ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿರುವ ಆ ಒಂದೇ ಒಂದು ಮಾತು ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸುವುದರ ಜೊತೆಗೆ ಬಿಜೆಪಿ ನಾಯಕರು ಇದೀಗ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಹೌದು, ಬಿಜೆಪಿ ಮತ್ತು ಆರ್ ಎಸ್ ಎಸ್ ನವರನ್ನು ಕೊಲ್ಲಬೇಕು ಎಂಬ ಮಾತಿಗೆ ಇದೀಗ ಕೇವಲ ರಾಜ್ಯ ಮಾತ್ರವಲ್ಲದೆ ಇಡೀ ದೇಶದಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ.
ಇನ್ನು ಈ ಕುರಿತು ಇದೀಗ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರತಿಕ್ರಿಯೆಸಿದ್ದು, AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ BJP-RSS ಅವರನ್ನ ಕೊಲ್ಲಿ ಅಂತ ಹೇಳಿದ್ದಾರೆ. ಪ್ರಚೋದನಕಾರಿ ಹೇಳಿಕೆ ಕೊಟ್ಟಿದ್ದಾರೆ. ಇಡೀ ದೇಶದಲ್ಲಿ ಅವರಿಗೆ ಹಿಡಿಶಾಪ ಹಾಕ್ತಿದ್ದಾರೆ. ಖರ್ಗೆ ಕುರಾನ್‌ನಲ್ಲಿ ಇರುವ ಒಂದು ವಿಷಯ ಪ್ರಸ್ತಾಪ ಮಾಡಿದ್ದಾರೆ. ವಿಷಕಾರಿ ಹಾವನ್ನು ಸಾಯಿಸಬೇಕು ಅಂತ ಹೇಳಿದ್ದಾರೆ. BJP-RSS ವಿಷಕಾರಿ ಹಾವು ಅಂದಿದ್ದಾರೆ. ಅವರೇನು ನೋಡಿದ್ದಾರಾ? ಖರ್ಗೆ ನಾಲಿಗೆ ಹದ್ದುಬಸ್ತಿನಲ್ಲಿ ಇರಬೇಕಿತ್ತು. ನಿಮಗೆ ಅರಳು-ಮರಳೋ ಅಥವಾ ಮಾನಸಿಕ ಆರೋಗ್ಯ ಕೆಟ್ಟಿದೆಯಾ? ಇದು ದ್ವೇಷ ಭಾಷಣ ಆಗುತ್ತದೆ. ಇದನ್ನೂ ಓದಿ: ನಾಳೆ 2nd PUC ಫಲಿತಾಂಶ ಪ್ರಕಟ
ಕರ್ನಾಟಕದಲ್ಲಿ ದ್ವೇಷ ಭಾಷಣ ಬಿಲ್ ಪಾಸ್ ಆಗಿದೆ. ಬಿಜೆಪಿ ಈಗಾಗಲೇ ಖರ್ಗೆ ವಿರುದ್ಧ ದೂರು ಕೊಟ್ಟಿದ್ದಾರೆ. ರಜಾಕಾರರ ನಮ್ಮ ಕುಟುಂಬದವರನ್ನ ಕೊಂದರು ಅಂತ ಖರ್ಗೆ ಹೇಳಿದ್ರು. ನಿಮಗೆ ಯಾರ ಮೇಲೆ ಕೋಪ ಇರಬೇಕಿತ್ತು? ರಜಾಕಾರರ ಮೇಲೆ ಕೋಪ ಇರಬೇಕಿತ್ತು. ಆದರೆ, ಅವರನ್ನ ಎತ್ತಿಕಟ್ಟಿ BJP-RSS ಕೊಲ್ಲಬೇಕು ಅಂತೀರಾ. ನಾಚಿಕೆ ಆಗೊಲ್ಲವಾ ಎಂದು ಕಿಡಿಕಾರಿದರು.
