ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಿಎಂ ಕುರ್ಚಿ ಕದನ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದಾರೆ.
ಹೌದು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನಿನ್ನೆ (ಭಾನುವಾರ ಮಾರ್ಚ್ 08) ದೆಹಲಿಗೆ ತೆರಳಿದ್ದು ಇಂದು ಅಧಿವೇಶನ ಪ್ರಾರಂಭವಾಗಿದ್ದರೂ ಕೂಡ ಅವರು ದೆಹಲಿಯಲ್ಲಿ ಉಳಿದಿರುವುದು ರಾಜ್ಯ ರಾಜಕೀಯದಲ್ಲಿ ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.
ಇನ್ನು ಸಚಿವ ಸತೀಶ್ ಜಾರಕಿಹೊಳಿಯವರು ಡಿಸಿಎಂ ಡಿಕೆಶಿ ಅವರು ದಹಲಿಯಲ್ಲಿ ವಾಸ್ತವ್ಯ ಹೊಡೆಯುವುದರ ಕುರಿತಾಗಿ ಪ್ರತಿಕ್ರಿಯಿಸಿದ್ದು, ಡಿಸಿಎಂ ಪರವಾಗಿ ನಾವಿದ್ದೇವೆ, ನಾವು ಇಲ್ಲಿ ನೋಡಿಕೊಳ್ಳುತ್ತೇವೆ ಅವರು ಅವರ ಕೆಲಸವನ್ನು ಮುಗಿಸಿಕೊಂಡು ಆರಾಮಾಗಿ ಬರಲಿ ಎಂದು ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಡಿಸಿಎಂ ಪರವಾಗಿ ನಾವಿದ್ದೇವೆ. ನಾವು ಇಲ್ಲಿ ನೋಡಿಕೊಳ್ಳುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಕನ್ನಡ ಅಂದ್ರೆ ನನಗೆ ಬಹಳ ಪ್ರೀತಿ: ಜೂನಿಯರ್ NTR
ಭಾನುವಾರ (ಮಾ.8) ಖಾಸಗಿ ಕಾರ್ಯಕ್ರಮದ ನಿಮಿತ್ತ ದೆಹಲಿಗೆ ಡಿ.ಕೆ ಶಿವಕುಮಾರ್ ತೆರಳಿದ್ದರು. ಇಂದು (ಮಾ.9) ಬೆಳಗ್ಗೆ ದೆಹಲಿಯಿಂದ ಅವರು ವಾಪಸ್ ಆಗಬೇಕಿತ್ತು. ಇಂದು ಕೂಡಾ ದೆಹಲಿಯಲ್ಲಿರಲು ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ವೇಳೆ, ಹೈಕಮಾಂಡ್ ನಾಯಕರ ಭೇಟಿಯಾಗುವ ಸಾಧ್ಯತೆ ಇದೆ.
