ಬೆಂಗಳೂರು: ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಕುರ್ಚಿ ಪೈಪೋಟಿ ಸಚಿವರಗಳ ಮಧ್ಯೆ ಜೋರಾಗಿ ನಡೆಯುತ್ತಿದ್ದು, ಈಗಾಗಲೇ ಗೃಹ ಸಚಿವ ಜಿ ಪರಮೇಶ್ವರ್ ಅವರು ಡಿನ್ನರ್ ಮೀಟಿಂಗ್ ಮಾಡಿದ್ದರು.
ಗೃಹ ಸಚಿವ ಜಿ ಪರಮೇಶ್ವರ್ ಅವರು ಡಿನ್ನರ್ ಮೀಟಿಂಗ್ ಮಾಡಿರುವ ಬೆನ್ನಲ್ಲೇ ಮತ್ತೆ ಇದೀಗ ಸಚಿವ ಸತೀಶ್ ಜಾರಕಿಹೊಳಿಯವರು ಕೂಡ ಖಾಸಗಿ ಹೋಟೆಲ್ ನಲ್ಲಿ ಆಪ್ತರ ಸಮ್ಮುಖದಲ್ಲಿ ಲಂಚ್ ಮೀಟಿಂಗ್ ಮಾಡಿದ್ದಾರೆ.
ಹೌದು, ಸತೀಶ್ ಜಾರಕಿಹೊಳಿ ತಮ್ಮ ಆಪ್ತ ಶಾಸಕರ ಜೊತೆ ಖಾಸಗಿ ಹೋಟೆಲ್ನಲ್ಲಿ ಲಂಚ್ ಮೀಟಿಂಗ್ ನಡೆಸಿರುವುದು ಮತ್ತಷ್ಟು ಊಹಾಪೋಹಗಳಿಗೆ ಕಾರಣವಾಗಿದೆ. ಜಾರಕಿಹೊಳಿ ತಮ್ಮ ಬಣದ ಶಾಸಕರೊಂದಿಗೆ ಚರ್ಚೆ ನಡೆಸಿರುವುದು ಹೊಸ ರಾಜಕೀಯ ಕಸರತ್ತಿನ ಸಂದೇಶ ನೀಡಿದೆ. ಇದನ್ನೂ ಓದಿ: ದೇಶದಲ್ಲಿರುವ ಸಂವಿಧಾನ ವಿರೋಧಿ ಮನುವಾದಿಗಳನ್ನು ಗುರುತಿಸಿ: ಸಿಎಂ
ನಿನ್ನೆಯಷ್ಟೇ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜತೆ ಸತೀಶ್ ಜಾರಕಿಹೊಳಿ ನಡೆಸಿದ ಚರ್ಚೆಯೂ ರಾಜಕೀಯ ವಲಯದಲ್ಲಿ ಗಮನಸೆಳೆದಿತ್ತು. ಸಿಎಂ ಸ್ಥಾನಕ್ಕೆ ಬೆಂಬಲ ಕೋರಿ ಡಿಕೆಶಿ ಜಾರಕಿಹೊಳಿ ಸಂಪರ್ಕಿಸಿದ್ದರೆಂದು ಹೇಳಲಾಗ್ತಿದೆ. ಪಕ್ಷದ ಮೇಲ್ನೋಟದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಜೋರಾಗಿರುವಾಗಲೇ ನಡೆಯುತ್ತಿರುವ ಈ ಅನೌಪಚಾರಿಕ ಸಭೆಗಳು ಕಾಂಗ್ರೆಸ್ ಒಳರಾಜಕೀಯದಲ್ಲಿ ಹೊಸ ಕುತೂಹಲ ಮೂಡಿಸಿವೆ.
