Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಮರಳು ಮಾಫೀಯಾಗೆ ಕಾವಲಾಗಿ ನಿಂತ ತಹಸೀಲ್ದಾರ, ಪೊಲೀಸರು
  • Crime
  • State
  • ಶಹಾಪುರ

ಮರಳು ಮಾಫೀಯಾಗೆ ಕಾವಲಾಗಿ ನಿಂತ ತಹಸೀಲ್ದಾರ, ಪೊಲೀಸರು

Praja Vahini February 26, 2026
Screenshot_2026-02-26-18-04-45-90_6012fa4d4ddec268fc5c7112cbb265e7
Spread the love

ಅಕ್ರಮ ಚಟುವಟಿಕೆಗಳಿಗೆ ಬೇಕಿದೆ ಅಂಕುಶ/ ಗೃಹ ಸಚಿವರಿಗೆ ಮನವಿ

ಶಹಾಪುರ: ಮರಳು ಮಾಫೀಯಾಕ್ಕೆ ಕೃಷ್ಣ ನದಿ ವಿಲವಿಲ ಒದ್ದಾಡುತ್ತಿದ್ದು, ದಂಧೆಕೋರರು ಹಗಲು ರಾತ್ರಿ ಎನ್ನದೇ ರಾಜಾರೋಷವಾಗಿ ಜೆಸಿಬಿಗಳಿಂದ ನದಿ ಒಡಲು ಬಗೆಯುತ್ತಿದ್ದು, ಅಕ್ರಮ ಮರಳು ದಂಧೆಯಲ್ಲಿ ತಹಸೀಲ್ದಾರ, ಪೊಲೀಸ್ ಇಲಾಖೆ, ಪ್ರಭಾವಿಗಳ ಕೈಚಳಕವಿದೆ ಎನ್ನುವ ಆರೋಪಗಳು ಕೇಳಿ ಬಂದಿದ್ದು, ಹಗಲು ರಾತ್ರಿ ಎನ್ನದೇ ದಂಧೆಕೋರರು ನದಿ ಒಡಲು ಬಗೆದು ಮರಳು ಹೆಕ್ಕುತ್ತಿದ್ದು ಇದಕ್ಕೆ ಪೊಲೀಸರೆ ಕಾವಲುಗಾರರಾಗಿದ್ದಾರೆ ಎಂದು ಆರೋಪಿಸಿ ನಮ್ಮ ಕರ್ನಾಟಕ ಸೇನೆಯ ತಾಲೂಕ ಅಧ್ಯಕ್ಷ ಸಿದ್ದು ಪಟ್ಟೇದಾರ ಗೃಹ ಮಂತ್ರಿ ಡಾ.ಜಿ ಪರಮೇಶ್ವರ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ನಗರದೆಲ್ಲೇಡೆ ಅಕ್ರಮ ಮರಳು ಟಿಪ್ಪರ್, ಟ್ಯಾಕ್ಟರ್ ಗಳ ಸದ್ದು ಎತ್ತೆಚ್ಚವಾಗಿದ್ದು, ಎಲ್ಲೇಡೆ ಅಕ್ರಮ ಮರಳು ಸಾಗಣೆಯಿಂದ ಕೃಷಿ ಜಮೀನುಗಳು ಹಾಳಾಗುತ್ತಿವೆ, ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ ಹಾಗೂ ಅಮಾಯಕರು ಪ್ರಾಣ ಕಳೆದು ಕೊಳ್ಳುತ್ತಿದ್ದಾರೆ ಇಷ್ಟೇಲ್ಲಾ ಕಣ್ಣೆದುರೇ ನಡೆಯುತ್ತಿದ್ದರೂ ಸಹ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದಿರುವುದು ನಾಚಿಕೆಗೇಡು ಸಂಗತಿಯಾಗಿದೆ.
ಅಕ್ರಮ ಚಟುವಟಿಕೆಗಳನ್ನು ತಡೆಯಬೇಕಾದ ಪೊಲೀಸ್ ಇಲಾಖೆಯವರೇ ಹಣದಾಸೆಗೆ ಅಕ್ರಮ ಮರುಳು, ಜೂಜು, ಮಟಕಾ, ಗಣಿಗಾರಿಕೆಗಳಂತಹ ಚಟುವಟಿಕೆಗಳಿಗೆ ಕಾವಲಾಗಿ ನಿಂತಿದ್ದಾರೆ ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಈ ವರೆಗೆ ಅಕ್ರಮ ಚಟುವಟಿಕೆಗಳ ನಿಯಂತ್ರಣಕ್ಕೆ ಪೊಲೀಸರು, ಮರಳು ಗಣಿಗಾರಿಕೆ ತಡೆಯಲು ತಹಸೀಲ್ದಾರ ಕೈಗೊಂಡಿರುವ ಕ್ರಮಗಳು ಯಾವುದು ಇಲ್ಲ.
ರಾತ್ರಿಯಷ್ಟೇ ಅಲ್ಲದೇ ಹಗಲಿನಲ್ಲೆ ನಂಬರ್ ಪ್ಲೇಟ್‌ಗಳಿಲ್ಲದ ಟಿಪ್ಪರ್, ಟ್ಯಾಂಕರ್ ಗಳು ಯಮದಂತೆ ರಸ್ತೆಗೆ ಬರಲಿವೆ. ಕೃಷ್ಣ ನದಿ ತೀರದಲ್ಲಿ ನಿಯಮ ಮೀರಿ ಮರಳು ಲೂಟಿ ನಡೆಯುತ್ತಿದೆ. ಅಧಿಕಾರಿಗಳು ಕಂಡೂ ಕಾಣದವರಂತೆ ಜಾಣ ಕುರುಡುತನ ಪ್ರದರ್ಶಿಸುವ ಮೂಲಕ ಭೂ ಒಡಲು ಬರಿದಾಗಲು ಕಾರಣ ಆಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅನುಮಾನ ಹುಟ್ಟಿಸುವ ತಾಲೂಕಾಡಳಿತ ನಡೆ;
