ಚಳಿಗಾಲ ಬಂದರೇ ಸಾಕು ಚರ್ಮದ ಜೊತೆ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳು ಆಗುವುದು ಸರ್ವೇಸಾಮಾನ್ಯ. ಕೇವಲ ಚರ್ಮ, ಆರೋಗ್ಯ ಮಾತ್ರವಲ್ಲದೆ ನಮ್ಮ ಕೂದಲನ ಮೇಲು ಕೂಡ ಚಳಿಗಾಲದಲ್ಲಿ ಅಡ್ಡ ಪರಿಣಾಮಗಳು ಹೆಚ್ಚಾಗಿ ಕಂಡುಬರುತ್ತವೆ. ಹಾಗಾಗಿ ಚಳಿಗಾಲದಲ್ಲಿ ಕೂದಲಿನ ಆರೈಕೆ ಮಾಡುವುದು ತುಂಬಾ ಅವಶ್ಯವಾಗಿದೆ..
ಚಳಿಗಾಲದಲ್ಲಿ ಕೂದಲಿಗೆ ತಣ್ಣಗಿರುವ ಎಣ್ಣೆ ಹಚ್ಚುವ ಬದಲು ಸ್ವಲ್ಪ ಬೆಚ್ಚಗೆ ಮಾಡಿ ತಲೆಗೆ ಹಚ್ಚಿ ಮಸಾಜ್ ಮಾಡುವುದು ಬಹಳ ಉಪಯುಕ್ತವಾಗುತ್ತದೆ.
ಚಳಿಗಾಲದಲ್ಲಿ ವಾರದಲ್ಲಿ ಎರಡರಿಂದ ಮೂರು ಬಾರಿ ತಲೆಗೆ ಎಣ್ಣೆ ಹಚ್ಚಿ ಮಸಾಜ್ ಮಾಡುವುದರಿಂದ ಕೂದಲು ಚೆನ್ನಾಗಿ ಇರುವುದರ ಜೊತೆಗೆ ಯಾವುದೇ ರೀತಿ ಹಾಳಾಗದಂತೆ ತಡೆಯುತ್ತದೆ. ಶಾಂಪೂ ಬಳಕೆ ಚಳಿಗಾಲದಲ್ಲಿ ಕೂದಲು ತೊಳೆಯಲು ಸೌಮ್ಯ ಮತ್ತು ಮಾಯಿಶ್ಚರೈಸಿಂಗ್ ಶಾಂಪೂಗಳನ್ನು ಬಳಸಬೇಕು.
ನೀವು ಬಳಸುವ ಶಾಂಪೂಗಳಲ್ಲಿ ಸಲ್ಫೇಟ್ಗಳಂತಹ ಹಾನಿಕಾರಕ ರಾಸಾಯನಿಕಗಳು ಇರದಂತೆ ಗಮನ ಕೊಡಿ. ಏಕೆಂದರೆ ಇವು ಕೂದಲಿನ ನೈಸರ್ಗಿಕ ತೇವಾಂಶವನ್ನು ಕಳೆದುಹೋಗುವಂತೆ ಮಾಡುತ್ತವೆ. ಬದಲಾಗಿ, ತೆಂಗಿನ ಎಣ್ಣೆ, ಮೆಂತ್ಯ ಮುಂತಾದ ನೈಸರ್ಗಿಕ ಪದಾರ್ಥಗಳನ್ನು ಹೊಂದಿರುವ ಶಾಂಪೂಗಳು ಕೂದಲಿಗೆ ಹೆಚ್ಚು ಲಾಭಕರ.
ಶಾಂಪೂ ಮಾಡಿದ ನಂತರ ಕಂಡಿಷನರ್ ಬಳಸುವುದು ಅತ್ಯಂತ ಮುಖ್ಯ. ಇದು ಕೂದಲನ್ನು ಮೃದುವಾಗಿ, ಸ್ಮೂತ್ ಆಗಿ ಮತ್ತು ಹೊಳೆಯುವಂತೆ ಮಾಡುತ್ತದೆ.
ತಲೆ ಸ್ನಾನದ ನಂತರ ಕೂದಲನ್ನು ಟವೆಲ್ನಿಂದ ಬಲವಾಗಿ ಒರೆಸಬಾರದು. ಇದರಿಂದ ತಲೆಗೆ ಒತ್ತಡ ಬೀಳುತ್ತದೆ ಹಾಗೂ ಕೂದಲು ಉದುರುವಿಕೆಗೆ ಕಾರಣವಾಗಬಹುದು. ಟವೆಲ್ ಬಳಸುವ ಬದಲು, ಹೇರ್ ಡ್ರೈಯರ್ ಅನ್ನು ಕಡಿಮೆ ಉಷ್ಣತೆಯಲ್ಲಿ ಬಳಸುವುದು ಉತ್ತಮ. ಇದು ಕೂದಲನ್ನು ಸುರಕ್ಷಿತವಾಗಿ ಒಣಗಿಸಿ, ಕೂದಲು ಉದುರುವಿಕೆಯ ಸಮಸ್ಯೆಯನ್ನು ತಡೆಯಲು ಸಹಾಯ ಮಾಡುತ್ತದೆ.
ತಲೆ ಸ್ಥಾನ ಮಾಡಿದ ನಂತರ ಕೂದಲನ್ನು ಚೆನ್ನಾಗಿ ಒಣಗಿಸಬೇಕು ಇಲ್ಲದಿದ್ದರೆ ಚಳಿಗಾಲದಲ್ಲಿ ಹೆಚ್ಚು ತಲೆನೋವು ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ತಲೆ ಸ್ನಾನ ಮಾಡಿದ ನಂತರ ತಲೆಕೂದಲನ್ನು ಚೆನ್ನಾಗಿ ಒಣಗಿಸುವುದು ಉತ್ತಮ.
