ಬೆಂಗಳೂರು: ನಟ ದ್ರುವ ಸರ್ಜಾ ಹಾಗೂ ರಚಿತಾ ರಾಮ್ ನಟಿಸಿರುವ ಕ್ರಿಮಿನಲ್ ಸಿನಿಮಾ ಉತ್ತರ ಕರ್ನಾಟಕದ ಭಾಷೆಯಲ್ಲಿ ಇಡಿ ಸಿನಿಮಾ ತಯಾರಾಗಿದ್ದು, ಉತ್ತರ ಕರ್ನಾಟಕ ಮಂದಿಯನ್ನು ರಂಜಿಸಲು ನಾನು ರೆಡಿಯಾಗಿದ್ದೇನೆ ಎಂದು ದ್ರುವ ಸರ್ಜಾ ಹೇಳಿದ್ದಾರೆ.
ಕ್ರಿಮಿನಲ್ ಸಿನಿಮಾದ ಇವೆಂಟ್ ನಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಹಾವೇರಿಯ ಹಾನಗಲ್ ನಲ್ಲಿ ನಡೆದ ಪ್ರೇಮ ಕಥೆಯಾಧಾರಿತ ಸಿನಿಮಾ ಮಾಡ್ತಿದ್ದೀನಿ. 99% ಸ್ಟೋರಿ ಏನಿದೆ ಅದೇ ತರ ಶೂಟ್ ಮಾಡ್ತೀವಿ. ಭರ್ಜರಿಯಲ್ಲಿ ತಾಯಿ ಆದ ನಂತ್ರ ತಾರಮ್ಮ ಮತ್ತೆ ಅಮ್ಮನಾಗಿ ಕಾಣಿಸಿಕೊಳ್ತಿದ್ದಾರೆ. ರಚಿತಾ ಭರ್ಜರಿ ನಂತ್ರ ಟಚ್ ಅಲ್ಲಿ ಇದ್ವಿ. ಕಥೆ ಕೇಳಿದ ಮೇಲೆ ರಚಿತಾಗೆ ಹೇಳ್ದೆ ಅವರು ಕೂಡಾ ಒಪ್ಪಿಕೊಂಡ್ರು. ತುಂಬಾನೇ ಯುನಿಕ್ ಸಬ್ಜೆಕ್ಟ್.. ಇಡಿ ಸಿನಿಮಾ ಉತ್ತರ ಕರ್ನಾಟಕದ ಭಾಷೆಯಲ್ಲೇ ಇರುತ್ತೆ ಅದಕ್ಕಾಗಿ ತಯಾರಿ ಮಾಡಿಕೊಳ್ತಿದ್ದೀನಿ ಎಂದು ಹೇಳಿದರು.
ಮಾತು ಮುಂದುವರೆಸಿ ಮಾರ್ಚ್ ಅಷ್ಟರಲ್ಲೇ ಸಿನಿಮಾ ಮುಗಿಸ್ಬೇಕು ಅಂತಾ ಪ್ಲ್ಯಾನ್ ಕೂಡಾ ಮಾಡಿದ್ದೇವೆ. ಇನ್ಮೇಲೆ ಒಂದು ಸಿನಿಮಾ ಮುಗಿತಿದ್ದಂತೆ ಮತ್ತೊಂದು ಸಿನಿಮಾ ಒಪ್ಕೊತೀನಿ. ಬೇಗ ಬೇಗ ಸಿನಿಮಾ ಮಾಡ್ತೀನಿ ಎಂದು ಧ್ರುವ ಸರ್ಜಾ ಹೇಳಿದ್ದಾರೆ. ಇದನ್ನೂ ಓದಿ: ನಿರೂಪಣೆ ವೃತ್ತಿಗೆ ಅನುಶ್ರೀ ನಿವೃತ್ತಿ!?
ನಂತರ ನಟಿ ರಚಿತಾ ರಾಮ್ ಮಾತನಾಡಿ, ನಾನು ಕೂಡ ಉತ್ತರ ಕರ್ನಾಟಕದ ಹುಡುಗಿಯಾಗಿ ಈ ಸಿನಿಮಾದಲ್ಲಿ ನಿಮ್ಮ ಮುಂದೆ ಬರಲಿದ್ದೇನೆ. ಕ್ರಿಮಿನಲ್ ಸಿನಿಮಾವನ್ನು ನೋಡಿ ಉತ್ತರ ಕರ್ನಾಟಕದ ಮಂದಿ ನಮ್ಮನ್ನು ಹರಿಸುತ್ತಾರೆ ಎಂದು ಹೇಳಿದರು.
