ತಾಯಿ ಪ್ರೀತಿ ಎಂಬುದು ಸಾಗರಕ್ಕಿಂತ ಹೆಚ್ಚು. ತಾಯಿ ಪ್ರೀತಿ ಸಿಗದಿದ್ರೆ ಕೇವಲ ಮನುಷ್ಯರು ಮಾತ್ರ ತಬ್ಬಲಿ ಆಗುವುದಿಲ್ಲ. ಪ್ರಾಣಿಗಳೂ ಅನಾತವಾಗುತ್ತವೆ. ಹೌದು.. ಇದಕ್ಕೆ ಉದಾಹರಣೆ ಎಂಬಂತೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋವೊಂದು ಹರಿದಾಡುತ್ತಿದೆ.
ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಕೋತಿಗೊಂದು ತನ್ನ ಮರಿಯನ್ನು ತಿರಸ್ಕರಿಸಿದ್ದಕ್ಕೆ ಗೊಂಬೆಯ ಜೊತೆ ತನ್ನ ತಾಯಿಯ ಪ್ರೀತಿ ಪಡೆಯುತ್ತಿದೆ. ಜಪಾನಿನ ಮೃಗಾಲಯದಲ್ಲಿ ಕಂಡು ಬಂದ ಈ ಅಪರೂಪದ ದೃಶ್ಯ ಎಲ್ಲರ ಮನಕಲಕುವಂತಿದೆ.
ಯೆಸ್.. ತಾಯಿ ತನ್ನನ್ನು ದೂರ ಮಾಡಿದ್ದಕ್ಕೆ ತಬ್ಬಲಿಯಾಗಿ ಬಳಲುತ್ತಿದ್ದ ಕೋತಿಮರಿಗೆ ಅಲ್ಲಿಯ ಸಿಬ್ಬಂದಿ ಒಬ್ಬರು ಗೊಂಬೆಯೊಂದನ್ನು ನೀಡಿರುತ್ತಾರೆ. ಗೊಂಬೆಯನೇ ತನ್ನ ಸ್ವಂತ ತಾಯಿಯಂತೆ ನೋಡುತ್ತಿರುವ ಮರಿ ಕೋತಿಯು ಪ್ರತಿಯೊಂದು ಕ್ಷಣವೂ ಗೊಂಬೆಯ ಪ್ರೀತಿಯನ್ನು ಅನುಭವಿಸುತ್ತಿದೆ. ಇದನ್ನೂ ಓದಿ: Amazon ಕಂಪನಿಯ ಕಾರ್ಪೊರೇಟ್ ಕಚೇರಿ ಉದ್ಘಾಟನೆ
ಮನುಷ್ಯನಿಗೆ ಮಾತ್ರ ಪ್ರೀತಿ, ಸಂಬಂಧ ಕರುಳು ಬಳ್ಳಿ ಇರುವುದಿಲ್ಲ ಪ್ರಾಣಿಗಳಿಗೂ ಇರುತ್ತೆ ಅನ್ನೋದಕ್ಕೆ ಇದೆ ಉತ್ತಮ ಉದಾಹರಣೆಯಾಗಿದೆ. ತಾಯಿಯ ಪ್ರೀತಿ ಹರಸಿ ಮಗು ತನ್ನ ತಾಯಿಯ ಹತ್ತಿರ ಹೋದರು ಕೂಡ ತಾಯಿ ಪುಟ್ಟ ಕೋತಿ ಮರಿಯನ್ನು ಹತ್ತಿರಕ್ಕೆ ಸೇರಿಸುವುದಿಲ್ಲ. ಇದನ್ನರಿತ ಸಿಬ್ಬಂದಿಗಳು ಕೋತಿಯಂತೆ ಇರುವ ಗೊಂಬೆಯನ್ನು ಕೋತಿಮರಿಗೆ ನೀಡುತ್ತಾರೆ. ಆ ಗೊಂಬೆಯಲ್ಲೇ ತನ್ನ ತಾಯಿಯ ಪ್ರೀತಿಯನ್ನು ಪುಟ್ಟ ಕೋತಿಮರಿ ಅನುಭವಿಸುತ್ತಿರುವುದು ಇಡಿ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಮನಸ್ಸಿನ ಕರಗಿಸುವಂತಿದೆ.
