Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಬೆಂಗಳೂರಿಗೆ ಉನ್ನತ ಶ್ರೇಣಿ ಬರಲು ಶ್ರಮವಹಿಸಿ ಕಾರ್ಯನಿರ್ವಹಿಸಿ: ಮಹೇಶ್ವರ್ ರಾವ್
  • Uncategorized

ಬೆಂಗಳೂರಿಗೆ ಉನ್ನತ ಶ್ರೇಣಿ ಬರಲು ಶ್ರಮವಹಿಸಿ ಕಾರ್ಯನಿರ್ವಹಿಸಿ: ಮಹೇಶ್ವರ್ ರಾವ್

Praja Vahini March 9, 2026 1 minute read
a9c17cd6-a168-44ab-9167-7439d85cbfff
Spread the love

ಬೆಂಗಳೂರು: ಸ್ವಚ್ಛ ಸರ್ವೇಕ್ಷಣಾ ಅಭಿಯಾನದಲ್ಲಿ ಬೆಂಗಳೂರಿಗೆ ಉನ್ನತ ಶ್ರೇಣಿ ಬರಲು ಶ್ರಮವಹಿಸಿ ಕಾರ್ಯನಿರ್ವಹಿಸಬೇಕೆಂದು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್  ತಿಳಿಸಿದರು.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದ ವತಿಯಿಂದ ಇಂದು ಸರ್. ಪುಟ್ಟಣ್ಣ ಚೆಟ್ಟಿ ಪುರಭವನ (ಟೌನ್ ಹಾಲ್) ನಲ್ಲಿ *”ಸ್ವಚ್ಛ ಸರ್ವೇಕ್ಷಣಾ–2026″ ಕಾರ್ಯಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಲುವಾಗಿ ಸಮಾಜದ ಗಣ್ಯರನ್ನು ರಾಯಭಾರಿಗಳಾಗಿ ಅಧಿಕೃತವಾಗಿ ಸೇರ್ಪಡೆಗೊಳಿಸುವ ಕಾರ್ಯಕ್ರಮಕ್ಕೆ* ಚಾಲನೆ ನೀಡಿ ಅವರು ಮಾತನಾಡಿದರು.

ನಗರದಲ್ಲಿ ಉತ್ಪತ್ತಿಯಾಗುವ ಒಟ್ಟು ತ್ಯಾಜ್ಯದ ಶೇ. 45–50 ರಷ್ಟು ಭಾಗವನ್ನು ಈಗಾಗಲೇ ಮರುಬಳಕೆ (ರಿಸೈಕ್ಲಿಂಗ್) ಮಾಡಲಾಗುತ್ತಿದೆ. ತ್ಯಾಜ್ಯವನ್ನು ವಿವಿಧ ರೀತಿಯಲ್ಲಿ ಮರುಬಳಕೆ ಮಾಡುವ ಮೂಲಕ ತ್ಯಾಜ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಈ ಸಂಬಂಧ ಮುಂದಿನ 3–4 ವರ್ಷಗಳಲ್ಲಿ ತ್ಯಾಜ್ಯ ನಿರ್ವಹಣೆಯಲ್ಲಿ ಪರಿಣಾಮಕಾರಿ ಮಾರ್ಪಾಡುಗಳನ್ನು ತರಲಾಗುವುದು ಎಂದು ತಿಳಿಸಿದರು.

ಹಸಿ ತ್ಯಾಜ್ಯವನ್ನು ಮೂಲದಲ್ಲಿಯೇ ಗೊಬ್ಬರವಾಗಿಸುವುದು, ಪ್ಲಾಸ್ಟಿಕ್ ಅನ್ನು ವಿದ್ಯುತ್ ಘಟಕಗಳಿಗೆ ಕಳುಹಿಸುವುದು, ಕಡಿಮೆ ಮೌಲ್ಯದ ಪ್ಲಾಸ್ಟಿಕ್ (RDF) ಅನ್ನು ಸಿಮೆಂಟ್ ಕಾರ್ಖಾನೆಗಳಿಗೆ ಕಳುಹಿಸುವ ಮೂಲಕ ಇ.ಪಿ.ಆರ್ ಕ್ರೆಡಿಟ್ ಪಡೆಯಲಾಗುತ್ತಿದೆ. ಇದೇ ಮಾದರಿಯಲ್ಲಿ ವಿವಿಧ ಕಾರ್ಯಗಳಿಗೆ ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ಮರುಬಳಕೆ ಮಾಡುವ ಮೂಲಕ ಲ್ಯಾಂಡ್‌ ಫಿಲ್‌ಗೆ ಕಳುಹಿಸುವ ಪ್ರಮಾಣವನ್ನು ಕ್ರಮೇಣ ಕಡಿಮೆ ಮಾಡಲು ಸೂಕ್ತ ಕ್ರಮ ವಹಿಸಲಾಗುವುದೆಂದು ಹೇಳಿದರು.

