ಬೆಂಗಳೂರು: ಬೆಂಗಳೂರಿನ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಹುಳಿಮಾವು ಶ್ರೀ ಸ್ಫೂರ್ತಿ ವಿನಾಯಕ ಸಹಿತ ಶ್ರೀ ಸತ್ಯನಾರಾಯಣ ಸ್ವಾಮಿಯವರ 21ನೇ ವರ್ಷದ ವಾರ್ಷಿಕೋತ್ಸವ ಹಾಗೂ 20ನೇ ವರ್ಷದ ಬ್ರಹ್ಮ ರಥೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಸತತ 9 ದಿನ ನಡೆಯುತ್ತಿರುವ ಈ ಉತ್ಸವ ಇದೇ ತಿಂಗಳ 22ರ ಭಾನುವಾರ ಆರಂಭವಾಗಿತ್ತು.
ಇಂದು ಬೆಳಗ್ಗೆ 9 ಗಂಟೆಗೆ ಕಾಶೀ ಯಾತ್ರೋತ್ಸವ ಹಾಗೂ 10 ಗಂಟೆಗೆ ಶ್ರೀ ಸತ್ಯನಾರಾಯಣ ಸ್ವಾಮಿಯವರ ದಿವ್ಯ ಕಲ್ಯಾಣೋತ್ಸವ ಅದ್ದೂರಿಯಾಗಿ ನೆರೆವೇರಿತು. ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯರಾದ ಭಾಗ್ಯಮ್ಮ ರವಿ, ಚಂದ್ರು ಕೋಮಲ ಮತ್ತು ಎಲ್.ಮುತ್ತಪ್ಪ, ವೇಣುಗೋಪಾಲ ಮತ್ತು ಕಾತ್ಯಾಯಿನಿ ವೇಣುಗೋಪಾಲ ಕುಟುಂಬದ ನೇತೃತ್ವದಲ್ಲಿ ಕಲ್ಯಾಣೋತ್ಸವ ವಿಜೃಂಭಣೆಯಿಂದ ನಡೆಯಿತು. ಇದನ್ನೂ ಓದಿ: ಮರಳು ಮಾಫೀಯಾಗೆ ಕಾವಲಾಗಿ ನಿಂತ ತಹಸೀಲ್ದಾರ, ಪೊಲೀಸರು
ಇನ್ನು ದೇವಾಲಯದಲ್ಲಿ ಕಳೆದ ಭಾನುವಾರದಿಂದ ಪಾಂಚರಾತ್ರ ಆಗಮೋಕ್ತ ವಿಧಾನದಲ್ಲಿ ನವದಿನಗಳ ಕಾಲ ವಿವಿಧ ಪೂಜಾ ಕಾರ್ಯಕ್ರಮಗಳು ಆರಂಭವಾಗಿದ್ದು, ಮಾರ್ಚ್ ಎರೆಡರಂದು ಕೊನೆಗೊಳ್ಳಲಿದೆ. ಇನ್ನು ಭಕ್ತಾದಿಗಳ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಶ್ರೀಗಳ ಕೃಪೆಗೆ ಪಾತ್ರರಾಗಬೇಕೆಂದು ಆಡಳಿತ ಮಂಡಳಿ ಕೋರಿದೆ.
