Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಸರ್ಕಾರಿ ಆಸ್ಪತ್ರೆಯಲ್ಲಿ ಯಶಸ್ವಿ ಮೂಳೆ, ಕೀಲು ಶಸ್ತ್ರ ಚಿಕಿತ್ಸೆ
  • ಶಹಾಪುರ

ಸರ್ಕಾರಿ ಆಸ್ಪತ್ರೆಯಲ್ಲಿ ಯಶಸ್ವಿ ಮೂಳೆ, ಕೀಲು ಶಸ್ತ್ರ ಚಿಕಿತ್ಸೆ

Praja Vahini February 15, 2026
Screenshot_2026-02-15-17-31-43-61_6012fa4d4ddec268fc5c7112cbb265e7
Spread the love

ಶಹಾಪುರ: ಸಾಮಾನ್ಯವಾಗಿ ಮೂಳೆ , ಕೀಲು ಮುರಿದಾಗ ಅದರ ಸ್ವರೂಪ ಬದಲಾಗಿರುತ್ತದೆ. ನೋವು ಇಡೀ ಜೀವನವನ್ನೇ ಬೇಡ ಎನ್ನುವ ರೀತಿಯಲ್ಲಿ ಆಗಿರುತ್ತೇ. ಸರ್ಕಾರಿ ಆಸ್ಪತ್ರೆಯಲ್ಲಿ ಗುಣಪಡಿಸುವ ವೈದ್ಯರೊಬ್ಬರು ಸಿಕ್ಕರೆ ರೋಗಿಯ ಸಮಸ್ಯೆಯೆ ಅಂತ್ಯವಾಗುತ್ತದೆ. ತಾಲೂಕಿನ ರಸ್ತಾಪುರ ಗ್ರಾಮದ ರೋಗಿಯು ತನ್ನ ಕೈಯ ಕೀಲು ಮುರಿದುಕೊಂಡು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು, ಡಾ. ಶರಣು ಹೊಸ್ಮನಿ ಅವರ ವೈದ್ಯರ ತಂಡ ಅದನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಸಂಪೂರ್ಣವಾಗಿ ಗುಣಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ಸುಮಾರು ವರ್ಷಗಳಿಂದ ಮೂಳೆ ತಜ್ಞರು ಇರಲಿಲ್ಲಾ. ಇದೀಗ ಮೂಳೆ ತಜ್ಞರಾಗಿ ಡಾ.ಶರಣು ಹೊಸ್ಮನಿ ಅವರು ಅಧಿಕಾರಿ ವಹಿಸಿಕೊಂಡಿದ್ದು, ಮೊದಲನೇಯ  ಶಸ್ತ್ರ ಚಿಕಿತ್ಸೆಯಶಸ್ವಿಯಾಗಿಸಿದ್ದಾರೆ. ಇದರಿಂದ ಯಾವುದೇ ಅಪಘಾತಗಳು ಸಂಭವಿಸಿದ್ದಲ್ಲಿ ಕೈ, ಕಾಲು, ಕೀಲು ಮುರಿದು ಕೊಂಡರೆ ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ತೆರಳುವುದು ಅನಿವಾರ್ಯತೆ ಆಗಿತ್ತು, ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರು ಬಡವರಿಗೆ ಸೇವೆ ಕಲ್ಪಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಮಟ್ಟದಲ್ಲಿ ಮನವಿ ಮಾಡಿದ್ದರು, ಡಾ.ಶರಣು ಹೊಸ್ಮನಿ ವೈದ್ಯರಾಗಿ ಕಳೆದ 15 ದಿನಗಳ ಹಿಂದೆ ಅಧಿಕಾರ ತೆಗೆದುಕೊಂಡಿದ್ದು ಬಡವರ ಪಾಲಿಗೆ ವರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ರೋಗಿಗಳಿಗೆ ಅನುಕೂಲವಾಗಲಿದೆ ಎನ್ನುವುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ.
ಘಟನೆ ವಿವರ
ತಾಲೂಕಿನ ರಸ್ತಾಪುರ ಗ್ರಾಮದ ಸಾಯಿಬಣ್ಣ ಎನ್ನುವವರು ಭಾರವಾದ ಚೀಲ ಎತ್ತುವ ವೇಳೆ ಆಯಾತಪ್ಪಿ ಕೈಯ ಕೀಲು ಮುರಿದುಕೊಂಡಿದ್ದ, ತಕ್ಷಣ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು, ಆಸ್ಪತ್ರೆಯ ವೈದ್ಯರು ಶಸ್ತç ಚಿಕಿತ್ಸೆಗೆ ಒಳಪಡಿಸಿ ರೋಗಿಯ ಕೈ ಕೀಲು ಸರಿಪಡಿಸಿದ್ದಾರೆ.
ದೇವರ ಸ್ವರೂಪದಲ್ಲಿ ಬಂದ ವೈದ್ಯರು
ಬಡತನದಿಂದಾಗಿ ಕೈ ಕೀಲು ಮುರಿದಿತ್ತು. ನಿರ್ಲಕ್ಷದಿಂದ ನೋವು ಹೆತ್ತಚ್ಚವಾಗಿತ್ತು, ಸರ್ಕಾರಿ ಆಸ್ಪತ್ರೆಯ ವೈದ್ಯರು ದೇವರ ಸ್ವರೂಪದಲ್ಲಿ ಬಂದ ಡಾ.ಶರಣು ಹೊಸ್ಮನಿಯವರು ಶಸ್ತ್ರ ಚಿಕಿತ್ಸೆ ನಡೆಸಿ ಕೈಯನ್ನು ಸರಿಪಡಿಸಿದ್ದಾರೆ ಎಂದು ಚಿಕಿತ್ಸೆ ಪಡೆದ ರೋಗಿ ಸಾಯಿಬಣ್ಣ ರಸ್ತಾಪುರ ಹೇಳಿದ್ದಾರೆ.

About the Author

Praja Vahini

Editor

View All Posts

Spread the love

Post navigation

Previous: ಲಂಬಾಣಿ ಸಮುದಾಯದ ಅಭಿವೃದ್ಧಿಗೆ ಕಾಂಗ್ರೆಸ್‌ ಸರ್ಕಾರದ ಕೊಡುಗೆ ಅಪಾರ: ಡಿ.ಕೆ. ಶಿವಕುಮಾರ್
Next: ನಾವ್ಯಾರು ಕೂಡ ದೇವರಲ್ಲಿ  ಇದೇ ಜಾತಿಗೆ ಸೇರಿದವರು ಎಂದು ಅಪ್ಲಿಕೇಶನ್ ಹಾಕಿಲ್ಲ: ಶಾಸಕ ಸತೀಶ್ ರೆಡ್ಡಿ

Views:

462

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.