ನದಿ ಪಾತ್ರಗಳಲ್ಲಿ ಅಪಾರ ಮರಳು ಸಂಗ್ರಹ ಮಾಡಿದ್ದು, ಸೀಜ್ ಮಾಡಿದ್ರೆ ಸರ್ಕಾಕ್ಕೆ ಲಕ್ಷಾಂತರ ರೂ. ಆದಾಯ ಬರುತ್ತೆ. ಆದರೆ ಈ ಕೆಲಸ ಗಣಿ ಹಾಗೂ ತಾಲೂಕಾಡಳಿತ ಮಾಡುತ್ತಿಲ್ಲ. ಗಣಿ ಹಾಗೂ ತಾಲೂಕಾಡಳಿತ ಅಧಿಕಾರಿಗಳ ವರ್ತನೆ ಸಾಕಷ್ಟು ಅನುಮಾನ ಹುಟ್ಟಿಸಿದ್ದು, ಬೆಲಿಯೇ ಎದ್ದು ಹೊಲ ಮೆಯುತ್ತಿದೆ ಅಂತ ಜನ ಆರೋಪಿಸಿದ್ದಾರೆ.
ಗೃಹ ಸಚಿವರಿಗೆ ಮನವಿ
ಜಿಲ್ಲೇಯಾದ್ಯಂತ ಅಕ್ರಮ ಮರಳು ದಂಧೆಯನ್ನು ತಡೆಗಟ್ಟಬೇಕು. ಟಿಪ್ಪರ್ ಹಾಗೂ ಟ್ರ್ಯಾಕ್ಟರ್ ಗಳು ನಂಬರ್ ಪ್ಟೇಟ್‌ಗಳಿಲ್ಲದೆ ರಾಜಾರೋಷವಾಗಿ ಸಾಗುತ್ತಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಅನುಮಾನಕ್ಕೀಡು ಮಾಡಿದೆ. ಯಮರಾಯನಂತೆ ಬರುವ ಮರಳು ತುಂಬಿದ ಟಿಪ್ಪರ್‌ಗಳಿಂದ ಅಪಘಾತಗಳು ಸಂಭವಿಸುತ್ತಿದ್ದು, ಗೃಹ ಮಂತ್ರಿಗಳು ಪೊಲೀಸರಿಗೆ ಕಟ್ಟುನಿಟ್ಟಾಗಿ ಸೂಚಿಸಿ ಅಕ್ರಮ ಮರಳು ಸಾಗಾಟ ನಿಲ್ಲಿಸಬೇಕು ಮತ್ತು ಈ ಬಗ್ಗೆ ಕಠಿಣ ಕ್ರಮ ಆಗಬೇಕು ಎಂದು ನಮ್ಮ ಕರ್ನಾಟಕ ಸೇನೆ ತಾಲೂಕ ಅಧ್ಯಕ್ಷರಾದ ಸಿದ್ದು ಪಟ್ಟೇದಾರ  ಆಗ್ರಹಿಸಿದ್ದಾರೆ.
ದಾರಿ ತಪ್ಪಿಸುತ್ತಿರುವ ಮಕ್ಕಳ ರಕ್ಷಣಾ ಆಯೋಗ
ತಾಲೂಕಿನ ದೋರನಹಳ್ಳಿ ಗ್ರಾಮದ ಬಳಿ ನಡೆದ ರಸ್ತೆ ಅಪಘಾತದಲ್ಲಿ ಈಶ್ವರ (೧೭), ಕನಕಣ್ಣ (೧೬) ವರ್ಷದ ಇಬ್ಬರು ಬಾಲಕರು ಮೃತಪಟ್ಟಿದ್ದು ಮರಳು ತುಂಬಿದ ಟಿಪ್ಪರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಮಕ್ಕಳು ಸಾವನ್ನಪ್ಪಿದ್ದಾರೆ ಎನ್ನುವ ಶಂಕೆ ವ್ಯಕ್ತಪಡಿಸಿದ್ದು, ಈ ಕುರಿತು ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೀವ್ಹೇಶ್ವರ ಶಾಲಾ ಶಿಕ್ಷಕ ಮಲ್ಲಪ್ಪ ಸಲಾದಪುರ ಎನ್ನುವ ವ್ಯಕ್ತಿ ತನ್ನ ಕೆಲಸಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಿ ತನ್ನದೇ ಬೈಕ್ ಕೊಟ್ಟು ಕಳುಹಿಸಿದ್ದು, ಬೈಕ್ ಸಹ ಅದೇ ಶಿಕ್ಷಕನ ಹೆಸರಿನಲ್ಲಿದೆ. ಆದರೆ ಈ ವಿಷಯವಾಗಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಅವರು ಎಸ್.ಪಿ ಅವರಿಗೆ ಪತ್ರ ಬರೆದಿದ್ದು, ಶಾಲೆಯ ಕೆಲಸ ಮುಗಿದ ಮೇಲೆ ಬಾಲಕರ ಪೋಷಕರೊಬ್ಬರು ತಮ್ಮ ಬೈಕ್ ಕೊಟ್ಟು ಶಹಾಪುರಕ್ಕೆ ಹೊಗಲು ಹೇಳಿದ್ದು, ಮಕ್ಕಳು ಬೈಕ್ ಮೇಲೆ ತೆರಳುವಾಗ ಅಪಘಾತ ಸಂಭವಿಸಿದೆ ಎಂದು ಉಲ್ಲೇಖಿಸಿದ್ದಾರೆ. ಸ್ವತಃ ಮಕ್ಕಳ ಆಯೋಗವೇ ಪ್ರಕರಣವನ್ನೇ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಸಾವನ್ನಪ್ಪಿದ ಮೃತ ಕನಕಣ್ಣನ ಪೋಷಕರು ಹಾಗೂ ಅಹಿಂದ ವರ್ಗದ ತಾಲೂಕ ಅಧ್ಯಕ್ಷ ಶೇಖರ ದೊರಿ ಆರೋಪಿಸಿದ್ದಾರೆ.
ವಸತಿಗಾಗಿ ನಮ್ಮ ಮಗನನ್ನು ನಾವು ಶಾಲೆಯಲ್ಲಿ ಬಿಟ್ಟಿದ್ದು, ನವೇಗೆ ಬೈಕ್ ಕೊಡುತ್ತೇವೆ. ಮತ್ತು ಅಪ್ರಾಪ್ತ ಮಕ್ಕಳಿಗೆ ವಾಹನ ಚಾಲನೆ ಮಾಡಲು ಸರ್ಕಾರದಿಂದ ಅನುಮತಿ ಇರುವುದಿಲ್ಲವಾದರು ಶಿಕ್ಷಕ ಅದ್ಯಾಗೆ ತನ್ನ ಬೈಕ್ ನೀಡಿ ಕಳುಹಿಸಿದ್ದು ಎನ್ನುವ ಯಕ್ಷ ಪ್ರಶ್ನೇ ಕಾಡುತ್ತಿದೆ. ಇದರ ನಡುವೆ ಆಯೋಗವು ಪೋಷಕರ ಮೇಲೆ ಬಾಣ ಇಟ್ಟಿದ್ದು ಎಷ್ಟರ ಮಟ್ಟಿಗೆ ಸರಿ ಎನ್ನುವ ಅನುಮಾನ ಸದ್ಯ ಮೂಡುತ್ತಿದೆ.

