ಬೆಂಗಳೂರು: ಸಾವಿರಾರು ಕೋಟಿಯ ಒಡೆಯ ಕಾನ್ಫಿಡೆಂಟ್ ಗ್ರೂಪ್ ನ ಮುಖ್ಯಸ್ಥ ಸಿಜೆ ರಾಯ್ ಅವರು ಆತ್ಮಹತ್ಯೆಗೆ ಶರಣಾಗಿದ್ದು, ಇದೀಗ ಇವರ ಆತ್ಮಹತ್ಯೆಯ ಸುತ ನೂರಾರು ಅನುಮಾನಗಳು ಹುಟ್ಟಿಕೊಂಡಿವೆ.
ಹೌದು, ಹೆಸರಾಂತ ಉದ್ದಿಮೆ ಸಾವಿರಾರು ಕೋಟಿಯ ಒಡೆಯ ಸಿಜೆ ರಾಯ್ ಅವರು ನಿನ್ನೆ(ಶುಕ್ರವಾರ ಜನವರಿ 30) ರಂದು ತಮ್ಮ ಕಚೇರಿಯಲ್ಲಿ ಐಟಿ ಅಧಿಕಾರಿಗಳ ಎದುರುಗಡೆಗೆ ತಮ್ಮ ಪಿಸ್ತೂಲ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇನ್ನು ರಾಯ್ ಅವರು ಆತ್ಮಹತ್ಯೆಗೂ ಮುನ್ನ ಯಾರ ಜೊತೆಯಾದ್ರೂ ಮಾತನಾಡಿದ್ರಾ? ಅಥವಾ ಯಾರಿಗಾದರೂ ಮೆಸೇಜ್ ಕಳುಹಿಸಿದ್ರಾ? ಎಂದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಮೊಬೈಲ್‌ನ್ನು ಸಿಐಟಿ ಸೈಬರ್ ಸೆಲ್‌ಗೆ ರಿಕವರಿಗಾಗಿ ಕಳುಹಿಸಿದ್ದಾರೆ.
ಕಾನ್ಫಿಡೆಂಟ್ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ದೂರಿನಲ್ಲಿ ತಿಳಿಸಿರುವಂತೆ ಆತ್ಮಹತ್ಯೆಗೂ ಮುನ್ನ ತಾಯಿ ಜೊತೆ ಮಾತನಾಡಬೇಕೆಂದು ರಾಯ್ ತಿಳಿಸಿದ್ದರು. ಜೊತೆಗೆ ಗನ್‌ಮ್ಯಾನ್ ಬಳಿ ಯಾರಿಗೂ ಒಳಗೆ ಬಿಡದಂತೆ ಹೇಳಿದ್ದರು. ಅದರಂತೆ ಆತ್ಮಹತ್ಯೆಗೂ ಮುನ್ನ ನಿಜಕ್ಕೂ ತಾಯಿ ಜೊತೆಗೆ ಮಾತನಾಡಿದ್ರಾ? ಅಥವಾ ಬೇರೆ ಇನ್ಯಾರ ಜೊತೆಯಾದ್ರೂ ಮಾತನಾಡಿದ್ರಾ? ಅಥವಾ ಮೆಸೇಜ್ ಕಳಿಸದ್ದಾರಾ? ಎಂಬ ಕೆಲ ಅನುಮಾನಗಳು ವ್ಯಕ್ತವಾಗಿದ್ದು, ಐಫೋನ್ ಮತ್ತು ಆ್ಯಂಡ್ರಾಯ್ಡ್ ಫೋನ್‌ಗಳನ್ನು ಪೊಲೀಸರ ವಶಕ್ಕೆ ಪಡೆದು, ಸಿಐಡಿಗೆ ರವಾನಿಸಿದ್ದಾರೆ.
2 ಫೋನ್‌ಗೆ ಪಾಸ್‌ವಾರ್ಡ್ ಇರುವ ಕಾರಣ ಕೋರ್ಟ್ ಅನುಮತಿ ಪಡೆದು ಎಫ್‌ಎಸ್‌ಎಲ್‌ಗೆ ರವಾನೆ ಮಾಡಬೇಕು. ಹೀಗಾಗಿ ಸದ್ಯ ಸಿಐಡಿ ಸೈಬರ್ ಸೆಲ್‌ಗೆ ಮೊಬೈಲ್‌ನ್ನು ರವಾನೆ ಮಾಡಿದ್ದು, ಮೊಬೈಲ್‌ನಲ್ಲಿ ಇರುವ ಮಾಹಿತಿ ರಿಕವರಿ ಮಾಡಲಿದ್ದಾರೆ.
ಇನ್ನೂ ರಾಯ್ ಅವರ ಡೈರಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಡೈರಿಯಲ್ಲಿ ಕೆಲ ನಟಿಯರು, ಮಾಡೆಲ್ ಹಾಗೂ ರಾಜಕಾರಣಿಗಳ ಹೆಸರುಗಳು ಪತ್ತೆಯಾಗಿದ್ದು, ಯಾವ ಕಾರಣಕ್ಕಾಗಿ ಬರೆದಿದ್ದಾರೆ. ಬರೀ ಈವೆಂಟ್ ವಿಚಾರಕ್ಕಾ? ಅಥವಾ ಬೇರೆ ವಿಷಯಾ ಇದೆಯಾ? ಎಂದು ಪೊಲೀಸರು ಇಂಚಿಂಚೂ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಂಡ ಕಾನ್ಫಿಡೆಂಟ್ ಗ್ರೂಪ್ ನ ಮುಖ್ಯಸ್ಥ ಸಿಜೆ ರಾಯ್
ಒಟ್ಟಿನಲ್ಲಿ ಯಾವುದಕ್ಕೂ ಅಂಜದೆ ಅಳುಕದೆ ಇಡೀ ಉದ್ಯಮ ಕುಲಕ್ಕೆ ಹೆಸರಾಗಿದ್ದ ಸಿಜೆ ರಾಯ್ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಉದ್ಯಮ ಲೋಕಕ್ಕೆ ದಿಗ್ ಭ್ರಮೆ ಬಡೆದಂತಾಗಿದೆ.
ಇನ್ನು ಇವರ ಆತ್ಮಹತ್ಯೆಗೆ ಪ್ರಮುಖ ಕಾರಣವೇನೆಂದು ಇಲ್ಲಿಯವರೆಗೂ ಮೇಲ್ನೋಟಕ್ಕೆ ಐಟಿ ಅಧಿಕಾರಿಗಳೇ ಪ್ರಮುಖ ಕಾರಣ ಎಂದು ತಿಳಿದುಬಂದಿದೆ. ಹಾಗಾದ್ರೆ ಸಿಜೆ ರಾಯ್ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂದು ಕಾದು ನೋಡಬೇಕಿದೆ.
