ಬೆಂಗಳೂರು: ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ಮಾರ್ಚ್ 19ಕ್ಕೆ ತೆರೆ ಮೇಲೆ ಅಪ್ಪಳಿಸಲು ಸಜ್ಜಾಗಿದ್ದು, ರಾಕಿಂಗ್ ಸ್ಟಾರ್ ಯಶ್ ಅಭಿನಯವನ್ನು ಅವರ ಅಭಿನಯವನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ..
ಹೌದು, ಟೀಸರ್ ಮೂಲಕವೇ ಧೂಳೆಬ್ಬಿಸಿರುವ ಟಾಕ್ಸಿಕ್ ಸಿನಿಮಾ ಮಾರ್ಚ್ 19 ರಂದು ತೆರೆ ಮೇಲೆ ಅಪ್ಪಳಿಸಲಿದ್ದು ಅಭಿಮಾನಿಗಳು ನೆಚ್ಚಿನ ನಟನ ಅಭಿನಯವನ್ನು ಕಣ್ಣು ತುಂಬಿಕೊಳ್ಳಲು ಕಾಯುತ್ತಿದ್ದಾರೆ.
ಇನ್ನು ಟಾಕ್ಸಿಕ್ ಸಿನಿಮಾದಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟ-ನಟಿಯರ ತಂಡವೇ ಇದರಲ್ಲಿದ್ದು ಅದರಲ್ಲಿ ಪ್ರಮುಖವಾಗಿ ನಟ ಯಶ್ ಅವರಿಗೆ ಈ ಸಿನಿಮಾದಲ್ಲ ಎಷ್ಟು ಸಂಭಾವನೆ ನೀಡಲಾಗಿದೆ ಎಂಬುದೇ ಎಲ್ಲರ ಪ್ರಶ್ನೆಯಾಗಿದೆ.
ಯೆಸ್… ಕೆಜಿಎಫ್ ನಂತರ ರಾಕಿಂಗ್ ಸ್ಟಾರ್ ಯಶ್ ಅವರು ಟಾಕ್ಸಿಕ್ ಸಿನಿಮಾಗೆ ಎಷ್ಟು ಸಂಭಾವನೆ ಪಡೆದಿದ್ದಾರೆ ಎಂಬುವುದರ ಕುರಿತು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಟಾಕ್ಸಿಕ್ ಸಿನಿಮಾಗೆ ಸುಮಾರು 150 ಕೋಟಿ ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿ ಹಾರಿದಾಡುತ್ತಿದೆ.
ನಿರ್ದೇಶಕ ಪ್ರಶಾಂತ್ ನೀಲ್ ಅವರ ಕೆಜಿಎಫ್ ಚಿತ್ರ ಯಶ್ ಅವರ ವೃತ್ತಿಜೀವನಕ್ಕೆ ಮಹತ್ತರ ತಿರುವು ನೀಡಿತು. ಈಗ ಯಶ್ ‘ಟಾಕ್ಸಿಕ್ ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದಲ್ಲಿ ನಟಿಸುತ್ತಿದ್ದು, ಬಿಡುಗಡೆಗೂ ಮುನ್ನವೇ ಚಿತ್ರ ಭಾರಿ ಚರ್ಚೆಗೆ ಗ್ರಾಸವಾಗಿದೆ. ಟೀಸರ್ ಮತ್ತು ಗ್ಲಿಂಪ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದು, ಮಾಸ್ ಆಕ್ಷನ್ ಹೈಲೈಟ್ ಆಗಿದೆ. ಇದನ್ನೂ ಓದಿ: ಇಂಟರ್ನೆಟ್ ಅಲ್ಲಿ ಧೂಳೆಬ್ಬಿಸುತ್ತಿದೆ ಟಾಕ್ಸಿಕ್ ಟೀಸರ್
ವರದಿಗಳ ಪ್ರಕಾರ, ಯಶ್ ಈ ಚಿತ್ರಕ್ಕಾಗಿ ಸುಮಾರು 150 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಅವರು ಈ ಚಿತ್ರಕ್ಕೆ ಸಹ ನಿರ್ಮಾಪಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಈ 150 ಕೋಟಿ ಸಂಭಾವನೆಯನ್ನು ನೇರವಾಗಿ ತೆಗೆದುಕೊಳ್ಳದೇ, ಚಿತ್ರ ನಿರ್ಮಾಣದ ಮೇಲೆಯೇ ಹೂಡಿಕೆ ಮಾಡಿರುವ ಸಾಧ್ಯತೆಗಳೂ ಕೇಳಿಬರುತ್ತಿವೆ. ಹೀಗಾಗಿ ಅವರ ಒಟ್ಟು ಲಾಭ ಇನ್ನಷ್ಟು ಹೆಚ್ಚಿರಬಹುದು ಎಂದು ಚಿತ್ರ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