ಸೂತಕದ ವಾತವರಣವಿರುವ ಮನೆಯಲ್ಲಿ ಇಂತದ್ದೊಂದು ಪತ್ರ ಪೋಷಕರನ್ನು ಮತ್ತಷ್ಟು ಆಘಾತಕ್ಕೀಡು ಮಾಡಿದೆ. ಘಟನೆಯ ಕುರಿತು ಸರಿಯಾದ ಮಾಹಿತಿ ಪಡಿಯದೇ ಆಯೋಗ ಇಡೀ ಪ್ರಕರಣವನ್ನೆ ತಿರುಚುವ ಕೆಲಸ ಮಾಡುತ್ತಿದೆ ಎಂದು ನಮ್ಮ ಕರ್ನಾಟಕ ಸೇನೆಯ ರಾಜ್ಯ ಪ್ರದಾನ ಸಂಚಾಲಕ ಭೀಮಣ್ಣ ಶಖಾಪುರ ಆರೋಪಿಸಿದ್ದಾರೆ.

About the Author

Praja Vahini

Editor

View All Posts

Spread the love

Post navigation

Previous: ಡಿಸಿಎಂ ಡಿಕೆ ಶಿವಕುಮಾರ್ ಅವರಿಂದಲೇ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಅಚ್ಚರಿ ಹೇಳಿಕೆ!
Next: ದಾರಿ ತಪ್ಪಿಸುತ್ತಿರುವ ಮಕ್ಕಳ ರಕ್ಷಣಾ ಆಯೋಗ

Views:

226

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.