ಬೆಂಗಳೂರು: ಚಿನ್ನ-ಬೆಳ್ಳಿ ದರವು ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿದ್ದು, ಚಿನ್ನ ಖರೀದಿಗಾರರಿಗೆ ಸಂಕಷ್ಟ ಎದುರಾಗಿದೆ.
ಇನ್ನು ಮಾರ್ಚ್ ಮೊದಲನೇ ವಾರದಲ್ಲಿ ಹೋಲಿಸಿಕೊಂಡರೆ ಇದೀಗ ಮಾರ್ಚ್ 2ನೇ ವಾರದಲ್ಲಿ ಚಿನ್ನ, ಬೆಳ್ಳಿ ದರದಲ್ಲಿ ಕೊಂಚ ಇಳಿಕೆ ಕಂಡಿದ್ದು, ಗ್ರಾಹಕರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ.
ಹೌದು, ಇಂದು ಸೋಮವಾರ ಮಾರ್ಚ್ 9 ರಂದು ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಭಾರಿ ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ₹1,960 ಇಳಿಕೆಯಾಗಿದ್ದು ₹1,61,680ಕ್ಕೆ ತಲುಪಿದೆ.
ಇಂದು 24 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ₹196 ಇಳಿಕೆಯಾಗಿದ್ದು ₹16,168ಕ್ಕೆ ದಾಖಲಾಗಿದೆ. ಅದೇ ರೀತಿ 22 ಕ್ಯಾರೆಟ್ ಚಿನ್ನದ ದರದಲ್ಲೂ ಇಳಿಕೆ ಕಂಡುಬಂದಿದ್ದು, 1 ಗ್ರಾಂಗೆ ₹180 ಕಡಿಮೆಯಾಗಿದ್ದು ₹14,820 ಆಗಿದೆ. 22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ ₹1,48,200ಕ್ಕೆ ಇಳಿಕೆಯಾಗಿದೆ. ಇದನ್ನೂ ಓದಿ: ಡಿಸಿಎಂ ಡಿಕೆಶಿ ದೆಹಲಿಗೆ ತೆರಳಿರುವ ವಿಚಾರವಾಗಿ ಸತೀಶ್ ಜಾರಕಿಹೊಳಿ ಹೇಳಿದ್ದೇನು?
ಇದರ ಜೊತೆಗೆ ಬೆಳ್ಳಿ ಬೆಲೆಯಲ್ಲಿಯೂ ಕುಸಿತ ಕಂಡುಬಂದಿದೆ. ಬೆಳ್ಳಿಯ ದರ ಕೆಜಿಗೆ ₹5,000 ಇಳಿಕೆಯಾಗಿದ್ದು, ₹2,80,000ಕ್ಕೆ ದಾಖಲಾಗಿದೆ.
