ಬೆಂಗಳೂರು: ಹಿರಿಯ ಪತ್ರಕರ್ತ, ಪತ್ರಕರ್ತರ ಸೊಸೈಟಿ ನಿರ್ದೇಶಕರಾದ ಸಂಜೆ ವಾಣಿ ದೊಡ್ಡಬೊಮ್ಮಯ್ಯ ಅವರು ನಿಧನರಾಗಿದ್ದು, ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ಸಂತಾಪಗಳು.
ದಶಕಗಳ ಕಾಲ ಕನ್ನಡ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದ ದೊಡ್ಡ ಬೊಮ್ಮಯ್ಯ ಪತ್ರಕರ್ತ ವಲಯದಲ್ಲಿ ಸ್ನೇಹಜೀವಿ ಎಂದೇ ಗುರುತಿಸಿಕೊಂಡಿದ್ದರು. ದೂರದರ್ಶನ ಚಂದನವಾಹಿನಿಯಲ್ಲೂ ಅವರು ಕೆಲಸ ಮಾಡಿದ್ದರು. ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಜೆಸಿಬಿ ಘರ್ಜನೆ
ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಬಂಧುಗಳಿಗೆ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ನೀಡಲಿ.
