Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಸಂವಿಧಾನದ ಅರಿವು ಪ್ರತಿ ಪ್ರಜೆಯ ಕರ್ತವ್ಯವಾಗಬೇಕು
  • Uncategorized

ಸಂವಿಧಾನದ ಅರಿವು ಪ್ರತಿ ಪ್ರಜೆಯ ಕರ್ತವ್ಯವಾಗಬೇಕು

Praja Vahini November 26, 2025 1 minute read
WhatsApp Image 2025-11-26 at 17.25.08
Spread the love

ಸಂವಿಧಾನ ದಿನ ಆಚರಣೆ/ ಅಧಿಕಾರಿಗಳು-ಮುಖಂಡರ ನಡುವೆ ವಾಗ್ವಾದ

ಶಹಾಪುರ: ಬಾಬಾ ಸಾಹೇಬರು ತೊರಿಸಿ ಕೊಟ್ಟ ಮಾರ್ಗದರ್ಶನದಂತೆ ನಾವೆಲ್ಲರೂ ಮುಂದೆ ನಡೆಯಬೇಕು ಅಂದಾಗ ಮಾತ್ರ ಜೀವನಕ್ಕೆ ಅರ್ಥ ಸಿಗಲಿದ್ದು, ಸಂವಿಧಾನದ ಅರಿವು ಪ್ರತಿ ಪ್ರಜೆಯ ಕರ್ತವ್ಯವಾಗಬೇಕು ಎಂದು ಸಾಹಿತಿ ಗಾಳೆಪ್ಪ ಪೂಜಾರಿ ಹೇಳಿದರು.

ನಗರದ ಬಾಲಕರ ಪ್ರೌಢಶಾಲೆಯಲ್ಲಿ ತಾಲೂಕಾಡಳಿತ ವತಿಯಿಂದ ನಡೆದ ‘ಸಂವಿಧಾನ ದಿನದ’ ಅಂಗವಾಗಿ ಸಂವಿಧಾನ ಪೀಠಿಕೆ ಓದುವುದರ ಮುಖಾಂತರ ಪ್ರಾಸ್ತಾವಿಕವಾಗಿ ಮಾತನಾಡಿ, ಡಾ.ಬಿ.ಆರ್ ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನವನ್ನು ಬರೆದುಕೊಟ್ಟು ದೇಶದಲ್ಲಿ ಸಂವಿಧಾನಾತ್ಮಕ ಆಡಳಿತ ನಡೆಸಲು ಸಹಕಾರಿಯಾಗಿದ್ದಾರೆ. ದೇಶದ ಎಲ್ಲರೂ ಸಂವಿಧಾನವನ್ನು ಅರಿಯಬೇಕು. ಸಂವಿಧಾನದ ಆಶಯದಂತೆ ನಡೆಯಬೇಕು. ಸ್ವತಂತ್ರ ಭಾರತದ ಪ್ರಜಾಪ್ರಭುತ್ವದ ನಮ್ಮ ದೇಶದಲ್ಲಿ ವಾಸವಾಗಿರುವ ಪ್ರತಿಯೊಬ್ಬರು ನಮ್ಮ ಸಂವಿಧಾನದ ಆಶಯಗಳನ್ನು ತಿಳಿದುಕೊಂಡು ಹಕ್ಕು ಕರ್ತವ್ಯಗಳ ಜೊತೆಗೆ ಸಂವಿಧಾನವನ್ನು ಗೌರವಿಸುವ ಕೆಲಸ ಪ್ರತಿಯೊಬ್ಬರು ಮಾಡಬೇಕು ಎಂದರು.

ಕಾರ್ಯಕ್ರಮಕ್ಕೂ ಮುನ್ನ ನಗರದಲ್ಲಿರುವ ಬಾಬಾ ಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವಿಸಲಾಯಿತು.

ತಾಲೂಕಾಡಳಿತ ನಿರ್ಲಕ್ಷಯಕ್ಕೆ ಆಕ್ರೋಶ

ನಗರದಲ್ಲಿ ಸಂಭ್ರಮದಿಂದ ಆಚರಿಸಬೇಕಾಗಿದ್ದ ಸಂವಿಧಾನ ದಿನದ ಕಾರ್ಯಕ್ರಮದಲ್ಲಿ ಕೇಲ ಅಧಿಕಾರಿಗಳು ಮತ್ತು ಮುಖಂಡರ ನಡುವೆ ವಾಗ್ವಾದಗಳು ನಡೆದವು. ಕಾರ್ಯಕ್ರಮಕ್ಕೂ ಮುನ್ನ ತಾಲೂಕಾಡಳಿತ ಮುಖಂಡರನ್ನು ಆಹ್ವಾನ ಮಾಡಬೇಕಿತ್ತು, ಅದು ಸಹ ತಹಸೀಲ್ದಾರರು ಸರಿಯಾಗಿ ಮಾಡಿಲ್ಲಾ. ಆದರೆ ಕೇವಲ ಬೆರಳಣಿಕೆಯಷ್ಟು ಸರ್ಕಾರಿ ಅಧಿಕಾರಿಗಳು ಪಾಲ್ಗೊಂಡಿದ್ದರಿಂದ ಮುಖಂಡರು ಗರಂ ಆಗಿ ಕಾರ್ಯಕ್ರಮವನ್ನು ಬಹಿಷ್ಕರಿಸಿ ರಸ್ತೆ ತಡೆ ನಡೆಸಿದರು. ಇದಾದ ಬಳಿಕ ಮುಂಜಾಗ್ರತ ಕ್ರಮ ವಹಿಸಬೇಕಾಗಿದ್ದ ತಾಲೂಕಾಡಳಿತ ಮಕ್ಕಳಿಗೆ ಕೂಡಲೇ ಕಾರ್ಯಕ್ರಮಕ್ಕೆ ಕರೆ ತರಲು ಸೂಚಿಸಿದ್ದು, ಮಕ್ಕಳು ಬಿಸಿಲಿನಲ್ಲಿ ರಸ್ತೆಗೆ ಬರುವಂತಾಯಿತು, ಇದರಿಂದ ಮಕ್ಕಳಿಗೆ ಅಪಾಯ ಉಂಟಾಗಿದ್ದರೆ ಇದಕ್ಕೆ ಯಾರು ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು. ನಂತರ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಾಗಿ ಕಾರ್ಯಕ್ರಮ ಮಾಡಿದರು. ಇದನ್ನೂ ಓದಿ: ಸಂವಿಧಾನದ ಅರಿವು ಪ್ರತಿ ಪ್ರಜೆಯ ಕರ್ತವ್ಯವಾಗಬೇಕು

