ಹೈದರಾಬಾದ್: ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರು ಫೆಬ್ರುವರಿ 26ರಂದು ಉದಯಪುರದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ನವಜೋಡಿಗಳು ಮಾರ್ಚ್ ನಾಲ್ಕರಂದು ನಡೆಯಲಿರುವ ರಿಸೆಪ್ಶನ್ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗನ್ಯರನ್ನು ಭೇಟಿ ನೀಡಿ ಈಗಾಗಲೇ ಆಹ್ವಾನಿಸಿದ್ದಾರೆ.
ಇನ್ನು ಮದುವೆಯಾದ ಬಳಿಕ ಇದೇ ಮೊದಲ ಬಾರಿಗೆ ನಟಿ ರಶ್ಮಿಕಾ ಮಂದಣ್ಣ ಅವರು ಅವರ ಗಂಡನ ಮನೆಯನ್ನು ನಗುನಗುತ ಪ್ರವೇಶಿಸುತ್ತಾರೆ. ಇದನ್ನೂ ಓದಿ: ಇಂಟರ್ನೆಟ್ ಅಲ್ಲಿ ಧೂಳೆಬ್ಬಿಸುತ್ತಿದೆ ಟಾಕ್ಸಿಕ್ ಟೀಸರ್
ಹೌದು, ಹೈದರಾಬಾದ್ ನಲ್ಲಿ ಜುಬ್ಲಿ ಹಿಲ್ಸ್ನಲ್ಲಿರುವ ವಿಜಯ್ ದೇವರಕೊಂಡ ಮನೆಗೆ ರಶ್ಮಿಕಾ ಎಂಟ್ರಿ ಕೊಟ್ಟಿದ್ದಾರೆ. ಈ ಮೊದಲು ಅವರು ಅನೇಕ ಬಾರಿ ಇಲ್ಲಿಗೆ ತೆರಳಿದ್ದು ಇದೆ. ಕೆಲವು ವರದಿಗಳ ಪ್ರಕಾರ ಅವರು ಅಲ್ಲಿಯೇ ವಾಸವಿದ್ದರು ಎಂದು ಕೂಡ ಹೇಳಲಾಗುತ್ತಿದೆ. ಆದರೆ, ಮದುವೆಯಾದ ಬಳಿಕ ಈ ಮನೆ ಪ್ರವೇಶಿಸುವುದು ಅವರಿಗೆ ವಿಶೇಷ ಅನುಭವ. ಈ ಕಾರಣದಿಂದ, ನಗು ನಗುತ್ತಾ ರಶ್ಮಿಕಾ ಮಂದಣ್ಣ ಅವರು ಮನೆಗೆ ಪ್ರವೇಶಿಸಿದರು.
