ಬೆಂಗಳೂರು: ವಿದ್ಯಾರ್ಥಿಗಳ ಬದುಕಿನಲ್ಲಿ ಪ್ರಮುಖವಾದ ಘಟ್ಟವೆಂದರೆ ಅದು 10ನೇ ತರಗತಿ ಪರೀಕ್ಷೆ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ.
ಹೌದು, ನಾಳೆ (ಗುರುವಾರ ಏಪ್ರಿಲ್ 9) ದ್ವಿತೀಯ ಪಿಯುಸಿ ಪರೀಕ್ಷೆ 1ರ ಫಲಿತಾಂಶ ಪ್ರಕಟವಾಗಲಿದ್ದು, ಮಧ್ಯಾಹ್ನ 3 ಗಂಟೆಗೆ ವೆಬ್ಸೈಟ್ನಲ್ಲಿ ಲಭ್ಯವಾಗಲಿದೆ.
ಇನ್ನು ಇಲಾಖೆ ವೆಬ್ಸೈಟ್ https://karresults.nic.in ಫಲಿತಾಂಶ ಲಭ್ಯವಾಗಲಿದೆ ಜೊತೆಗೆ Karnatakaone ಮೊಬೈಲ್ ಆಪ್ ಮೂಲಕ ಫಲಿತಾಂಶ ಪಡೆಯಬಹುದು ಹಾಗೂ ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ, ವಾಟ್ಸಪ್, SMS ಮೂಲಕವೂ ಫಲಿತಾಂಶ ರವಾನೆ ಆಗಲಿದೆ. ಇದನ್ನೂ ಓದಿ: ಏ.9 ರಂದು ಪುದುಚೇರಿ, ಕೇರಳ, ಅಸ್ಸಾಂ ವಿಧಾನಸಭಾ ಚುನಾವಣೆ ಹೇಗಿದೆ ಸಿದ್ಧತೆ?
ಇನ್ನೂ ಈ ವರ್ಷ ಮೊದಲ ಬಾರಿಗೆ ಡಿಜಿ ಲಾಕರ್ನಲ್ಲಿ ವಿದ್ಯಾರ್ಥಿಗಳ ಅಂಕಪಟ್ಟಿ ಲಭ್ಯವಾಗಲಿದೆ. ನಾಳೆ ಮಧ್ಯಾಹ್ನ 3 ಗಂಟೆಗೆ ಅಂಕಪಟ್ಟಿ ಡಿಜಿ ಲಾಕರ್ನಲ್ಲಿ ಲಭ್ಯವಿರಲಿದೆ. https://www.digilocker.gov.in/ ಬಳಸಿ ಅಂಕಪಟ್ಟಿ ಡೌನ್ಲೋಡ್ ಮಾಡಿಕೊಳ್ಳಬಹುದು. ನಾಳೆ 3 ಗಂಟೆ ನಂತರ ಕಾಲೇಜುಗಳಿಗೆ ಫಲಿತಾಂಶ ಪಟ್ಟಿ ರವಾನೆ ಆಗಲಿದೆ.
