Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ತಾಲ್ಲೂಕಿನ ಜನರಿಗೆ ಆಶಾಕಿರಣವಾದ ಶಾಸಕ ಬಸವರಾಜ ರಾಯರೆಡ್ಡಿ
  • Bangalore
  • Politics
  • State

ತಾಲ್ಲೂಕಿನ ಜನರಿಗೆ ಆಶಾಕಿರಣವಾದ ಶಾಸಕ ಬಸವರಾಜ ರಾಯರೆಡ್ಡಿ

Praja Vahini March 16, 2026
WhatsApp Image 2026-03-16 at 13.05.06
Spread the love

ಬೆಂಗಳೂರು: ಅಸಾಧ್ಯ ಎನ್ನುವ ಕೆಲಸ ಮಾಡುವುದೇ ಭಗೀರಥ ಪ್ರಯತ್ನ… ಭಗೀರಥರು ಛಲಬಿಡದೆ ನೂರಾರು ವರ್ಷಗಳ ಕಾಲ ತಪಸ್ಸು ಮಾಡಿ, ಗಂಗೆಯನ್ನು ಶಿವನ ಜಟೆಯಿಂದ ಧರೆಗೆ ತಂದಂತೆ ಕಲಿಯುಗದದಲ್ಲೊಬ್ಬ ಮಹಾಪುರುಷ ಹಲವು ವರ್ಷದಿಂದ ಕುಡಿಯುವ ನೀರನ್ನೇ ಕಾಣದ ಗ್ರಾಮಕ್ಕೆ ನೀರು ಕೊಟ್ಟು ಕಲಿಯುಗದ ಭಗೀರಥರಾಗಿದ್ದಾರೆ.

ಹೌದು.. ಇದು ಅಪ್ಪಟ ಬಯಲುಸೀಮೆ ಕೊಪ್ಪಳದ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಕಥೆ… ಹೇಳಿಕೇಳಿ ಅದು ಕಪ್ಪು ಮಣ್ಣಿನ ಭೂಮಿ ಅಲ್ಲಿ ಹನಿ ನೀರಿಗೂ ಹಾಹಾಕಾರ.. ಬೇಸಿಗೆ ಬಂದರಂತೂ ವೃದ್ಧರು ಮಕ್ಕಳೆನ್ನದೆ ಮನೆ ಮಂದಿಯೆಲ್ಲಾ ಬಿಂದಿಗೆ ಹಿಡಿದು ಕುಡಿಯುವ ನೀರಿಗೆ ಕಿಲೋಮೀಟರ್‌ಗಟ್ಟಲೆ ತೆರಳಬೇಕಿತ್ತು. ರಣ ಬಿಸಿಲಿನಲ್ಲಿ ತಾಲ್ಲೂಕಿನ ಜನರಿಗೆ ನೀರು ತರುವುದೇ ಒಂದು ಹರಸಾಹಸವಾಗಿತ್ತು.