ಲ್ಯಾಂಡ್ ಫಿಲ್‌ಗೆ ಹೋಗುವ ಕಾಂಪ್ಯಾಕ್ಟರ್‌ ಗಳ ಸಂಖ್ಯೆ ಇಳಿಕೆ 

ಲ್ಯಾಂಡ್ ಫಿಲ್‌ ಗೆ ಹೋಗುವ ಕಾಂಪ್ಯಾಕ್ಟರ್‌ಗಳ ಸಂಖ್ಯೆ 400 ರಿಂದ 260ಕ್ಕೆ ಇಳಿಕೆಯಾಗಿದೆ. ರಾಜಾಜಿನಗರದಲ್ಲಿ ಶೇ.95 ರಷ್ಟು ಕಸ ವಿಂಗಡಣೆ ಆಗುತ್ತಿದೆ. ಚಾಮರಾಜಪೇಟೆಯ ಟ್ರಾನ್ಸಫರ್ ಸ್ಟೇಷನ್‌ ನಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಡೆಯುತ್ತಿದ್ದು, ನಗರದಲ್ಲಿ ಕಡಿಮೆ ಪ್ರಮಾಣದಲ್ಲಿ ಕಸ ವಿಂಗಡಣೆ ಆಗುತ್ತಿರುವ ಪ್ರದೇಶಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ ನಾಗರಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕೆಂದು ಅವರು ಸೂಚಿಸಿದರು.

ನಾಗರಿಕರ ಸಹಕಾರ ಅತ್ಯಗತ್ಯ

ಬೆಂಗಳೂರನ್ನು ಸ್ವಚ್ಛ ನಗರಿಯನ್ನಾಗಿಸಬೇಕಾದರೆ ಜಿಬಿಎ ಹಾಗೂ ಪಾಲಿಕೆಗಳ ಅಧಿಕಾರಿಗಳ ಜೊತೆಗೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಅತ್ಯಮೂಲ್ಯವಾಗಿದೆ. ರಸ್ತೆ ಬದಿಯಲ್ಲಿ ಕಸ ಬಿಸಾಡದೆ ಮನೆ-ಮನೆಗೆ ಭೇಟಿ ನೀಡುವ ಆಟೋ ಟಿಪ್ಪರ್‌ಗಳಿಗೆ ಕಸವನ್ನು ನೀಡುವ ಮೂಲಕ ಬ್ಲ್ಯಾಕ್ ಸ್ಪಾಟ್‌ಗಳು ಉಂಟಾಗದಂತೆ ನೋಡಿಕೊಳ್ಳಬೇಕು.

ಸ್ವಚ್ಛ ಸರ್ವೇಕ್ಷಣಾ–2025–26″ಕ್ಕೆ ರಾಯಭಾರಿಗಳ ನೇಮಕ

ಸ್ವಚ್ಛ ಸರ್ವೇಕ್ಷಣಾ 2025–26ರ ರಾಯಭಾರಿಗಳಾಗಿ *ಪದ್ಮಶ್ರೀ ಪುರಸ್ಕೃತರಾದ ಡಾ: ಮಂಜಮ್ಮ ಜೋಗತಿ, ಚಲನಚಿತ್ರ ನಟರಾದ ಅನಿರುದ್ಧ್ ಜಟ್ಕರ್, ಇಂಡಿಯಾ ರೈಸಿಂಗ್ ಟ್ರಸ್ಟ್‌ನ ಮುಖ್ಯಸ್ಥರಾದ ಅರುಣ್ ಪೈ, ಸಮಾಜ ಸೇವಕರಾದ ಕೆ.ಎಂ. ನಾಗರಾಜ್, ಲೆಟ್ಸ್ ಬಿ ದಿ ಚೇಂಜ್ ಸಂಸ್ಥೆಯ ಮುಖ್ಯಸ್ಥರಾದ ಅನಿರುದ್ಧ್ ದತ್ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಅಭಿಲಾಶ್ ನಾಯರ್* ಅವರನ್ನು ರಾಯಭಾರಿಗಳಾಗಿ ನೇಮಿಸಲಾಗಿದೆ.

