ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು (ಭಾನುವಾರ ಮಾರ್ಚ್ 15) ಇಂದಿರಾ ಲಂಕೇಶ್ ಪ್ರಕಾಶನ ಇವರ ವತಿಯಿಂದ ಕೊಂಡಜ್ಜಿ ಬಸಪ್ಪ ಸಭಾಂಗಣ ಬೆಂಗಳೂರು ಇಲ್ಲಿ ಆಯೋಜಿಸಲಾಗಿದ್ದ ಕನ್ನಡದ ಖ್ಯಾತ ಸಾಹಿತಿ ನವ್ಯ ಕವಿ ಪತ್ರಿಕೋದ್ಯಮಿ ದಿವಂಗತ ಪಿ ಲಂಕೇಶ್ ರವರ ಟೀಕೆ – ಟಿಪ್ಪಣಿ 3 ಭಾಗಗಳ ಪುಸ್ತಕ ಹಾಗೂ ಲಂಕೇಶ್ ರ ಕಥೆಗಳು ಆಡಿಯೋ ಬುಕ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಪುಸ್ತಕ ಮತ್ತು ಆಡಿಯೋ ಬುಕ್ ಅನ್ನು ಬಿಡುಗಡೆ ಮಾಡಿ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಹಿರಿಯ ನಟ ಪ್ರಕಾಶ್ ರೈ, ಸಾಹಿತಿ ನಟರಾಜ್ ಹುಳಿಯಾರ್, ಲೇಖಕಿ-ವಿಮರ್ಷಕಿ ಎಂ.ಎಸ್.ಆಶಾದೇವಿ, ನಿರ್ದೇಶಕ ಟಿ.ಎನ್.ಸೀತಾರಾಮ್, ಇಂದಿರಾ ಲಂಕೇಶ್, ಕವಿತಾ ಲಂಕೇಶ್ ಸೇರಿ ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
