ಬೆಂಗಳೂರು: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿರುವಂತಹ ಎಂ ಸತೀಶ್ ರೆಡ್ಡಿ ಅವರು ಈಗಾಗಲೇ ತಮ್ಮ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿಕೊಂಡಿದ್ದು, ಅದರಂತೆ ಮತ್ತೆ ಇದೀಗ ತಮ ಕ್ಷೇತ್ರದಲ್ಲಿರುವ ರಸ್ತೆ ಕಾಮಗಾರಿಗಳು ಹಾಗೂ ಚರಂಡಿಕಾಮಗಾರಿಗಳಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಮತ್ತಷ್ಟು ಜನ ಮನ್ನಣೆ ಪಡೆಯುತ್ತಿದ್ದಾರೆ.
ಹೌದು, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮಳೆ ಬಂದರೆ ಸಾಕು ಹಲವಾರು ಸಮಸ್ಯೆಗಳು ಕಾಡುತ್ತವೆ. ಆ ಸಮಸ್ಯೆ ಕಾಡದಂತೆ ಇದೀಗ ಬೊಮ್ಮನಹಳ್ಳಿ ಶಾಸಕರಾದ ಎಂ ಸತೀಶ್ ರೆಡ್ಡಿ ಅವರು ಹಲವಾರು ಕಾಮಗಾರಿಗಳನ್ನು ಕೈಗೊಂಡಿದ್ದು, ಅದರಂತೆ ಇಂದು (ಶನಿವಾರ ಫೆಬ್ರವರಿ 28) ಪರಂಗಿಪಾಳ್ಯ ಗ್ರಾಮದಲ್ಲಿ 25ನೇ ಎ ಅಡ್ಡ ರಸ್ತೆಯಲ್ಲಿ ಡಾಂಬರು ಹಾಕುವ ಪೂಜೆ ಕಾರ್ಯದಲ್ಲಿ ಎಂ.ಸತೀಶ್ ರೆಡ್ಡಿ ರವರು ಭಾಗವಹಿಸಿದ್ದರು. ಇದನ್ನೂ ಓದಿ: ಶ್ರೀ ಸತ್ಯನಾರಾಯಣ ಸ್ವಾಮಿಯವರ ದಿವ್ಯ ಕಲ್ಯಾಣೋತ್ಸವ
ಈ ಸಂದರ್ಭದಲ್ಲಿ ಬಿಜೆಪಿಯ ಮುಖಂಡರಾದ ಶ್ರೀನಿವಾಸ್ ರೆಡ್ಡಿ, ಮುನಿರಾಜು ಎ ಎಂ ನರಸಿಂಹಮೂರ್ತಿ, ಸುಂದಪ್ಪ ಮತ್ತು ಇನ್ನಿತರ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.