ಸ್ವಚ್ಛತಾ ರಾಯಭಾರಿಗಳಾಗಲು ಆಸಕ್ತರಿಗೊಂದು ಅವಕಾಶ

ನಗರ ಸ್ವಚ್ಛತೆಗೆ ಸಂಬಂಧಿಸಿದಂತೆ ವಿವಿಧ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಆಸಕ್ತಿಯುಳ್ಳ ನಾಗರಿಕರು ಮುಂದೆ ಬಂದು ಈ ಅಭಿಯಾನದ ಭಾಗಿಯಾಗಿ, ನಗರದ ಸ್ವಚ್ಛತೆಯ ರಾಯಭಾರಿಗಳಾಗಿ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು. ಸ್ವಚ್ಛ ಸರ್ವೇಕ್ಷಣಾ 2025–26 ಅನ್ನು ಮಹತ್ವದ ಅವಕಾಶವೆಂದು ಪರಿಗಣಿಸಿ, ನಗರದ ಸ್ವಚ್ಛತೆಯ ಪ್ರಮಾಣವನ್ನು ಮತ್ತಷ್ಟು ಉತ್ತೇಜಿಸುವ ಮತ್ತು ಗಮನಾರ್ಹ ಸುಧಾರಣೆ ತರಬೇಕಿದೆ. ಈ ಕುರಿತಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ. ಅದಕ್ಕಾಗಿ ಎಲ್ಲರೂ ಕೈಜೋಡಿಸಿ ಪರಿಣಾಮಕಾರಿಯಾಗಿ ಕೆಲಸ ಮಾಡೋಣ ಎಂದು ಕರೆ ನೀಡಿದರು.

ಸ್ವಚ್ಛತಾ ಚಾಂಪಿಯನ್‌ ಗಳಿಗೆ ಸನ್ಮಾನ:

ಜಿಬಿಎ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ನಾಗರಿಕರು, ಮೇಲ್ವಿಚಾರಕರು ಹಾಗೂ ಪೌರಕಾರ್ಮಿಕರು ಸೇರಿದಂತೆ 10 ಮಂದಿಯನ್ನು *”ಸ್ವಚ್ಛತಾ ಚಾಂಪಿಯನ್”* ಆಗಿ ಸನ್ಮಾನಿಸಲಾಯಿತು.

ಮನೆಗಳು, ಕಚೇರಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯದೆ ಸ್ವಚ್ಛತೆಯನ್ನು ಕಾಪಾಡುವ ಸಂಕಲ್ಪವನ್ನು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಯುಕ್ತರು, ಸ್ವಚ್ಛ ಸರ್ವೇಕ್ಷಣದ ರಾಯಭಾರಿಗಳು, ಅಧಿಕಾರಿಗಳು ಹಾಗೂ ಪೌರಕಾರ್ಮಿಕರು ಸೇರಿದಂತೆ ಎಲ್ಲರೂ ಸಮೂಹವಾಗಿ ಸ್ವೀಕರಿಸಿದರು.

ಈ ವೇಳೆ ನಗರ ಪಾಲಿಕೆಗಳ ಆಯುಕ್ತರುಗಳಾದ ಪೊಮ್ಮಲ ಸುನೀಲ್ ಕುಮಾರ್, ರಮೇಶ್ ಕೆ.ಎನ್., ಡಿ.ಎಸ್. ರಮೇಶ್, ಡಾ: ರಾಜೇಂದ್ರ ಕೆ.ವಿ., ಬೆಂ. ಘ.ತ್ಯಾ.ನಿ.ನಿ ದ . ಸಿಓಓ ರಮಾಮಣಿ, ಜಂಟಿ ಆಯುಕ್ತರಾದ ಸುರೇಶ್ ಬಾಬು, ಹೇಮಂತ್ ಶರಣ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

About the Author

Praja Vahini

Editor

View All Posts

Spread the love

Post navigation

Previous: ಚಿನ್ನ, ಬೆಳ್ಳಿ ಬೆಲೆ ಕುಸಿತ!
Next: ಡಿಕೆಶಿ KPCC ಅಧ್ಯಕ್ಷರಾಗಿ 6ನೇ ವರ್ಷದ ಸಂಭ್ರಮ: ಕುತೂಹಲ ಮೂಡಿಸಿದ ಡಿನ್ನರ್ ಪಾರ್ಟಿ

Views:

17

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.