ರೋಣ: ಕ್ರೀಡೆ ಆಡುವುದರಿಂದ ಮನುಷ್ಯನಿಗೆ ಅದೆಷ್ಟೋ ಲಾಭಗಳಿವೆ. ದೈಹಿಕ ಆರೋಗ್ಯಗಳ ಜೊತೆಗೆ ಮಾನಸಿಕ ಆರೋಗ್ಯ ಕೂಡ ಸುಧಾರಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
ಅಲ್ಲದೆ ಯಾವುದೇ ಒಂದು ಕ್ರೀಡೆ ಆಡಲು ಯಾರಿಗೂ ಕೂಡ ವಯಸಿನ ಮಿತಿಗಿಲ್ಲ. ಅದಕ್ಕೆ ಉದಾಹರಣೆ ಎಂಬಂತೆ ಇದೀಗ ಸೀನಿಯರ್ ಶಿರಸ್ಥೇದಾರ್ ಪಕೀರಪ್ಪ ಕಳಕಂಬಿ ಅವರು ರಾಷ್ಟ್ರೀಯ ಹಾಕಿ ಆಡಲು ಆಯ್ಕೆಯಾಗಿರೋದು ಇದಕ್ಕೆ ದೊಡ್ಡ ಉದಾಹರಣೆ.
ಹೌದು, ಪಕೀರಪ್ಪ ಕಳಕಂಬಿ ರಾಷ್ಟ್ರೀಯ ಖ್ಯಾತ ಹಾಕಿ ಕ್ರೀಡಾಪಟು ನ್ಯಾಯಾಂಗ ಇಲಾಖೆ ರೋಣ ನ್ಯಾಯಾಲಯದಲ್ಲಿ ಅತ್ಯುತ್ತಮ ಸೇವೆ ಮಾಡುವ ಮೂಲಕ ನ್ಯಾಯಾಂಗದ ಘನತ ಗೌರವ ಕಾಪಾಡಿಕೊಂಡು ಬಂದಿದ್ದಾರೆ.
2025-26 ನೇ ಸಾಲಿನ 8ನೇ ರಾಷ್ಟೀಯ ಹಾಕಿ ಪಂದ್ಯಾವಳಿಗಳು ನಡೆಯಲಿದ್ದು, ಕರ್ನಾಟಕ ತಂಡದ ಪ್ರತಿನಿಧಿಯಾಗಿ ಕೇರಳ ರಾಜ್ಯದ ಪರವಾಗಿ ಇದೀಗ ವಿನೋದ್ ಫಕೀರಪ್ಪ ಕಳಕಂಬಿ ಅವರು ಭಾಗವಹಿಸಲಿದ್ದಾರೆ.
ಮಹಾರಾಷ್ಟ್ರದ ಪುಣೆ ಯಲ್ಲಿ ಕ್ರೀಡಾಕೂಟಗಳು ನಡೆಯಲಿದ್ದು, ನಾಯಾಂಗ ಇಲಾಖೆ ನ್ಯಾಯಾಧೀಶರು ಹಾಗೂ ಸಿಬ್ಬಂದಿ ವರ್ಗದವರು ಮತ್ತು ವಕೀಲರ ಸಂಘ ರೋಣ ಹೃದಯಪೂರ್ವಕವಾಗಿ ವಿನೋದ್ ಅವರಿಗೆ ಆಭಿನಂದನೆ ಸಲ್ಲಿಸಿರುತ್ತಾರೆ.