ತಾಲೂಕಾಡಳಿತ ಇದೊಂದೆ ಕಾರ್ಯಕ್ರಮವಂತಲ್ಲಾ, ಪ್ರತಿ ಜಯಂತಿಗಳು, ಸರ್ಕಾರಿ ಕಾರ್ಯಕ್ರಮಗಳಲ್ಲೂ ಸಹ ಸಾಕಷ್ಟು ಬೇಜವಾಬ್ದಾರಿ ತೋರಿಸುತ್ತಾರೆ. ಇನ್ನೂ ಪ್ರಶ್ನಿಸಿದರೆ ಉಡಾಫೆ ಉತ್ತರ ನೀಡುತ್ತಾರೆ, ಇದರಿಂದ ತಾಲೂಕಾಡಳಿಣ ಅಪಮಾನ ಮಾಡುತ್ತಿದ್ದು, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರು ತಾಲೂಕಾಡಳಿತಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕಿದೆ ಎನ್ನುವುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

ತಾಲೂಕಾಡಳಿತ ಕಾರ್ಯಕ್ರಮ ಮರೆತ ತಹಸೀಲ್ದಾರ

ತಾಲೂಕಾಡಳಿತದಿಂದ ನಡೆದ ಕಾರ್ಯಕ್ರಮದಲ್ಲಿ ಹಾಜರಾಗದ ತಹಸೀಲ್ದಾರ್ ಸಿದ್ಧರೂಢ ಬನ್ನಿಕೊಪ್ಪ ಅವರು ತಮ್ಮ ಜವಾಬ್ದಾರಿಯನ್ನು ಮರೆತು ಬೇರೆಡೆ ಖಾಸಗಿ ಕಾರ್ಯಕ್ರಮಗಳಲ್ಲಿ ಬಾಗಿಯಾದ್ದು ಇದು ಸಹ ದಲಿತ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಸಂದರ್ಭದಲ್ಲಿ ತಹಸೀಲ್ದಾರ ಪ್ರಸನ್ನ, ಖಜನಾಧಿಕಾರಿ ಡಾ.ಮೊನಪ್ಪ ಶಿರವಾಳ, ಪೌರಾಯುಕ್ತ ಜೀವನ, ಬಿಇಓ ವೈ.ಎಸ್ ಹರಗಿ, ಪಿಐ ಎಸ್.ಎಂ ಪಾಟೀಲ್, ಕೃಷಿ ಇಲಾಖೆ ಸಹಾಯಕ ನಿರ್ಧೇಶಕ ಸುನೀಲ್ ಕುಮಾರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಾಲರಾಜ, ಬಿಸಿಎಂ ಅಧಿಕಾರಿ ಚೆನ್ನಪ್ಪಗೌಡ ಚೌದ್ರಿ, ಪಶು ಇಲಾಖೆ ಅಧಿಕಾರಿ ಅಣ್ಣಾರಾವ್, ಅಕ್ಷಾರ ದಾಸೋಹ ಅಧಿಕಾರಿ ಮಹಾದೇವಿ, ಶಿವಪುತ್ರ ಜವಳಿ, ವೆಂಕೋಬಾ, ಶಿವುಕುಮಾರ ತಳವಾರ, ಮಹಾದೇವ ದಿಗ್ಗಿ, ಯಲ್ಲಪ್ಪ ದೊಡ್ಮನಿ, ಪಿಎಸ್‌ಐ ಶಶಿಧರ, ಮರೆಪ್ಪ ಕನ್ಯಾಕೊಳ್ಳುರ, ಕಾಳಪ್ಪ ಬಡಿಗೇರ, ಭಿಮರಾಯ ದೊಡ್ಮನಿ, ನಿಂಗಪ್ಪ ದೊಡ್ಮನಿ, ಹನಮಂತ ಕುಳಗೇರಿ, ನಾಗರಾಜ ಕೊಡಮನಹಳ್ಳಿ, ಬೀಮಾಶಂಕರ ಗುಂಡಹಳ್ಳಿ, ಸಿದ್ದಪ್ಪ ಕೊಡಮನಹಳ್ಳಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

 

About the Author

Praja Vahini

Editor

View All Posts

Spread the love

Post navigation

Previous: ಸಾಹುಕಾರನ ಲಂಚ್ ಸೀಕ್ರೇಟ್  ಏನು?
Next: ಭೋವಿ ಮಠದ ಸ್ವಾಮೀಜಿ ಆಶೀರ್ವಾದ ಪಡೆದ ಚಂದ್ರಪ್ರಭ

Views:

269

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.