Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ದಾರಿ ತಪ್ಪಿಸುತ್ತಿರುವ ಮಕ್ಕಳ ರಕ್ಷಣಾ ಆಯೋಗ
  • Crime
  • State
  • ಶಹಾಪುರ

ದಾರಿ ತಪ್ಪಿಸುತ್ತಿರುವ ಮಕ್ಕಳ ರಕ್ಷಣಾ ಆಯೋಗ

Praja Vahini February 26, 2026
WhatsApp Image 2026-02-26 at 18.16.26
Spread the love

ಶಹಾಪುರ: ತಾಲೂಕಿನ ದೋರನಹಳ್ಳಿ ಗ್ರಾಮದ ಬಳಿ ನಡೆದ ರಸ್ತೆ ಅಪಘಾತದಲ್ಲಿ ಈಶ್ವರ (17), ಕನಕಣ್ಣ (16) ವರ್ಷದ ಇಬ್ಬರು ಬಾಲಕರು ಮೃತಪಟ್ಟಿದ್ದು ಮರಳು ತುಂಬಿದ ಟಿಪ್ಪರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಮಕ್ಕಳು ಸಾವನ್ನಪ್ಪಿದ್ದಾರೆ ಎನ್ನುವ ಶಂಕೆ ವ್ಯಕ್ತಪಡಿಸಿದ್ದು, ಈ ಕುರಿತು ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೀವ್ಹೇಶ್ವರ ಶಾಲಾ ಶಿಕ್ಷಕ ಮಲ್ಲಪ್ಪ ಸಲಾದಪುರ ಎನ್ನುವ ವ್ಯಕ್ತಿ ತನ್ನ ಕೆಲಸಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಿ ತನ್ನದೇ ಬೈಕ್ ಕೊಟ್ಟು ಕಳುಹಿಸಿದ್ದು, ಬೈಕ್ ಸಹ ಅದೇ ಶಿಕ್ಷಕನ ಹೆಸರಿನಲ್ಲಿದೆ. ಆದರೆ ಈ ವಿಷಯವಾಗಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಅವರು ಎಸ್.ಪಿ ಅವರಿಗೆ ಪತ್ರ ಬರೆದಿದ್ದು, ಶಾಲೆಯ ಕೆಲಸ ಮುಗಿದ ಮೇಲೆ ಬಾಲಕರ ಪೋಷಕರೊಬ್ಬರು ತಮ್ಮ ಬೈಕ್ ಕೊಟ್ಟು ಶಹಾಪುರಕ್ಕೆ ಹೊಗಲು ಹೇಳಿದ್ದು, ಮಕ್ಕಳು ಬೈಕ್ ಮೇಲೆ ತೆರಳುವಾಗ ಅಪಘಾತ ಸಂಭವಿಸಿದೆ ಎಂದು ಉಲ್ಲೇಖಿಸಿದ್ದಾರೆ.

ಸ್ವತಃ ಮಕ್ಕಳ ಆಯೋಗವೇ ಪ್ರಕರಣವನ್ನೇ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಸಾವನ್ನಪ್ಪಿದ ಮೃತ ಕನಕಣ್ಣನ ಪೋಷಕರು ಹಾಗೂ ಅಹಿಂದ ವರ್ಗದ ತಾಲೂಕ ಅಧ್ಯಕ್ಷ ಶೇಖರ ದೊರಿ ಆರೋಪಿಸಿದ್ದಾರೆ.
ವಸತಿಗಾಗಿ ನಮ್ಮ ಮಗನನ್ನು ನಾವು ಶಾಲೆಯಲ್ಲಿ ಬಿಟ್ಟಿದ್ದು, ನಾವು ಹೇಗೆ ಬೈಕ್ ಕೊಡುತ್ತೇವೆ. ಮತ್ತು ಅಪ್ರಾಪ್ತ ಮಕ್ಕಳಿಗೆ ವಾಹನ ಚಾಲನೆ ಮಾಡಲು ಸರ್ಕಾರದಿಂದ ಅನುಮತಿ ಇರುವುದಿಲ್ಲವಾದರು ಶಿಕ್ಷಕ ಅದ್ಯಾಕೆ ತನ್ನ ಬೈಕ್ ನೀಡಿ ಕಳುಹಿಸಿದ್ದು ಎನ್ನುವ ಯಕ್ಷ ಪ್ರಶ್ನೇ ಕಾಡುತ್ತಿದೆ. ಇದನ್ನೂ ಓದಿ: ಮರಳು ಮಾಫೀಯಾಗೆ ಕಾವಲಾಗಿ ನಿಂತ ತಹಸೀಲ್ದಾರ, ಪೊಲೀಸರು

ಇದರ ನಡುವೆ ಆಯೋಗವು ಪೋಷಕರ ಮೇಲೆ ಬಾಣ ಇಟ್ಟಿದ್ದು ಎಷ್ಟರ ಮಟ್ಟಿಗೆ ಸರಿ ಎನ್ನುವ ಅನುಮಾನ ಸದ್ಯ ಮೂಡುತ್ತಿದೆ. ಸೂತಕದ ವಾತವರಣವಿರುವ ಮನೆಯಲ್ಲಿ ಇಂದಾಹದ್ದೊಂದು ಪತ್ರ ಪೋಷಕರನ್ನು ಮತ್ತಷ್ಟು ಆಘಾತಕ್ಕೀಡು ಮಾಡಿದೆ. ಘಟನೆಯ ಕುರಿತು ಸರಿಯಾದ ಮಾಹಿತಿ ಪಡಿಯದೇ ಆಯೋಗ ಇಡೀ ಪ್ರಕರಣವನ್ನೆ ತಿರುಚುವ ಕೆಲಸ ಮಾಡುತ್ತಿದೆ ಎಂದು ನಮ್ಮ ಕರ್ನಾಟಕ ಸೇನೆಯ ರಾಜ್ಯ ಪ್ರದಾನ ಸಂಚಾಲಕ ಭೀಮಣ್ಣ ಶಖಾಪುರ ಆರೋಪಿಸಿದ್ದಾರೆ.

About the Author

Praja Vahini

Editor

View All Posts

Spread the love

Post navigation

Previous: ಮರಳು ಮಾಫೀಯಾಗೆ ಕಾವಲಾಗಿ ನಿಂತ ತಹಸೀಲ್ದಾರ, ಪೊಲೀಸರು
Next: ಶ್ರೀ ಸತ್ಯನಾರಾಯಣ ಸ್ವಾಮಿಯವರ ದಿವ್ಯ ಕಲ್ಯಾಣೋತ್ಸವ

Views:

235

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.