರಿನ ಕೊರತೆ ಉಂಟಾಗುತ್ತದೆ. ಆದ್ದರಿಂದ ಬೆಳಿಗ್ಗೆ ಎದ್ದ ಕೂಡಲೇ ಕನಿಷ್ಠ ಒಂದು ಗ್ಲಾಸ್ ನೀರು ಕುಡಿಯುವುದು ಉತ್ತಮ. ಇದು ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕಿ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಚುರುಕಾಗಿ ನಡೆಯುವ ಅಭ್ಯಾಸ
ನೀರು ಕುಡಿದ ನಂತರ 20–30 ನಿಮಿಷಗಳ ಕಾಲ ವೇಗವಾಗಿ ನಡೆಯಿರಿ. ‘ಬ್ರಿಸ್ಕ್ ವಾಕಿಂಗ್’ ಹೃದಯ ಆರೋಗ್ಯಕ್ಕೆ ಒಳ್ಳೆಯದು. ಜೊತೆಗೆ ಕ್ಯಾಲರಿಗಳನ್ನು ವೇಗವಾಗಿ ಕರಗಿಸಿ ದೇಹವನ್ನು ದಿನಪೂರ್ತಿ ಚುರುಕಾಗಿರಿಸುತ್ತದೆ.
ಪ್ರೋಟೀನ್ ಸಮೃದ್ಧ ಉಪಹಾರ
ಬೆಳಗಿನ ಉಪಹಾರದಲ್ಲಿ ಪ್ರೋಟೀನ್ ಇರಬೇಕು. ಮೊಟ್ಟೆ, ಬೇಳೆಕಾಳುಗಳು ಅಥವಾ ಮೊಳಕೆ ಬಂದ ಕಾಳುಗಳು ಹೊಟ್ಟೆ ತುಂಬಿದ ಅನುಭವ ನೀಡುತ್ತವೆ. ಇದರಿಂದ ಪದೇ ಪದೇ ಹಸಿವಾಗುವುದಿಲ್ಲ ಮತ್ತು ಜಂಕ್ ಫುಡ್ ಸೇವನೆ ಕಡಿಮೆಯಾಗುತ್ತದೆ.
ಇಷ್ಟವಾದ ವ್ಯಾಯಾಮ ಆಯ್ಕೆಮಾಡಿ
ತೂಕ ಇಳಿಸಲು ಜಿಮ್ ಅವಶ್ಯಕವಿಲ್ಲ. ಈಜು, ಡ್ಯಾನ್ಸ್, ಬಾಕ್ಸಿಂಗ್ ಅಥವಾ ವೇಟ್ ಲಿಫ್ಟಿಂಗ್ – ನಿಮಗೆ ಇಷ್ಟವಾದ ಯಾವುದನ್ನಾದರೂ ವ್ಯಾಯಾಮವಾಗಿ ಆಯ್ಕೆಮಾಡಬಹುದು. ಇಷ್ಟವಾದ ಚಟುವಟಿಕೆ ಮಾಡಿದರೆ ನಿಯಮಿತವಾಗಿ ಮುಂದುವರಿಸಲು ಸುಲಭ.
ಧ್ಯಾನ ಮಾಡುವುದು
ಮಾನಸಿಕ ಒತ್ತಡವೂ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಬೆಳಿಗ್ಗೆ ಕೆಲವು ನಿಮಿಷ ಧ್ಯಾನ ಅಥವಾ ಉಸಿರಾಟ ವ್ಯಾಯಾಮ ಮಾಡುವುದು ಮನಸ್ಸನ್ನು ಶಾಂತಗೊಳಿಸಿ ಹಾರ್ಮೋನ್ ಸಮತೋಲನ ಕಾಪಾಡಲು ಸಹಾಯ ಮಾಡುತ್ತದೆ. ತೂಕ ಇಳಿಕೆಗಾಗಿ ದೊಡ್ಡ ಬದಲಾವಣೆಗಳಿಗಿಂತ, ಈ ರೀತಿಯ ಸಣ್ಣ ಮತ್ತು ನಿರಂತರ ಅಭ್ಯಾಸಗಳೇ ಹೆಚ್ಚು ಪರಿಣಾಮಕಾರಿ.