ಇದೀಗ ಈ ಸಮಸ್ಯೆಯಿಂದ ಬೇಸತ್ತಿದ್ದ ತಾಲ್ಲೂಕಿನ ಜನರಿಗೆ ಆಶಾಕಿರಣವಾಗಿದ್ದಾರೆ ಶಾಸಕ ಬಸವರಾಜ ರಾಯರೆಡ್ಡಿ. ತಮ್ಮ ಸತತ ಪ್ರಯತ್ನದಿಂದ ಈ ಬಾರಿಯ ಬಜೆಟ್‌ನಲ್ಲಿ ತಾಲ್ಲೂಕಿಗೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದ್ದಾರೆ. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರೂ ಆಗಿರುವ ರಾಯರೆಡ್ಡಿಯವ ಅವಿರತ ಹೋರಾಟದ ಫಲವಾಗಿ ತಾಲ್ಲೂಕಿನ 123 ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಗಾಗಿ ₹125 ಕೋಟಿ ಅನುದಾನ ಘೋಷಣೆ ಮಾಡಲಾಗಿದೆ. ತುಂಗಭದ್ರಾ ನದಿಯಿಂದ ಒಬ್ಬ ವ್ಯಕ್ತಿಗೆ ದಿನಕ್ಕೆ 85 ಲೀಟರ್‌ ನೀರು ಒದಗಿಸುವ ಯೋಜನೆಗೆ ಇದಾಗಿದ್ದು, 123 ಗ್ರಾಮಗಳ ಜನ ನಿಟ್ಟುಸಿರು ಬಿಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂದು ವಿಧಾನಸೌಧಕ್ಕೆ ಆಗಮಿಸಿದ್ದ ಕ್ಷೇತ್ರ ಜನರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ವಿದ್ಯಾರ್ಥಿಗಳು ಗಾಂಧಿ ಪ್ರತಿಮೆಯ ಮುಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಾಗೂ ಶಾಸಕ ಬಸವರಾಜ್ ರಾಯರೆಡ್ಡಿ ಅವರಿಗೆ ಅಭಿನಂದನೆ ತಿಳಿಸಿದ್ರು. ಈ ವೇಳೆ ಮಾತನಾಡಿದ ಸಿಎಂ,  ನಮ್ಮ ಸರ್ಕಾರದಲ್ಲಿ ಬಸವರಾಜ್ ರಾಯರೆಡ್ಡಿ ಮಾಡಿರುವಷ್ಟು ಅಭಿವೃದ್ಧಿ ಕೆಲಸಗಳನ್ನು ಯಾರೂ ಮಾಡಿಲ್ಲ ಎಂದು ಬಸವರಾಜ್‌ ರಾಯರೆಡ್ಡಿ ಅವರನ್ನ ಹಾಡಿ ಹೊಗಳಿದರು. ಇದನ್ನೂ ಓದಿ:  ಟೀಕೆ – ಟಿಪ್ಪಣಿ 3 ಭಾಗಗಳ ಪುಸ್ತಕ ಬಿಡುಗಡೆ

ಒಟ್ಟಾರೆ ಕುಡಿಯುವ ನೀರಿನ ಗ್ರಹಣದಿಂದ ಪರದಾಡ್ತಿದ್ದ ಯಲಬುರ್ಗಾ ತಾಲ್ಲೂಕಿನ ಜನ ಗ್ರಹಣ ಮುಕ್ತರಾಗಿದ್ದು ರಾಯರೆಡ್ಡಿಯವರ ಭಗೀರಥ ಪ್ರಯತ್ನಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಯಲಬುರ್ಗದ ರಾಜಕೀಯ ಇತಿಹಾಸದಲ್ಲೇ ಯಾರೂ ಈ ಕೆಲಸಕ್ಕೆ ಕೈ ಹಾಕಿರಲಿಲ್ಲ ರಾಯರೆಡ್ಡಿ ಅವರು ಶಾಶ್ವತವಾಗಿ ನಮ್ಮ ಸಮಸ್ಯೆ ಬಗೆಹರಿಸಿದ್ದಾರೆ ಎಂದು ಶುಭ ಹಾರೈಸಿದ್ರು. ಬಳಿಕ ಪ್ರಜಾವಾಹಿನಿ ಜೊತೆ ಮಾತನಾಡಿದ ರಾಯರೆಡ್ಡಿ ಅವರು, ಯೋಜನೆ ಕುರಿತು ವಿವರಣೆ ನೀಡಿದ್ರು.

About the Author

Praja Vahini

Editor

View All Posts

Spread the love

Post navigation

Previous: ಟೀಕೆ – ಟಿಪ್ಪಣಿ 3 ಭಾಗಗಳ ಪುಸ್ತಕ ಬಿಡುಗಡೆ
Next: ಬಾನು ಮುಷ್ತಾಕ್ ಅವರ ಬಂಧನಕ್ಕೆ ಛಲವಾದಿ ನಾರಾಯಣಸ್ವಾಮಿ ಆಗ್ರಹ

Views:

29

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.